ನೆಲ್ಯಾಡಿ : ‘ಸ್ವಚ್ಛ ಮೇವ ಜಯತೇ’ ಆಂದೋಲನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿಯಲ್ಲಿ ಒಂದು ತಿಂಗಳ ಕಾಲ ನಡೆಯುವ ಸ್ವಚ್ಛ ಮೇವ ಜಯತೇ ಆಂದೋಲನಕ್ಕೆ ನೆಲ್ಯಾಡಿ ಗ್ರಾ.ಪಂ.ನಲ್ಲಿ ಚಾಲನೆ ನೀಡಲಾಯಿತು. ಇದರೊಂದಿಗೆ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ನೆಲ್ಯಾಡಿ ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಅರಣ್ಯ ಇಲಾಖೆಯ ವಿವಿಧ ಸಸಿಗಳ ವಿತರಣೆ ಮೂಲಕ ಪರಿಸರ ಜಾಗೃತಿ ಮತ್ತು ಸ್ವಚ್ಛತಾ ಆಂದೋಲನ ಕಾರ್‍ಯಕ್ರಮ ನೆಲ್ಯಾಡಿ ಗ್ರಾ.ಪಂ., ಜೇಸಿಐ ನೆಲ್ಯಾಡಿ, ಬದ್ರಿಯಾ ಜುಮಾ ಮಸೀದಿ ನೆಲ್ಯಾಡಿ, ಜೂನಿಯರ್ ಜೇಸಿ ನೆಲ್ಯಾಡಿ, ಯಂಗ್ ಮೆನ್ ಎನೋಷಿಯೇಶನ್ ನೆಲ್ಯಾಡಿ, ಅಂಗನವಾಡಿ ಕೇಂದ್ರಗಳು, ಆಶಾಕಾರ್‍ಯಕರ್ತೆಯರ ಸಹಯೋಗದಲ್ಲಿ ನಡೆಯಿತು.

ಗಿಡ ನೆಡುವ ಮೂಲ ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರು ಮಾತನಾಡಿ, ಪರಿಸರವನ್ನು ಸ್ವಚ್ಛವಾಗಿರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಪ್ರಕೃತಿ ಸಮತೋಲನದಲ್ಲಿದ್ದಾಗ ಮಾನವನ ಜೀವನವೂ ಸುಗಮವಾಗಿ ನಡೆಯುತ್ತದೆ. ಪ್ರಕೃತಿಯನ್ನು ಉಳಿಸಿ ಜೀವರಾಶಿಗಳನ್ನು ಉಳಿಸಬೇಕೆಂಬುದು ನಮ್ಮ ಕರ್ತವ್ಯವಾಗಿದೆ. ಅದರೊಂದಿಗೆ ಸ್ವಚ್ಛತಾ ಆಂದೋಲನ ನಮ್ಮ ಗ್ರಾಮದ ಮೂಲೆ ಮೂಲೆಯಲ್ಲಿ ನಡೆದು ಸ್ವಚ್ಛಾ ನೆಲ್ಯಾಡಿ ಅಭಿನಯವನ್ನು ಸಮರ್ಪಕವಾಗಿ ಗ್ರಾಮ ಪಂಚಾಯತ್‌ನ ಮೂಲಕ ಅನುಷ್ಠಾನಗೊಳಿಸಬೇಕಾಗಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಮಾತನಾಡಿ, ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಎರಡು ಸ್ವರ್ಗಕ್ಕಿಂತಲೂ ಮಿಗಿಲಾದುದು. ಪ್ರಕೃತಿ ಮಾತೆಯನ್ನು ಸಂರಕ್ಷಿಸಿ ಆರಾಧನೆ ಮಾಡಬೇಕಾದುದು ನಮಗೆ ಅನಿವಾರ್ಯ ಮತ್ತು ಕರ್ತವ್ಯವೂ ಆಗಿದೆ ಪ್ರಕೃತಿಯೊಂದಿಗೆ ನಮ್ಮ ಜೀವನ ಅವಿನಾಭಾವ ಸಂಬಂಧವನ್ನು ಹೊಂದಿದೆ. ಅದರೊಂದಿಗೆ ಜೂನ್ ತಿಂಗಳಾದ್ಯಂತ ನಡೆಯುವ ಸ್ವಚ್ಛತಾ ಆಂದೋಲನವನ್ನು ನೆಲ್ಯಾಡಿ ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೈಜೋಡಿಸಬೇಕೆಂದು ಮನವಿ ಮಾಡಿದರು. ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ ಶ್ರೀ ರಾಮ ಶಾಲೆಯ ಅಧ್ಯಕ್ಷ ರವಿಚಂದ್ರ ಹೊಸವೊಕ್ಲುರವರು ಪರಿಸರ ಜಾಗೃತಿಯ ಬಗ್ಗೆ ಮಾಹಿತಿ ನೀಡಿದರು.

ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ನೆಲ್ಯಾಡಿ ಜೇಸಿಐ ಅಧ್ಯಕ್ಷ ಇಸ್ಮಾಯಿಲ್, ನೆಲ್ಯಾಡಿ ಬದ್ರಿಯಾ ಜುಮಾ ಮಸೀದ್‌ನ ಕಾರ್‍ಯದರ್ಶಿ ಅಬ್ದುಲ್ ಖಾದರ್, ಯಂಗ್ ಮೆನ್ಸ್ ಎಸೋಷಿಯೇಶನ್ಸ್ ಅಧ್ಯಕ್ಷ ಅಶ್ರಫ್ ಪಡ್ಡಡ್ಕ, ಜೂನಿಯರ್ ಜೇಸಿ ಅಧ್ಯಕ್ಷ ವಿನ್ಯಾಸ್ ಬಂಟ್ರಿಯಾಲ್, ಗ್ರಾ.ಪಂ. ಸದಸ್ಯರಾದ ಕೆ.ಪಿ ಅಬ್ರಹಾಂ, ಅಬ್ದುಲ್ ಹಮೀದ್, ತೀರ್ಥೇಶ್ವರ ಉರ್ಮಾನು, ಚಿತ್ರಾ ರಾಮನಗರ, ಮೋಹಿನಿ, ಲೈಲಾ ತೋಮಸ್, ಅಂಗನವಾಡಿ ಕಾರ್‍ಯಕರ್ತೆಯರಾದ ಪುಷ್ಪಾವತಿ, ವನಜಾ, ತುಳಸಿ, ಕುಸುಮಾವತಿ, ಆಶಾ ಕಾರ್‍ಯಕರ್ತೆಯರಾದ ಜಾನಕಿ, ಪೂರ್ಣಿಮಾ, ವಿಜಯಾ, ಪಂಚಾಯತ್ ಸಿಬ್ಬಂದಿಗಳಾದ ಲಲಿತಾ, ಭವ್ಯ, ಲೀಲಾವತಿ, ಸೋಮಶೇಖರ, ಗಿರೀಶ್, ಭಾಗವಹಿಸಿದ್ದರು. ಕಾರ್‍ಯದರ್ಶಿ ದೇವರಾಜ್ ಸ್ವಾಗತಿಸಿದರು. ಪಿಡಿಒ ಮಂಜುಳಾ ಪ್ರಸ್ತಾವಿಕವಾಗಿ ಮಾತನಾಡಿ, ಪರಿಸರ ಸಂರಕ್ಷಣೆಯ ಮತ್ತು ಸ್ವಚ್ಛತೆಯ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.