HomePage_Banner
HomePage_Banner
HomePage_Banner

7 ವರ್ಷಗಳ ಬಳಿಕ ಮುಕ್ತಿ ಕಂಡ ಕುಡಿಯುವ ನೀರಿನ ಸಮಸ್ಯೆ

Puttur_Advt_NewsUnder_1
Puttur_Advt_NewsUnder_1
 ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್ ವಿದ್ಯುಕ್ತವಾಗಿ ಚಾಲನೆ ನೀಡುವುದು

ಕಡಬ: ಕಡಬ ಗ್ರಾ.ಪಂ ವ್ಯಾಪ್ತಿಯ ಹೊಯಿಗೆಕೆರೆ ಎಂಬಲ್ಲಿ ಕಳೆದ 7 ವರ್ಷಗಳಿಂದ ತಲೆದೂರಿದ್ದ ಕುಡಿಯುವ ನೀರಿನ ಸಮಸ್ಯೆಗೆ ಕೊನೆಗೂ ಮುಕ್ತಿ ದೊರೆತಿದೆ.7 ವರ್ಷದ ಹಿಂದೆ ಸುಮಾರು 9 ಲಕ್ಷ ವೆಚ್ಚದಲ್ಲಿ ಹೊಯಿಗೆಕೆರೆಯ ಫಲಾನುಭವಿಗಳಿಗಾಗಿ ಅನುಷ್ಠಾನಗೊಂಡಿದ್ದ ಕುಡಿಯುವ ನೀರಿನ ಯೋಜನೆ ಕೊಳವೆ ಬಾವಿ ಸಮಸ್ಯೆಯಿಂದಾಗಿ ನಿರುಪಯುಕ್ತಗೊಂಡು ನೆನೆಗುದಿಗೆ ಬಿದ್ದಿತ್ತು. ಇದೀಗ ಇಲ್ಲಿನ ಜಿ.ಪಂ ಸದಸ್ಯರಾದ ಪಿ.ಪಿ ವರ್ಗೀಸ್‌ರವರ ಅನುದಾನದಲ್ಲಿ ಮತ್ತೇ ಕೊಳವೆ ಬಾವಿ ಕೊರೆಸಿ ಬರಪೂರ ನೀರಿನೊಂದಿಗೆ ಫಲಾನುಭವಿಗಳ ಮಹಾದಾಸೆ ಈಡೇರಿದ್ದು ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್‌ರವರು ಜೂ. 14 ವಿದ್ಯುಕ್ತವಾಗಿ ಚಾಲನೆ ನೀಡಿದರು.

ಕಳೆದ ಜಿ.ಪಂ ಸದಸ್ಯೆ ಕುಮಾರಿ ವಾಸುದೇವನ್‌ರವರ ಅನುದಾನದಲ್ಲಿ ಕಡಬ ಗ್ರಾಮದ ಹೊಗೆಕೆರೆಯಲ್ಲಿ ಕುಡಿಯುವ ನೀರಿನ ಯೋಜನೆಯಲ್ಲಿ ಟ್ಯಾಂಕ್ ನಿರ್ಮಿಸಿ ಪೈಪುಲೈನ್ ಅಳವಡಿಸಿದ್ದರೂ 2, 3 ಕಡೆಗಳಲ್ಲಿ ಬೋರ್‌ವೆಲ್ ತೆಗೆದರು ನೀರು ಸಿಗದೆ ಫಲಾನುಭವಿಗಳಿಗೆ ಪ್ರಯೋಜನವಾಗಿಲ್ಲ. ಈ ಬಗ್ಗೆ ಆ ಭಾಗದ ಫಲನುಭವಿಗಳು ಸತತ ಹೋರಾಟ ನಡೆಸಿದ್ದರು ಕಳೆದ 7 ವರ್ಷಗಳಲ್ಲಿ 7 ಗ್ರಾ.ಪಂ ಅಧ್ಯಕ್ಷರನ್ನು ಕಂಡ ಈ ಯೋಜನೆ ಈಗ ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರರವರ ಮುಖಾಂತರ ಪಲಶ್ರುತಿಯಾಗಿದೆ. ಈ ಹಿಂದೆ ಕಾಮಗಾರಿ ಪ್ರಾರಂಭಿಸಿದ ಸಮಯದಲ್ಲಿ ನೀಲಾವತಿ ಶಿವರಾಂ,ಅಧ್ಯಕ್ಷರಾಗಿದ್ದರೆ ಬಳಿಕ ಜ್ಯೋತಿ ಡಿ.ಕೋಲ್ಪೆ, ಅಶ್ರಪ್ ಶೇಡಿಗುಂಡಿ, ಸಾವಿತ್ರಿ. ಟಿ ನಾಕ್, ಹನೀಫ್ ಕೆ.ಎಂ, ಹಾಗೂ ಫಝಲ್ ಕೋಡಿಂಬಾಳರವರು ಅಧ್ಯಕ್ಷರಾಗಿದ್ದು ಕುಡಿಯುವ ನೀರಿನ ಯೋಜನೆ ಶ್ರಮಿಸಿದ್ದರು. ಆದರೆ ಈಗ ಜಿ.ಪಂ ಸದಸ್ಯೆ ಪಿ.ಪಿ ವರ್ಗೀಸ್‌ರವರ ಮುತುವರ್ಜಿಯಿಂದ ಕಡಬ ತಾಲೂಕು ಕಚೇರಿ ಹತ್ತಿರ ಅಂತರ್ಜಲ ತಜ್ಞರಿಂದ ನೀರಿನ ಜ್ವಳ ಪರಿಶೀಲಿಸಿ ಬೋರ್‌ವೆಲ್ ತೆಗೆಸಿದ್ದು ಅಲ್ಲಿ ಉತ್ತಮ ನೀರಿನ ಅರಿವು ದೊರೆತ್ತಿದ್ದು ಹೊಗೆಕೆರೆಯಲ್ಲಿರುವ ನೀರಿನ ಟ್ಯಾಂಕ್‌ಗೆ ನೀರು ಹಾಯಿಸುವ ಮೂಲಕ ಕಳೆದ ೭ ವರ್ಷಗಳ ಯೋಜನೆ ಪಲಶ್ರುತಿಯಾಗುವಂತೆ ಮಾಡಿದ್ದು ಆ ಭಾಗದವರ ಸಂತೋಷ ಮುಗಿಲು ಮುಟ್ಟಿದ್ದು ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್, ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಕಜೆಮೂಲೆರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರ, ಸದಸ್ಯರಾದ ಅಶ್ರಪ್ ಶೇಡಿಗುಂಡಿ, ಎ.ಎಸ್ ಶೆರಿಪ್, ವಿದ್ಯುತ್ ಗುತ್ತಿಗೆದಾರ ಜೋಸ್ ಪ್ರಕಾಶ್, ನೀರಿನ ನಿರ್ವಾಹಕ ಅಬೂಬಕ್ಕರ್, ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.