- 30ಕ್ಕೂ ಅಧಿಕ ಹಲಸಿನ ಉತ್ಪನ್ನಗಳ ಮಳಿಗೆಗಳು-ಮೌಲ್ಯವರ್ಧಿತ ವಿಚಾರಗಳು
ಪುತ್ತೂರು: ಹಲಸಿನ ಉತ್ಪನ್ನಗಳು, ವಿವಿಧ ಜಾತಿಯ ಹಲಸಿನ ಗಿಡಗಳ ಪ್ರದರ್ಶನ ಮತ್ತು ಮಾರಾಟವನ್ನೊಳಗೊಂಡ 2 ದಿನಗಳು ನಡೆಯುವ ಹಲಸು ಸಾರ ಮೇಳ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜೂ. 15ರಂದು ಉದ್ಘಾಟನೆಗೊಂಡಿದೆ. ಹಲಸು ಸ್ನೇಹ ಸಂಗಮ ಮತ್ತು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಜೆ.ಸಿ.ಐ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಮೇಳದಲ್ಲಿ 30 ಕ್ಕೂ ಅಧಿಕ ಹಲಸಿನ ಉತ್ಪನ್ನಗಳದ್ದೆ ಮಳಿಗಗಳು ಕಂಡು ಬಂದಿದ್ದು, ಸ್ಥಳದಲ್ಲೇ ತಯಾರಿಸಿ ಕೊಡುವ ಬಿಸಿ ಬಿಸಿ ದೋಸೆ, ಹೋಳಿಗೆ ಸೇರಿದಂತೆ ಹಲಸಿನ ಕಬಾಬ್, ಚಡ್ಡಂಬಡೆ ಎಲ್ಲರಿಗೂ ಸವಿ ತಂದಿದೆ. ಮೇಳದಲ್ಲಿ ಹಲಸು ಹಪ್ಪಳದ ಚಾಟ್ ಹಾಗೂ ಹಲಸು ಕೇಸರಿಬಾತ್ ವಿಶೇಷವಾಗಿ ಕಂಡು ಬಂದಿತು.
ಮೇಳದಲ್ಲಿ ಸ್ಪೆಷಲ್: ಮೇಳದಲ್ಲಿ ವಿಶೇಷವಾಗಿ ಹಲಸಿನ ಕಾಯಿ ಹಾಗೂ ಹಣ್ಣಿನ ದೋಸೆ, ಹಲಸಿನ ಬೀಜದ ಹೋಳಿಗೆ, ಹಲಸಿನ ಹಣ್ಣಿನ ಹಲ್ವ, ಹಲಸಿನ ಹಪ್ಪಳ ಚಾಟ್, ಗುಜ್ಜೆ ಮಂಚೂರಿ, ಕಬಾಬ್, ಹಲಸು ರೋಸ್ಟ್ , ಪಲಾವ್, ಪೋಡಿ, ಹಲಸಿನ ಬೀಜದ ಅಂಬೊಡೆ, ಹಲಸಿನಕಾಯಿ ಅಂಬೊಡೆ, ಹಲಸಿನಬೀಜದ ಜಾಮೂನ್ , ಹಲಸಿನಬೀಜದ ಬಿಸ್ಕೆಟ್ , ಇನ್ಟಂಟ್ ರಸಂ ಪೌಡರ್, ಹಲಸಿನಹಣ್ಣಿನ ಕೇಸರಿಬಾತ್ , ಕಲರ್ ರಹಿತ ಹಲಸಿನಹಪ್ಪಳ, ತೆಂಗಿನ ಎಣ್ಣೆಯಲ್ಲಿ ಕರಿದ ಹಲಸಿನ ಚಿಪ್ಸ್, ಹಲಸಿನ ಬೀಜದ ಬಿಸ್ಕೆಟ್ , ಉಪ್ಪುಸೊಳೆ ವಡೆ ಹಲಸಿನ ಐಸ್ ಕ್ರೀಂ , ಕ್ಯಾಂಡಿ, ಹಲಸಿನ ಬೀಜದ ಪತ್ರೊಡೆ, ಪಾಯಸ, ಗಟ್ಟಿ, ಕಡುಬು, ಹಲಸಿನ ಬೀಜದ ಬರ್ಫಿ ಮೇಳದಲ್ಲಿ ಕಂಡು ಬಂದಿದ್ದು, ಹಲಸು ಉತ್ಪನ್ನಗಳ ಕುರಿತು ಮಾತುಕತೆ ನಡೆಯಲಿದೆ. ಗೋಷ್ಟಿಗಳು ನಡೆಯುತ್ತಿವೆ.