ನ.28-ಡಿ2 ರವರೆಗೆ ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ,ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ಯಕ್ಷಗಾನ ಬಯಲಾಟದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಅಳದಂಗಡಿ:  ಯಕ್ಷ ಬಳಗ ಬೆಳ್ತಂಗಡಿ ಆಶ್ರಯದಲ್ಲಿ ಯಕ್ಷ ಬಳಗ ಅಳದಂಗಡಿ ,ಉಜಿರೆ ,ಮರೋಡಿ ,ವೇಣೂರು ,ತಣ್ಣಿರುಪಂತ ವಲಯ ಸಮಿತಿಗಳ ಸಹಕಾರದೊಂದಿಗೆ  ನ .28  ರಿಂದ ಡಿ.2ರವರೆಗೆ  ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ,ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.

ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅಳದಂಗಡಿ ಅರಮನೆಯಲ್ಲಿ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಯಕ್ಷ ಬಳಗ ತಾಲೂಕು ಸಮಿತಿಯ ಗೌರವ ಅಧ್ಯಕ್ಷರಾದ ರಕ್ಷಿತ್ ಶಿವರಾಂ,ಅಧ್ಯಕ್ಷರಾದ ಸಂತೋಷ್ ಗೌಡ ವಳಂಬ್ರ ,ಕಾರ್ಯದರ್ಶಿ ನಿತ್ಯಾನಂದ ನಾವರ,ಕೋಶಾದಿಕಾರಿ ಶೇಖರ್ ಕುಕ್ಕೆಡಿ, ಅಳದಂಗಡಿ ವಲಯ ಸಮಿತಿಯ ಗೌರವ ಅಧ್ಯಕ್ಷರಾದ ಸಂಜೀವ ಪೂಜಾರಿ ಕೊಡಂಗೆ,ಅಧ್ಯಕ್ಷರಾದ ಸುಭಾಶ್ಚಂದ್ರ ರೈ ಪಡ್ಯೋಡಿ ಗುತ್ತು ಗೌರವ ಸಲಹೆಗಾರರಾದ ನಾಗಕುಮಾರ್ ಜೈನ್ ,ವಾಸುದೇವ ರಾವ್ ಸುಲ್ಕೇರಿ,ವಿಶ್ವನಾಥ ಪೂಜಾರಿ ಕುದ್ಯಾಡಿ,ಕೊರಗಪ್ಪ ಪೂಜಾರಿ ಸುಲ್ಕೇರಿ ,ರಮೇಶ್ ಎಸ್ ಎಮ್    ಮರೋಡಿ ವಲಯ ಸಮಿತಿಯ ಅಧ್ಯಕ್ಷರಾದ ಮುನಿರಾಜ್ ಜೈನ್ ,ಕಾರ್ಯ ಅಧ್ಯಕ್ಷರಾದ ನಾರಾಯಣ ಪೂಜಾರಿ ಉಚ್ಚೂರು ಹಾಗೂ ಪದಾಧಿಕಾರಿಗಳು ತಣ್ಣಿರುಪಂಥ ವಲಯ ಸಮಿತಿಯ ಕಾರ್ಯ ಅಧ್ಯಕ್ಷರಾದ ಜಯವಿಕ್ರಮ್ ಹಾಗೂ ಪದಾಧಿಕಾರಿಗಳು, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ  ವಿನುಶಾ ಪ್ರಕಾಶ್ , ಅಳದಂಗಡಿ ವಲಯ ಸಮಿತಿಯ ಕಾರ್ಯದರ್ಶಿ ವೀರೇಂದ್ರ ಕುಮಾರ್ ಜೈನ್ , ಕೋಶಾದಿಕಾರಿ ಚಂದ್ರಶೇಖರ್ ಅಳದಂಗಡಿ ,ಉಪಾಧ್ಯಕ್ಷರಾದ ರವೀಂದ್ರ ಅಮೀನ್ ಬಳಂಜ ,ಉಮೇಶ್ ಸುವರ್ಣ ,ಸುಲೇಮಾನ್ ಶಾಫಿ, ಹಾಗೂ ಸಮಿತಿಯ ಪ್ರಮುಖರು ಗ್ರಾಮ ಸಮಿತಿಯ ಪ್ರಮುಖರು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here