
ನಿಡ್ಪಳ್ಳಿ : ಸರಕಾರಿ ಪ್ರೌಢಶಾಲೆ ಬೆಟ್ಟಂಪಾಡಿಯ ನಾಯಕನಾಗಿ ಹತ್ತನೇ ತರಗತಿಯ ವೈಭವ್, ಉಪನಾಯಕಿಯಾಗಿ ಒಂಬತ್ತನೇ ತರಗತಿಯ ಶ್ರೀಮಾ ಕಾರ್ಯದರ್ಶಿಯಾಗಿ ಹತ್ತನೇ ತರಗತಿಯ ನಿತಿನ್.ಬಿ ಆಯ್ಕೆಯಾದರು. ಶಾಲಾ ಸಂಸತ್ತಿಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ಜೂ.11 ರಂದು ವಿದ್ಯಾರ್ಥಿಗಳಿಂದ ಮತದಾನ ನಡೆಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಶ್ಯಾಮಲಾ. ಎಂ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು ಶಾಲಾ ದೈಹಿಕ ಶಿಕ್ಷಕಿ ಚಂದ್ರಕಲಾ ಕೆ. ವಿ ಅವರ ಮಾರ್ಗದರ್ಶನದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಹ ಶಿಕ್ಷಕರು ಸಹಕರಿಸಿದರು.