240 ಕ್ಯೂಫೆಕ್ಸ್ ನೀರು ಉಪಯೋಗ-ಸೈರನ್ ಅಳವಡಿಕೆ, ಸಾರ್ವಜನಿಕ ಮಾಹಿತಿ
ಉಪ್ಪಿನಂಗಡಿ: ನೀರಕಟ್ಟೆ ಸಾಗರ್ ಪವರ್ ಪ್ರಾಜೆಕ್ಟ್ನಲ್ಲಿ ಜಲ ವಿದ್ಯುತ್ ಉತ್ಪಾದನೆ ಆರಂಭಗೊಂಡಿರುತ್ತದೆ. ನೀರು ಶೇಖರಣೆ ಮಾಡಿ ಬಿಡುವಂತಹ ವ್ಯವಸ್ಥೆ ಇರುವುದಿಲ್ಲ ಮತ್ತು ವಿದ್ಯುತ್ ಸ್ಥಾವರಕ್ಕೆ 240 ಕ್ಯೂಫೆಕ್ಸ್ ನೀರನ್ನು ಮಾತ್ರ ಉಪಯೋಗಿಸುತ್ತಿದ್ದು, ಹೆಚ್ಚುವರಿ ನೀರನ್ನು ದಿನದ 24 ಗಂಟೆಯೂ ಕ್ರೆಸ್ ಗೇಟ್ ಮೂಲಕ ಹೊರ ಬಿಡಲಾಗುತ್ತದೆ ಎಂದು ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ವಿದ್ಯುತ್ ಸ್ಥಾವರದ ಮೇಲ್ದಂಡೆಯಲ್ಲಿ ಇತರೇ ೩ ಪವರ್ ಪ್ರಾಜೆಕ್ಟ್ ಕಾರ್ಯಾಚರಿಸುತ್ತಿದ್ದು, ಸಾರ್ವಜನಿಕ ಹಿತದೃಷ್ಠಿಯಿಂದ ಮೇಲಿನಿಂದ ಬರುವ ಮಳೆ ನೀರಿನ ಪ್ರಮಾಣ ಮತ್ತು ನೀರಿನ ಹರಿವಿನ ಬಗ್ಗೆ ಅವರಿಂದ ನಾವು ಮುಂಚಿತವಾಗಿ ಮಾಹಿತಿ ಪಡೆದುಕೊಂಡು ಅಪಾಯದ ಸೂಚನೆ ದೊರಕಿದಾಗಲೆಲ್ಲಾ ಕಂದಾಯ, ಪೊಲೀಸ್, ನದಿ ತೀರದಲ್ಲಿರುವ ಗ್ರಾಮ ಪಂಚಾಯಿತಿಗಳಿಗೆ ಮಾಹಿತಿ ನೀಡಲಾಗುವುದು ಮತ್ತು ನದಿ ಪಾತ್ರದಲ್ಲಿ ಇರುವ ಗ್ರಾಮಸ್ಥರಿಗೆ ಗೊತ್ತುಪಡಿಸುವ ಸಲುವಾಗಿ ಸೈರನ್ ಮೊಳಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.