HomePage_Banner
HomePage_Banner
HomePage_Banner
HomePage_Banner

ಜನವರಿ ಅಂತ್ಯದೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ, ತಾ.ಪಂ ಆರ್ಥಿಕ ಸಮಿತಿ ಸಭೆಯಲ್ಲಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಸೂಚನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ ಇಲಾಖೆಗಳಿಗೆ ಈ ಸಾಲಿನಲ್ಲಿ ಮಂಜೂರುಗೊಂಡಿರುವ ವಿವಿಧ ಕಾಮಗಾರಿಗಳನ್ನು ಜನವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ತಾ.ಪಂನ ಆರ್ಥಿಕ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾ.ಪಂನ ವಿವಿಧ ಸಮಿತಿಗಳ ಸಭೆಯು ಜೂ.15ರಂದು ತಾ.ಪಂ ಸಭಾಂಗಣದಲ್ಲಿ ನಡೆಯಿತು. ಆರ್ಥಿಕ ಸಮಿತಿ ಸಭೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್.ರವರ ಪ್ರಸ್ತಾವಣೆಗೈಯುತ್ತಿರುವ ವೇಳೆ ಮಾತನಾಡಿದ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾ.ಪಂ ಅಧೀನದಲ್ಲಿರುವ ಎಲ್ಲಾ ಇಲಾಖೆಗಳಿಗೆ ವಿವಿಧ ಕಾಮಗಾರಿಗಳಿಗೆ ಮಂಜೂರುಗೊಂಡ ಅನುದಾನಗಳಿಗೆ ಕ್ರಿಯಾಯೋಜನೆ ನಡೆಸಿ ಶೀಘ್ರ ಟೆಂಡರ್ ಕರೆದು ಆಗಸ್ಟ್ ತಿಂಗಳಿಲ್ಲಿ ಕಾಮಗಾರಿ ಪ್ರಾರಂಭಗೊಂಡು ಎಲ್ಲಾ ಕಾಮಗಾರಿಗಳು ಜನವರಿ ಅಂತ್ಯದೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಸ್ತಾವಣೆ ಇಲ್ಲದೆ ಕಾಮಗಾರಿ-ಅಸಮಾದಾನ
ತಾಲೂಕಿನ ವಿವಿಧ ಶಾಲೆಗಳಲ್ಲಿ ದುರಸ್ಥಿ ಕಾಮಗಾರಿಗಳಿಗೆ ನಾವು ಪ್ರಸ್ತಾವಣೆ ಸಲ್ಲಿಸಿಲ್ಲ. ಹಾಗಿದ್ದರೂ ಕೆಲವೊಂದು ಶಾಲೆಗಳಲ್ಲಿ ದುರಸ್ಥಿ ಕಾಮಗಾರಿಗಳು ನಡೆದಿದೆ ಎಂದು ಸದಸ್ಯ ಶಿವರಂಜನ್ ಆರೋಪಿಸಿದರು. ಪ್ರತಿಕ್ರಿಯಿಸಿದ ಕಾರ್ಯನಿರ್ವಹಣಾಧಿಕಾರಿ ಜಗದೀಶ್‌ರವರು, ಚುನಾವಣಾ ಸಂದರ್ಭಲ್ಲಿ ಕೆಲವೊಂದು ಬೂತ್‌ಗಳಿದ್ದ ಶಾಲೆಗಳಲ್ಲಿ ತುರ್ತು ಅಗತ್ಯ ದುರಸ್ಥಿಗಳು ನಡೆಸುವಂತೆ ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ತುರ್ತು ದುರಸ್ಥಿ ನಡೆಸಲಾಗಿದೆ ಎಂದರು.

