ನೆಲ್ಯಾಡಿ: ರೆಂಜಿಲಾಡಿ ಗ್ರಾಮದ ಸಾನ್ತೋಮ್ ವಿದ್ಯಾನಿಕೇತನ್ ಶಾಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ 110 ವಿದ್ಯಾರ್ಥಿಗಳಿಗೆ ಮಲಂಕರ ಓರ್ಥೋಡೊಕ್ಸ ಚರ್ಚ್ನ ಆದ್ರಾ ಚಾರಿಟೇಬಲ್ ಟ್ರಸ್ಟ್, ಕೋಟಾಯಂ ಇದರ ಅಧ್ಯಕ್ಷರೂ ಹಾಗು ಬ್ರಹ್ಮಾವರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂದನೀಯ ಯಕೋಬ್ ಮಾರ್ ಏಲಿಯಾಸ್ ಬಿಷಪ್ರವರ ವತಿಯಿಂದ ಸ್ಕೂಲ್ ಬ್ಯಾಗ್ ಮತ್ತು ಕೊಡೆಯನ್ನು ವಿತರಿಸಲಾಯಿತು.
ನೂಜಿಬಾಳ್ತಿಲ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಆನಂದ ಎ.ರವರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಫಾ. ಸುನಿಲ್ ತೋಮಸ್ ಪಳ್ಳಿಚೆರ, ಇಚಿಲಂಪಾಡಿ ಚರ್ಚ್ನ ಧರ್ಮಗುರು ರೆ.ಫಾ.ಗೀವರ್ಗೀಸ್ ತಂಬಾನ್, ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಸದಸ್ಯ ಕೆ.ಜೆ.ತೋಮಸ್, ಶಾಲಾ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷ ಬಿ.ವಸಂತ ಪೂಜಾರಿ, ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿ ಎ.ಎಸ್ .ಪೈಲಿ, ಮುಖ್ಯ ಶಿಕ್ಷಕಿ ಮೇಘ ಜಾರ್ಜ್ರವರು ಉಪಸ್ಥಿತರಿದ್ದರು.