ಪುತ್ತೂರು: ಕಟ್ಟತ್ತಾರು ನುಸ್ರತುಲ್ ಇಸ್ಲಾಂ ಮದ್ರಸದ ಪ್ರಾರಂಭೋತ್ಸವ ಕಾರ್ಯಕ್ರಮ ಜೂ.15 ರಂದು ನಡೆಯಿತು. ಕಟ್ಟತ್ತಾರು ಜಮಾಅತ್ ಕಮಿಟಿ ಅಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಜುಮ್ಮಾ ಮಸೀದಿ ಖತೀಬರಾದ ದಾವೂದ್ ಸಅದಿ ಉಸ್ತಾದರು ದುವಾ ಆಶೀರ್ವಚನಗೈದು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಜಮಾಅತ್ ಕಮಿಟಿ ಸದಸ್ಯ ಬಿ.ಎಂ ಉಮ್ಮರ್ ಹಾಜಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿ.ಬಿ, ಕಾರ್ಯದರ್ಶಿಗಳಾದ ಕೆ.ಎಂ ಶರೀಫ್, ಯು.ಕೆ ಮುಸ್ತಾಫ, ಜಮಾಅತ್ ಕಮಿಟಿ ಸದಸ್ಯರುಗಳಾದ ಯೂಸುಫ್ ಹಾಜಿ ಅಂಗಡಿ, ಎನ್.ಎಂ ಮಹಮ್ಮದ್, ಅಬೂಬಕ್ಕರ್ ಬಿ.ಪಿ, ಬಸೀರ್ ಎ.ಪಿ ಸೇರಿದಂತೆ ಜಮಾಅತಿನ ಹಲವಾರು ಹಿರಿಯರು ಭಾಗವಹಿಸಿದರು. ಮದ್ರಸಾ ಮುಹಲ್ಲಿಂ ಇಸಾಕ್ ಮುಸ್ಲಿಯಾರ್ ಸ್ವಾಗತಿಸಿ, ಮುಹಿಯದ್ದೀನ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು.