Home_Page_Advt
Home_Page_Advt
Home_Page_Advt

ಇನ್ನರ್ ವ್ಹೀಲ್ ಕ್ಲಬ್‌ನಿಂದ ಪರಿಸರ ಉಳಿಸಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1


ಪುತ್ತೂರು; ಇನ್ನರ್‌ವ್ಹೀಲ್ ಕ್ಲಬ್ ಪುತ್ತೂರು ಇದರ ವತಿಯಿಂದ ಜೂ.11ರಂದು ಪರಿಸರ ಉಳಿಸಿ ಕಾರ್‍ಯಕ್ರಮ ಜಿ.ಎಲ್. ಸಭಾಂಗಣದ ಬಳಿ ನಡೆಯಿತು.

‘ನಾನು ಒಬ್ಬನೇ ಒಂದು ವರ್ಷದಲ್ಲಿ 22 ಕಿಲೋ ಕಾರ್ಬನ್ ಡೈ ಆಕ್ಸೈಡ್‌ನ್ನು ಗ್ರಹಣ ಮಾಡುತ್ತೇನೆ. ನೀವು ನನ್ನನ್ನು ಬದುಕಲು ಬಿಡಿ’ ಎಂಬ ಧೈಯ ವಾಕ್ಯದೊಂದಿಗೆ ಇನ್ನರ್ ವ್ಹೀಲ್ ಕ್ಲಬ್ ಪುತ್ತೂರಿನ ಸಹೋದರಿಯರು ವೃಕ್ಷಕ್ಕೆ ರಾಖಿ ಕಟ್ಟುವ ಮೂಲಕ ಗಿಡ ಮರಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಚೆನ್ನಾಗಿ ಬದುಕಲು, ಉತ್ತಮ ಪರಿಸರವಾಗಲಿ ನಾವು ನಮ್ಮೆಲ್ಲರ ಆರೋಗ್ಯದ ಹಿತದೃಷ್ಠಿಯಿಂದ ಬಯಲಿನಲ್ಲಿ ಮಲ ಮೂತ್ರಗಳನ್ನು ವಿಸರ್ಜಿಸದೆ, ಶೌಚಾಲಯವನ್ನು ಬಳಸುತ್ತೇವೆ. ನೀರನ್ನು ವ್ಯರ್ಥ ಮಾಡದೇ ಮಿತವಾಗಿ ಬಳಸುತ್ತೇವೆ. ಮಳೆಯ ನೀರನ್ನು ಉಳಿಸುತ್ತೇವೆ. ನನ್ನ ಪರಿಸರವನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯವಂತರಾಗಿ ಬಾಳುತ್ತೇವೆ ಎಂದು ಪ್ರತಿಜ್ಞೆ ಸ್ವೀಕರಿಸಿದರು. ಅಧ್ಯಕ್ಷೆ ಪುಷ್ಪ ಕೆದಿಲಾಯ, ನಿಯೋಜಿತ ಅಧ್ಯಕ್ಷೆ ಸಹನಾ ಭಾವಿನ್, ಕಾರ್ಯದರ್ಶಿ ಶೋಭ ಕೊಳತ್ತಾಯ, ನಿಯೋಜಿತ ಕಾರ್ಯದರ್ಶಿ ವಿಜಯಲಕ್ಷ್ಮೀ, ಮಾಜಿ ಅಧ್ಯಕ್ಷರಾದ ವಿದ್ಯಾ ಆರ್. ಗೌರಿ, ಈಶ್ವರೀ ಗೋಪಾಲಕೃಷ್ಣ, ಕೆ.ಪಿ ಪುಷ್ಪ, ಸುಷ್ಮಾ ಜೈನ್,ಮಂಜುಳಾ ಭಾಸ್ಕರ್, ಶಂಕರಿ ಭಟ್ ಮತ್ತು ಮೀರಾ ರೈ ಮತ್ತು ಸದಸ್ಯರಾದ  ಅಶ್ವಿನಿ ಮುಳಿಯ, ಸೀಮಾ ನಾಗರಾಜ್ ಉಪಸ್ಥತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.