HomePage_Banner
HomePage_Banner
HomePage_Banner
HomePage_Banner

 ನಿಡ್ಪಳ್ಳಿ ಶಾಲಾ ಮಂತ್ರಿ ಮಂಡಲ ರಚನೆ: ಮುಖ್ಯ ಮಂತ್ರಿಯಾಗಿ ಶ್ರೇಯಾ.ಸಿ.ಎಚ್, ಉಪಮುಖ್ಯ ಮಂತ್ರಿಯಾಗಿ ರಂಜಿತ್.ಕೆ 

Puttur_Advt_NewsUnder_1
Puttur_Advt_NewsUnder_1
                                                    ಶ್ರೇಯಾ.ಸಿ.ಎಚ್

 

                                                             ರಂಜಿತ್.ಕೆ

ನಿಡ್ಪಳ್ಳಿ: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿ ಇದರ 2019-20 ನೇ ಸಾಲಿನ ಶಾಲಾ ಮುಖ್ಯ ಮಂತ್ರಿಯಾಗಿ ಏಳನೇ ತರಗತಿಯ ಶ್ರೇಯಾ.ಸಿ.ಎಚ್, ಉಪ ಮುಖ್ಯ ಮಂತ್ರಿಯಾಗಿ ಏಳನೇ ತರಗತಿಯ ರಂಜಿತ್. ಕೆ ಆಯ್ಕೆಯಾದರು. ಮತದಾನದ ಮೂಲಕ ಇವರ ಆಯ್ಕೆ ನಡೆಸಲಾಯಿತು.

ಶಿಕ್ಷಣ ಮಂತ್ರಿಯಾಗಿ ಅನುಶ್ರೀ.ಕೆ, ಆರೋಗ್ಯ ಮಂತ್ರಿಯಾಗಿ ಧನ್ಯಶ್ರೀ.ಕೆ, ಸಾಂಸ್ಕೃತಿಕ ಮಂತ್ರಿಯಾಗಿ ಸಿಂಚನಾ.ಜಿ, ತೋಟಗಾರಿಕಾ ಮಂತ್ರಿಯಾಗಿ ಅಹಮ್ಮದ್ ಶಹೀದ್, ಕ್ರೀಡಾ ಮಂತ್ರಿಯಾಗಿ ಯಕ್ಷಿತ್ ಕುಮಾರ್, ಸ್ವಚ್ಚತಾ ಮಂತ್ರಿಯಾಗಿ ಅಬ್ದುಲ್ ರಹಿಮಾನ್ ಸಫ್ವಾನ್, ಕಾನೂನು ಮಂತ್ರಿಯಾಗಿ ಶ್ರೇಯಸ್, ರಕ್ಷಣಾ ಮಂತ್ರಿಯಾಗಿ ಸಂಪತ್ ಕುಮಾರ್, ನೀರಾವರಿ ಮಂತ್ರಿಯಾಗಿ ಧನ್ಯ.ಪಿ, ಹಣಕಾಸು ಮಂತ್ರಿಯಾಗಿ ಸಾಗರ್.ಅರ್ ಭಟ್, ಆಹಾರ ಮಂತ್ರಿಯಾಗಿ ಗುಣವತಿ, ಗ್ರಂಥಾಲಯ/ ವಾರ್ತಾ ಮಂತ್ರಿಯಾಗಿ ತ್ರೀಕ್ಷಾ, ವಿರೋಧ ಪಕ್ಷದ ನಾಯಕನಾಗಿ ಗುರುಕಿರಣ್ ಹಾಗೂ ನಾಯಕಿಯಾಗಿ ಹರ್ಷ ಇವರನ್ನು ಮಂತ್ರಿ ಮಂಡಲಕ್ಕೆ ಆರಿಸಲಾಯಿತು. ಮುಖ್ಯ ಗುರು ತೋಪಯ್ಯ.ಕೆ ಇವರ ಮಾರ್ಗದರ್ಶನದಲ್ಲಿ ನಡೆಸಿದ ಚುನಾವಣಾ ಪ್ರಕ್ರಿಯೆಯಲ್ಲಿ ಸಹಶಿಕ್ಷಕಿಯರಾದ ಸರಸ್ವತಿ. ಎ, ಶಾರದಾ, ಗೌರವ ಶಿಕ್ಷಕಿಯರಾದ ಚಂದ್ರಕಲಾ. ಡಿ, ಸುಮ.ಡಿ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.