HomePage_Banner
HomePage_Banner
HomePage_Banner

ಉದನೆ: ನಿವೃತ್ತ ಮುಖ್ಯಶಿಕ್ಷಕ ದಿ.ಸೆಬಾಸ್ಟಿನ್ ಕೆ.ಎಸ್.ರವರಿಗೆ ಶ್ರದ್ದಾಂಜಲಿ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಶಿರಾಡಿ ಗ್ರಾಮದ ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲೆಯಲ್ಲಿ 34 ವರ್ಷಗಳ ಕಾಲ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ 2018ರಲ್ಲಿ ನಿವೃತ್ತರಾಗಿದ್ದು ಇತ್ತೀಚೆಗೆ ನಿಧನರಾದ ಸೆಬಾಸ್ಟೀನ್ ಕೆ.ಎಸ್.ರವರಿಗೆ ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲೆ ಹಾಗೂ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆ ವತಿಯಿಂದ ಶಾಲಾ ವಠಾರದಲ್ಲಿ ಶ್ರದ್ದಾಂಜಲಿ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸೈಂಟ್ ಆಂಟನೀಸ್ ಎಜುಕೇಶನ್ ಸೊಸೈಟಿಯ ನಿರ್ದೇಶಕರಾದ ಬಿಷಪ್ ಯಾಕೂಬ್ ಮಾರ್ ಆಂಥೋನೀಸ್‌ರವರು ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಸೆಬಾಸ್ಟಿನ್‌ರವರ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಎಂದರು. ಉದನೆ ಸೈಂಟ್ ಆಂಟನೀಸ್ ಪ್ರೌಢಶಾಲೆಯ ನಿವೃತ್ತ ಸ್ಥಾಪಕ ಮುಖ್ಯಗುರು ಚಾಕೋ ವರ್ಗೀಸ್‌ರವರು ದಿ.ಸೆಬಾಸ್ಟಿನ್‌ರವರೊಂದಿಗಿನ ವಿದ್ಯಾರ್ಥಿ ಜೀವನದಿಂದ ಹಿಡಿದು ತಮ್ಮ ಸಹೋದ್ಯೋಗಿ ಜೀವನದ ನೆನಪುಗಳನ್ನು ಬಿಚ್ಚಿಟ್ಟು ಅವರ ಆತ್ಮಕ್ಕೆ ಚಿರಶಾಂತಿ ಕೋರಿದರು. ಸಂಚಾಲಕರಾದ ರೆ.ಫಾ ಹನಿ ಜೇಕಬ್‌ರವರು ಮಾತನಾಡಿ, ಸೆಬಾಸ್ಟಿನ್‌ರವರ ಶಿಸ್ತು ಬದ್ಧ ಜೀವನ, ಪಾಠ ಬೋಧನೆಯಲ್ಲಿನ ಪಾಂಡಿತ್ಯ, ವಿದ್ಯಾರ್ಥಿ,ಪೋಷಕರ ಮತ್ತು ಶಿಕ್ಷಕರ ನಡುವಿನ ಅವರ ಉತ್ತಮ ಒಡನಾಟವನ್ನು ಕೊಂಡಾಡಿದರು. ಸೈಂಟ್ ಆಂಟನೀಸ್ ಪ್ರೌಢಶಾಲೆಯ ಮುಖ್ಯಗುರು ಶ್ರೀಧರ ಗೌಡರವರು ಮಾತನಾಡಿ, ಸೆಬಾಸ್ಟಿನ್‌ರವರ ಜೊತೆಗಿನ ಸಹೋದರ ಭಾವವನ್ನು ನೆನಪಿಸಿಕೊಂಡು ಅವರ ಗುಣಗಾನ ಮಾಡಿದರು. ಬಿಷಪ್ ಪಬ್ಲಿಕ್ ಸ್ಕೂಲ್ ಮುಖ್ಯಗುರು ಸಿಬಿಚನ್ ಟಿ.ಸಿಯವರು ಮೃತರ ಗುಣಗಾನ ಮಾಡಿದರು. ದಿ.ಸೆಬಾಸ್ಟಿನ್‌ರವರ ಕಿರಿಯ ಸಹೋದರ ಸನ್ನಿ ಕೆ.ಎಸ್‌ರವರು ಮಾತನಾಡಿ, ಸೆಬಾಸ್ಟಿನ್‌ರವರ ಸಮಾಜದ ಜೊತೆಗಿನ ಒಡನಾಟ, ಶಾಲೆಯ ಮೇಲಿನ ಪ್ರೀತಿಯನ್ನು ನೆನಪಿಸಿಕೊಂಡರು.

ಸಭೆಯಲ್ಲಿ ಮೃತರ ಕುಟುಂಬಸ್ಥರು, ನಿವೃತ್ತ ಶಿಕ್ಷಕರು, ಆಂಗ್ಲ ಮಾಧ್ಯಮ ವಿಭಾಗದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಭಾಸ್ಕರ ಗೌಡ, ಶಾಲೆಯ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು,ವಿದ್ಯಾರ್ಥಿಗಳು, ಪಾಲಕರು, ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕ ಬಾಲಕೃಷ್ಣ ಗೌಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.