Home_Page_Advt
Home_Page_Advt
Home_Page_Advt

ಅರಿಯಡ್ಕ: ಜಾರತ್ತಾರುನಲ್ಲಿ ನೂತನ ಮದ್ರಸ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅರಿಯಡ್ಕ ನೂರುಲ್ ಹುದಾ ಮಸೀದಿ ಜಾರತ್ತಾರ್ ಹಾಗೂ ಹಮಾಝ್ ಫ್ರೆಂಡ್ಸ್ ಅರಿಯಡ್ಕ ಇದರ ವತಿಯಿಂದ ನೂತನವಾಗಿ ಮದ್ರಸ ಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮವು ಜೂ.12 ರಂದು ಅರಿಯಡ್ಕದ ಜಾರತ್ತಾರು ನೂರುಲ್ ಹುದಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಿಯಡ್ಕ ಜಮಾಅತ್ ಕಮೀಟಿ ಅಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ವಹಿಸಿದ್ದರು. ಉಮರ್ ಮುಸ್ಲಿಯಾರ್ ನಂಜೆ ಕಾರ್ಯಕ್ರಮದಲ್ಲಿ ದುವಾ ಆಶೀರ್ವಚನ ಮಾಡಿದರು. ಅರಿಯಡ್ಕ ಜುಮಾ ಮಸೀದಿ ಖತೀಬರಾದ ಅಬ್ದುಲ್ ಜಲೀಲ್ ಸಖಾಫಿಯವರು ಮದ್ರಸವನ್ನು ಉದ್ಘಾಟಿಸಿ ಮಾತನಾಡಿ, ಪುಟಾಣಿ ಮದ್ರಸಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ನೂರುಲ್ ಹುದಾ ಮದ್ರಸ ತರಗತಿ ಅಧ್ಯಾಪಕ ಹಮೀದ್ ಮದನಿ ಹಾಗೂ ಮುಖ್ಯ ಅತಿಥಿಯಾಗಿ ಆಗಮಿಸಿದ ಉಮರ್ ದಾರಿಮಿ ಸಾಲ್ಮರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಅತಿಥಿಗಳಾಗಿ ಆಗಮಿಸಿದ ಪಿಎಂ ಮೂಸೆ ಕುಂಞಿ, ಫಾರೂಕ್ ಆರ್.ಕೆ.ಸಿ,ಸುಲೈಮಾನ್ ಪನೆಕ್ಕಳ, ಇಬ್ರಾಹಿಎ.ಆರ್, ಹಮಾಝ್ ಫ್ರೆಂಡ್ಸ್ ಅಧ್ಯಕ್ಷ ಮಹಮ್ಮದ್ ಎ.ಎಸ್ ಹಾಗೂ ಹಲವಾರು ನಾಯಕರು ಉಪಸ್ಥಿತರಿದ್ದರು. ಹಮಾಝ್ ಫ್ರೆಂಡ್ಸ್‌ನ ಪ್ರ. ಕಾರ್ಯದರ್ಶಿ ಇಸಾಕ್ ಅರಿಯಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.