ಕಲ್ಲುಗುಡ್ಡೆ-ಕಡಬ-ಶಾಂತಿಮೊಗೇರ್ ಬಸ್ಸಿಗಾಗಿ ಆಗ್ರಹ- ಸಚಿವರಿಗೆ, ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಕಲ್ಲುಗುಡ್ಡೆಯಿಂದ ಕಡಬ ಶಾಂತಿಮೊಗೇರ್ ಮಾರ್ಗವಾಗಿ ಪುತ್ತೂರಿಗೆ ಬಸ್ಸಿನ ವ್ಯವಸ್ಥೆ ಮಾಡುವಂತೆ ರಾಜ್ಯ ಸಾರಿಗೆ ನಿಗಮದ ಸಚಿವರಿಗೆ, ಸಾರಿಗೆ ಅಧಿಕಾರಿಗಳಿಗೆ, ಮನವಿ ಮಾಡಿಕೊಂಡಿದ್ದು ಕೂಡಲೇ ಬಸ್ಸಿನ ವ್ಯವಸ್ಥೆ ಮಾಡುವಂತೆ ಅಗ್ರಹಿಸಲಾಗಿದೆ. ನೂಜಿಬಾಳ್ತಿಲ, ರೆಂಜಿಲಾಡಿ, ಪುತ್ತಿಗೆ, ಕೊಣಾಜೆ, ಕುಟ್ರುಪ್ಪಾಡಿ, ಭಾಗಗಳಿಂದ ಪುತ್ತೂರು ವಿವೇಕಾನಂದ ಕಾಲೇಜು, ಫಿಲೋಮಿನಾ ಕಾಲೇಜು, ಸವಣೂರು ವಿದ್ಯಾರಶ್ಮಿ ಕಾಲೇಜುಗಳಿಗೆ ಹೋಗುವ ಸುಮಾರು 35 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸೇರಿದಂತೆ ಉದ್ಯೋಗಸ್ಥರು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ಸಿನ ವ್ಯವಸ್ಥೆ ಮಾಡುವಂತೆ ಹಲವಾರು ವರ್ಷಗಳಿಂದ ಬೇಡಿಕೆಗಳು ಸಲ್ಲಿಸುತ್ತಿದ್ದರೂ ಬಸ್ಸಿನ ವ್ಯವಸ್ಥೆ ಆಗದೇ ಪ್ರಯಾಣಿಕರು ಸುತ್ತು ಬಳಸಿ ಪ್ರಯಾಣಿಸುತ್ತಿರುವುದು ವಿಪರ್ಯಸವಾಗಿದೆ.

ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಿಂದ ನೂತನ ತಾಲೂಕು ಕೇಂದ್ರ ಕಡಬ ಮೂಲಕ ಶಾಂತಿಮೊಗೆರ್, ಪುತ್ತೂರಿಗೆ ಸರಕಾರಿ ಬಸ್ಸಿನ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಅಗ್ರಹಿಸಿದ್ದಾರೆ. ನೂಜಿಬಾಳ್ತಿಲದಿಂದ ನೆಲ್ಯಾಡಿ-ಉಪ್ಪಿನಂಗಡಿ-ಪುತ್ತೂರಿಗೆ ರಾತ್ರಿ ಬಂದು ಬೆಳಗ್ಗೆ ಹೋಗುವ ಬಸ್ಸೊಂದು ಇದ್ದು ಮಂಗಳೂರಿನಿಂದ-ಕಡಬ-ಕಲ್ಲುಗುಡ್ಡೆಗೆ ರಾತ್ರಿ ಬಸ್ಸೊಂದು ಬಂದು ಬೆಳಗ್ಗೆ 7:15 ಗಂಟೆಗೆ ಹೋಗುವುದನ್ನು ಬಿಟ್ಟರೆ ನೂಜಿಬಾಳ್ತಿಲಕ್ಕೆ ಬೇರೆ ಸರಕಾರಿ ಬಸ್ಸಿಲ್ಲದೆ ಸಾರ್ವಜನಿಕರು, ಶಾಲಾಮಕ್ಕಳು, ಉದ್ಯೋಗಸ್ಥರು ಪರದಾಡುವಂತಾಗಿದೆ.