ಬೇಡಿಕೆ ಶಾಂತಿಗೋಡಿದ್ದು, ಕಾಮಗಾರಿ ಸರ್ವೆಯಲ್ಲಿ….!
ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದ ಕಟ್ಟಡದ ದುರಸ್ಥಿಕಾಮಗಾರಿ ಬಗ್ಗೆ ಸದಸ್ಯ ಶಿವರಂಜನ್ ನಿಮಗೆ ಮಾಹಿತಿ ಇದೇಯಾ ಎಂದು ತಾಲೂಕು ಆರೋಗ್ಯಾಧಿಕಾರಿಯವರಲ್ಲಿ ವಿಚಾರಿಸಿದಾಗ ನಾವು ಶಾಂತಿಗೋಡುನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿಗೃಹ ದುರಸ್ಥಿಗೆ ಆರೋಗ್ಯ ಇಲಾಖೆಯಿಂದ ರೂ.೧ಲಕ್ಷದ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಅಲ್ಲಿ ಕಾಮಗಾರಿ ನಡೆಸದೆ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ದುರಸ್ಥಿ ನಡೆಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಅಶೋಕ್ ಕುಮಾರ್ ರೈ ತಿಳಿಸಿದರು. ಸವಣೂರು ಗ್ರಾಮದ ಪುಣ್ಚಪ್ಪಾಡಿಯಲ್ಲಿರುವ ಆರೋಗ್ಯ ಕೇಂದ್ರದ ಕಟ್ಟಡದ ದುರಸ್ಥಿಯೂ ನಡೆದಿದೆ ಎಂದು ಸದಸ್ಯರು ಆರೋಪಿಸಿದರು.

ಕೆಲವು ಕಡೆಗಳಲ್ಲಿ ನಾವು ಸಲ್ಲಿಸಿರುವ ಬೇಡಿಕೆಗಿಂತ ಹೆಚ್ಚುವರಿ ಕಾಮಗಾರಿಗಳು ನಡೆದಿದೆ. ಇದು ಹೇಗ ನಡೆಸಲಾಗಿದೆ. ಅಲ್ಲದೆ ಇದಕ್ಕೆ ಯಾವ ರೀತಿ ಬಿಲ್ ಪಾವತಿ ಮಾಡಲಾಗಿದೆ ಎಂದು ಸದಸ್ಯ ಶಿವರಂಜನ್ ಪ್ರಶ್ನಿಸಿದರು. ಮಂಜೂರುಗೊಂಡಿರುವ ಅನುದಾನ ಲ್ಯಾಪ್ಸ್ ಆಗಬಾರದು ಎಂಬ ಕಾರಣಕ್ಕೆ ಆವಶ್ಯವಿರುವ ಕಾಮಗಾರಿಗಳನ್ನು ಬೇಡಿಕೆಗಿಂತ ಹೆಚ್ಚುವರಿ ಕಾಮಗಾರಿಗಳನ್ನು ಶೀಘ್ರವಾಗಿ ನಡೆಸಲಾಗಿದೆ ಎಂದು ಕಾರ್ಯನಿರ್ವಹಣಾಧಿಕಾರಿ ತಿಳಿಸಿದರು. ಹೆಚ್ಚುವರಿ ಕಾಮಗಾರಿಗಳನ್ನು ನಡೆಸುವ ಸಂದರ್ಭದಲ್ಲಿ ಆಯಾ ಭಾಗದ ಸದಸ್ಯರ ಗಮನಕ್ಕೆ ತಂದಿಲ್ಲ ಎಂದು ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದರು. ನಾವು ಸಲ್ಲಿಸಿದ ಬೇಡಿಕೆಗಳ ಕಾಮಗಾರಿ ನಡೆಸದೆ ಉಳಿದ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಸದಸ್ಯೆ ತೇಜಸ್ವಿನಿ ಆರೋಪಿಸಿದರು.

ಶಾಲಾ ಕಟ್ಟಡಗಳ ದುರಸ್ಥಿಗಳ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಸ್ತಾಪಿಸಿದಾಗ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಎಲ್ಲಾ ಶಾಲೆಗಳಿಗೆ ಅಲ್ಪಸ್ವಲ್ಪ ಅನುದಾನವಿಡುವುದರಿಂದ ಯಾವುದೇ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಇದಕ್ಕಾಗಿ ಒಂದೋಂದೇ ಶಾಲೆಗಳಿಗೆ ಹೆಚ್ಚಿನ ಅನುದಾನವನ್ನು ಇಟ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಪ್ರತಿವರ್ಷ ಅದೇ ಶಾಲೆಗೆ ಅನುದಾನ ವಿನಿಯೋಗಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. ಶಾಲೆಗಳಿಗೆ ಸುಣ್ಣ ಬಣ್ಣ ಬಳಿಯುವುದಕ್ಕಿಂತ ಕಟ್ಟಡದ ಮಾಡುಗಳ ದುರಸ್ಥಿಗೆ ಆಧ್ಯತೆ ನೀಡುವಂತೆ ಸದಸ್ಯರ ಸೂಚಿಸಿದರು.

