ಅಳದಂಗಡಿಯಲ್ಲಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹ, ಶಾಸಕ ಹರೀಶ್ ಪೂಂಜರಿಂದ ಸಹಕಾರಿ ಧ್ವಜಾರೋಹಣ

0

ಅಳದಂಗಡಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ನಿಯಮಿತ, ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಬೆಳ್ತಂಗಡಿ ತಾಲೂಕು ಸಹಕಾರಿ ಯೂನಿಯನ್ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳು ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ತಾಲೂಕಿನ ಇತರ ಎಲ್ಲಾ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ, ಅಳದಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಇದರ ಆಶ್ರಯದಲ್ಲಿ ಯುವ ಜನ, ಮಹಿಳಾ ಸಬಲ ವರ್ಗ ಮತ್ತು ಆರೋಗ್ಯಕ್ಕಾಗಿ ಸಹಕಾರ ಸಂಸ್ಥೆ ಎಂಬ ವಿಷಯದಲ್ಲಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹವು ನ.19 ರಂದು ಶ್ರೀ ಗುರು ಸಭಾಭವನ, ಸ್ವರಾಜ್ ಟವರ್‍ಸ್ ಅಳದಂಗಡಿಯಲ್ಲಿ ಜರುಗುತ್ತಿದೆ.

ಸಹಕಾರಿ ಧ್ವಜಾರೋಹಣವನ್ನು ಶಾಸಕ ಹರೀಶ್ ಪೂಂಜರವರು ನೇರವೇರಿಸಿ ಶುಭಕೋರಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವ ಭಟ್ ಕಟ್ಟೂರು, ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು, ಸಿಇಒ ಮೀರಾ, ನಿರ್ದೇಶಕರುಗಳಾದ ಹೆಚ್ ಧರ್ಣಪ್ಪ ಪೂಜಾರಿ,ಗುರುಪ್ರಸಾದ್,ಪ್ರಶಾಂತ್ ಶೆಟ್ಟಿ, ಬಾಲಕೃಷ್ಣ ಪೂಜಾರಿ,ಶಶಿಧರ ಶೆಟ್ಟಿ ಎ,ಧರ್ಣಪ್ಪ,ಕೆಂಪ,ಗುಲಾಬಿ ಎಮ್.ಎನ್,ಸುಂದರಿ,ಜಿನ್ನಪ್ಪ ಪೂಜಾರಿ,ಪ್ರಮುಖರಾದ ಸಂತೋಷ್ ಕುಮಾರ್ ಕಾಪಿನಡ್ಕ,ಅಳದಂಗಡಿ ಪಂಚಾಯತ್ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಹರೀಶ್ ಆಚಾರ್ಯ ಹಾಗೂ ಸಂಘದ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here