ಕಲ್ಲುಗುಡ್ಡೆಯಿಂದ- ಕಡಬ – ಶಾಂತಿಮೊಗೇರ್-ಮಾರ್ಗವಾಗಿ ಪುತ್ತೂರಿಗೆ ಬೆಳಗ್ಗೆ 7:30 , 9:00 ಮಧ್ಯಾಹ್ನ 12:00 ಅಪರಾಹ್ನ 3:00, ಸಂಜೆ 4:00 ಹಾಗೂ 5:00 ಗಂಟೆಗೆ ಅದೇ ರೀತಿ ಪುತ್ತೂರುನಿಂದ ಬೆಳಿಗ್ಗೆ 10:00, ಮಧ್ಯಾಹ್ನ 1:00, ಸಂಜೆ 4:30 ಕ್ಕೆ ಹಾಗೂ 5:30 ಕ್ಕೆ ಕಲ್ಲುಗುಡ್ಡೆಗೆ ಬಸ್ಸಿನ ವ್ಯವಸ್ಥೆ ಮಾಡುವಂತೆ ಹಲವು ವರ್ಷಗಳಿಂದ ಆಗ್ರಹಗಳು ಕೇಳಿಬರುತ್ತಿದ್ದರೂ ಬೇಡಿಕೆ ಕನಸಾಗಿಯೇ ಉಳಿದಿದ್ದು, ಈ ಬಾರಿಯಾದರೂ ಇಲ್ಲಿಗೆ ಸಾರಿಗೆ ವ್ಯವಸ್ಥೆ ಮಾಡುವಂತೆ ಸಾರ್ವಜನಿಕ ವಲಯದಿಂದ ಆಗ್ರಹಿಸಲಾಗಿದೆ.

ನೂಜಿಬಾಳ್ತಿಲ ಗ್ರಾ.ಪಂ ಗ್ರಾಮಸಭೆಗಳಲ್ಲಿ ಪ್ರತೀ ಸಲ ಬಸ್ಸಿಗಾಗಿ ಅಗ್ರಹಿಸಲಾಗುತ್ತಿದ್ದು ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂಬ ಉತ್ತರ ಬಿಟ್ಟರೆ ಈವರೆಗೆ ಪರಿಹಾರ ಸಿಕ್ಕಿರುವುದಿಲ್ಲ. ಇಡೀ ರಾಜ್ಯಾದ್ಯಂತ ಗ್ರಾಮಾಂತರ ಪ್ರದೇಶಗಳಿಗೆ ಬಸ್ಸಿನ ವ್ಯವಸ್ಥೆಯಾಗಿದ್ದರೂ ಕಡಬ ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿರುವ ನಮ್ಮ ಗ್ರಾ.ಪಂ.ಗೆ ಮಾತ್ರ ಸರಕಾರಿ ಬಸ್ಸಿನ ವ್ಯವಸ್ಥೆ ಇಲ್ಲದಿರುವುದು ವಿಪರ್ಯಸ. ಇಲ್ಲಿಂದ ದಿನನಿತ್ಯ ಕಡಬ ಸೇರಿದಂತೆ ಪುತ್ತೂರು-ಮಂಗಳೂರಿಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗಸ್ಥರು, ಸಾರ್ವಜನಿಕರು ಪ್ರಯಾಸ ಪಡುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕಾಗಿದೆ– ಗೋಪಾಲಕೃಷ್ಣ ಗೌಡ ಜಾಲು ನೂಜಿಬಾಳ್ತಿಲ

ಹಲವಾರು ಸಾರಿ ವರದಿ ಮಾಡಲಾಗಿದ್ದು ಮತ್ತೊಮ್ಮೆ ಕೋರಿಕೆ ಸಲ್ಲಿಸಲಾಗುವುದು: ಸಾರ್ವಜನಿಕರ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಲ್ಲುಗುಡ್ಡೆ- ಕಡಬ ಮಧ್ಯೆ ಹಾಗೂ ಪುತ್ತೂರು, ಉಪ್ಪಿನಂಗಡಿ, ಮಂಗಳೂರಿಗೆ ಸರಕಾರಿ ಬಸ್ಸು ವ್ಯವಸ್ಥೆಗೆ ಕಲ್ಪಿಸುವಂತೆ ಈ ಹಿಂದಿನಿಂದಲೇ ಗ್ರಾ.ಪಂ.ನಿಂದ ಕೋರಿಕೆ ಸಲ್ಲಿಸುತ್ತಾ ಪ್ರಯತ್ನಿಸುತ್ತಿದ್ದೇವೆ. ನಮ್ಮ ಊರಿಗೆ ಬಸ್ಸು ಬೇಕೆಂಬುಹುದೇ ನಮ್ಮ ಆಶಯವಾಗಿದ್ದು ಇನ್ನೊಮ್ಮೆ ಕೆ.ಎಸ್.ಆರ್.ಟಿ.ಸಿ. ಪುತ್ತೂರು ವಿಭಾಗಕ್ಕೆ ಬಸ್ಸಿನ ವ್ಯವಸ್ಥೆ ಮಾಡುವಂತೆ ಸಮಯ ಹಾಗೂ ಇತರ ಮಾಹಿತಿಯನ್ನು ಶೀಘ್ರ ಕಳುಹಿಸಿ, ಮನವಿ ಮಾಡಲಾಗುವುದು-ಸದಾನಂದ ಗೌಡ ಅಧ್ಯಕ್ಷರು ಗ್ರಾ.ಪಂ. ನೂಜಿಬಾಳ್ತಿಲ