23 ಪ್ರೌಢಶಾಲೆಗೆ ಸಿಸಿ ಕ್ಯಾಮರಾ
ತಾಲೂಕಿನಲ್ಲಿ 23 ಪ್ರೌಢಶಾಲೆಗಳಿದ್ದು ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಶಾಲೆಗಳಿಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಧಿಕ ಮಕ್ಕಳಿರುವ ಶಾಲೆಗಳಿಗೆ ತಲಾ ರೂ.10000 ಹಾಗೂ ಕಡಿಮೆ ಮಕ್ಕಳಿರುವ ಶಾಲೆಗಳಿಗೆ ತಲಾ ರೂ.3000ದಂತೆ ಒಟ್ಟು ರೂ.15,20,000ವನ್ನು ಕ್ರೀಡಾ ಸಾಮಾಗ್ರಿಗಳ ಖರೀದಿಗೆ ಅನುದಾನವನ್ನು ಮೀಸಲಿಡಲಾಗಿದೆ ಎಂದು ಸಾಮಾಜಿಕ ನ್ಯಾಯ ಸಮಿತಿ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎನ್ ತಿಳಿಸಿದರು.

ಅನುದಾನ ನೇರ ಖಾತೆಗೆ
ವಿವಿಧ ಇಲಾಖೆಗಳಿಗೆ ಮಂಜೂರುಗೊಂಡ ಅನುದಾನವನ್ನು ಕೆ೨ ಯೋಜನೆಯ ಮುಖಾಂತರ ಆಯಾ ಇಲಾಖೆಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಚೆಕ್ ರೂಪದಲ್ಲಿ ಯಾವುದೇ ವ್ಯವಹಾರಗಳ ನಡೆಯುವುದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಕಾಮಗಾರಿಗಳನ್ನು ಶೀಘ್ರವಾಗಿ ನಡೆಸುವಂತೆ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್ ತಿಳಿಸಿದರು. ಸದಸ್ಯರಾದ ಪರಮೇಶ್ವರ ಭಂಡಾರಿ, ಮೀನಾಕ್ಷಿ ಮಂಜುನಾಥ, ತಾರಾ ತಿಮ್ಮಪ್ಪ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ನವೀನ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್ ಸ್ವಾಗತಿಸಿ, ವಂದಿಸಿದರು.

ಸಾಮಾಜಿಕ ನ್ಯಾಯ, ಸ್ಥಾಯಿ ಸಮಿತಿ ಸಭೆ
ಪ್ರಾರಂಭದಲ್ಲಿ ಸಾಮಾಜಿಕ ನ್ಯಾಯ ಸಮಿತಿ ಸಭೆಯು ಅಧ್ಯಕ್ಷ ಹರೀಶ್ ಬಿಜತ್ರೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸದಸ್ಯರಾದ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ದಿವ್ಯ ಪುರುಷೋತ್ತಮ, ಜಯಂತಿ ಗೌಡ, ಕುಸುಮಾ ಪಿ.ವೈ, ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು. ಸಾಮಾಜಿಕ ಸ್ಥಾಯಿ ಸಮಿತಿ ಸಭೆಯು ಉಪಾಧ್ಯಕ್ಷೆ ರಾಜೇಶ್ವರಿ ಅವರು ಅಧ್ಯಕ್ಷತೆಯಲ್ಲಿ ನಡೆಯಿತು. ಸದಸ್ಯರಾದ ಭವಾನಿ ಚಿದಾನಂದ, ಸುಜಾತ ಕೃಷ್ಣ, ಲಲಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.