ಸಾರ್ವಜನಿಕರ ಬೇಡಿಕೆಯಂತೆ ನೂಜಿಬಾಳ್ತಿಲದಿಂದ ಕಡಬ ಮಾರ್ಗವಾಗಿ ಪುತ್ತೂರಿಗೆ ಇದೇ ರೀತಿ ಕಲ್ಲುಗುಡ್ಡೆಗೆ ವಿವಿಧ ಕಡೆಗಳಿಂದ ದಿನದ ವಿವಿಧ ಸಮಯಗಳಲ್ಲಿ ಸರಕಾರಿ ಬಸ್ಸು ಹಾಕುವಂತೆ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳಲ್ಲಿ ಚರ್ಚಿಸಿದ್ದೇನೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೂಜಿಬಾಳ್ತಿಲ ಸೇರಿದಂತೆ ಕಡಬ ತಾಲೂಕಿನಾದ್ಯಂತ ಗ್ರಾಮಂತರ ಪ್ರದೇಶಗಳಿಗೆ ಬಸ್ಸಿನ ವ್ಯವಸ್ಥೆ ಮಾಡುವಂತೆ ಕೋರಲಾಗಿದೆ. – ಪಿ.ಪಿ ವರ್ಗೀಸ್ ಸದಸ್ಯರು ಜಿ.ಪಂ ಕಡಬ

ನೂಜಿಬಾಳ್ತಿಲದಿಂದ ಕಡಬ ಪುತ್ತೂರಿಗೆ ಬಸ್ಸಿನ ಸೌಕರ್ಯವಿಲ್ಲದೆ ನಮ್ಮ ದಲಿತರು ಸೇರಿದಂತೆ, ಬಡ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ. ಎಲ್ಲಾ ಗ್ರಾಮಗಳಲ್ಲೂ ಬಸ್ಸುಗಳು ಓಡಾಡುತ್ತಿದ್ದರೂ ನಮ್ಮ ಊರಿಗೆ ಬಸ್ಸೆ ಇಲ್ಲ, ಸಂಬಂಧಪಟ್ಟವರು ಸ್ಪಂದಿಸಿ ಕಲ್ಲುಗುಡ್ಡೆಯಿಂದ ದಿನಪೂರ್ತಿ ಬಸ್ಸಿನ ವ್ಯವಸ್ಥೆ ಕಲ್ಲಿಸಬೇಕಾಗಿದೆ. – ವಸಂತ ಕುಬುಲಾಡಿ ಅಧ್ಯಕ್ಷರು, ದಲಿತ ಮಹಾ ಒಕ್ಕೂಟ ಕಡಬ

ಬೇಡಿಕೆಯಂತೆ ಬಸ್ಸಿನ ವ್ಯವಸ್ಥೆ ಮಾಡಲಾಗುವುದು: ಸಾರ್ವಜನಿಕರ ಬೇಡಿಕೆಗೆ ಪೂರಕವಾಗಿ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಈಗಾಗಲೇ ಇರುವ ಬಸ್ಸುಗಳನ್ನು ಹತ್ತಿರದ ಪ್ರದೇಶಗಳಿಗೆ ವಿಸ್ತರಿಸಲು ಅವಕಾಶವಿದ್ದರೆ ವಿಸ್ತರಿಸಲಾಗುವುದು ಅಥವಾ ಹೊಸರೂಟ್‌ಗಳಾದರೆ ಅಲ್ಲಿಯ ವ್ಯವಸ್ಥೆಗಳಿಗನುಸಾರವಾಗಿ ಬಸ್ಸು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು .ಈಗಾಗಲೇ ಬೇಡಿಕೆ ಇರುವ ಹೆಚ್ಚಿನ ಕಡೆಗಳಿಗೆ ಬಸ್ಸ್ ಸೌಕರ್ಯ ಕಲ್ಪಿಸಲಾಗಿದೆ. ಕಲ್ಲುಗುಡ್ಡೆ -ಕಡಬ ಮುಖಾಂತರ ಪುತ್ತೂರಿಗೆ ರೂಟ್ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು-ಮುರಳೀಧರ್ ಸಾರಿಗೆ ಅಧಿಕಾರಿ ಪುತ್ತೂರು ವಿಭಾಗ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.