ಮೇಳೈಸಿದ ಮಹಾನ್ ಗಾಯಕ ದಿ.ಮಹಮ್ಮದ್ ರಫೀರವರ ಹಾಡುಗಳ ಸಂಗೀತ ರಸಸಂಜೆ `ರೋಟರಿ ಸಂಗೀತ್’

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಾದರಪಡಿಸಿದ ಭಾರತದ ಸರ್ವಶ್ರೇಷ್ಟ ಮಹಾನ್ ಗಾಯಕ ಮಹಮ್ಮದ್ ರಫೀರವರ ಆಯ್ದ ಜನಪ್ರಿಯ ಗೀತೆಗಳ ಸುಮಧುರ ಸಂಗೀತ ರಸಸಂಜೆ `ರೋಟರಿ ಸಂಗೀತ್’ ಕಾರ್ಯಕ್ರಮವು ಸಂಗೀತ ಪ್ರೇಮಿಗಳ ಮನ ತಣಿಸಿದ್ದು ಮಾತ್ರವಲ್ಲದೆ ಭೇಷ್ ಎನಿಸಿಕೊಂಡಿದೆ. ಕಾರ್ಯಕ್ರಮ ಸಂಯೋಜಕರಾದ ಸುರೇಶ್ ಶೆಟ್ಟಿ, ಶ್ರೀಕಾಂತ್ ಕೊಳತ್ತಾಯ, ಮಾಜಿ ಕಾರ್ಯದರ್ಶಿ ಪ್ರೊ|ಝೇವಿಯರ್ ಡಿ’ಸೋಜ, ಪ್ರಗತಿ ಆಸ್ಪತ್ರೆಯ ಡಾ.ಪ್ರೀತಾ ಹೆಗ್ಡೆ, ಡಾ.ಶ್ರೀಪ್ರಕಾಶ್‌ರವರು ರೋಟರಿ ಕ್ಲಬ್ ಪುತ್ತೂರು 1965ರಿಂದ ಇಲ್ಲಿವರೆಗೆ 54 ವರ್ಷಗಳಲ್ಲಿ ನಡೆದು ಬಂದ ಹಾದಿಯಲ್ಲಿ ಕೈಗೊಂಡ ಮಹತ್ವದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮ ಸಂಯೋಜಕರಾದ ಸುರೇಶ್ ಶೆಟ್ಟಿರವರು ಮಾತನಾಡಿ, 1966-67ರಲ್ಲಿ ಸಾವಿರ ಮಕ್ಕಳಿಗೆ ಟ್ರಿಪಲ್ ಆಂಟಿಜೆನ್ ಇಂಜೆಕ್ಷನ್ ಕೊಡಲಾಗಿದ್ದು ಇದು ಕ್ಲಬ್ಬಿನ ಪ್ರಥಮ ಸಾರ್ವಜನಿಕ ಸೇವಾ ಕಾರ್ಯ ಎನಿಸಿದೆ. 1967-68ರಲ್ಲಿ ಪ್ರಾಥಮಿಕ ಹಾಗೂ ಹೈಸ್ಕೂಲ್‌ನ ನಿವೃತ್ತರಾದ ಅಧ್ಯಾಪಕರನ್ನು ಸನ್ಮಾನಿಸುವ ಕಾರ್ಯ ಪ್ರಾರಂಭವಾಗಿದ್ದು ಅದು ಈಗಲೂ ಮುಂದುವರೆಯುತ್ತಾ ಬಂದಿದೆ. 1974-75ರಲ್ಲಿ ಈಗಿನ ಬ್ರಹ್ಮನಗರವನ್ನು ದಲಿತರಿಗಾಗಿ ೩೦ ಪಕ್ಕಾ ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಲಾಗಿತ್ತು. 1976-77ರಲ್ಲಿ ಬೇರೆ ಬೇರೆ ಹಳ್ಳಿಗಳ 13 ಕೇಂದ್ರಗಳಲ್ಲಿ ವೈದ್ಯಕೀಯ ತಪಾಸಣೆ ಹಾಗೂ ಸಹಾಯ ನೀಡಲಾಗಿದ್ದು ಒಟ್ಟು 2500 ಮಂದಿ ಪ್ರಯೋಜನ ಪಡೆದಿದ್ದರು. 1978-82ರಲ್ಲಿ ಪುರಭವನದ ನಿರ್ಮಾಣಕ್ಕೆ ರೂ.1.50ಲಕ್ಷ ಮೊತ್ತದ ವಿನಿಯೋಜನೆ, 1981-82ರಲ್ಲಿ ಸಾಮೆತ್ತಡ್ಕ ಅಥವಾ ರೋಟರಿಪುರದಲ್ಲಿ 25 ಬಡಕುಟುಂಬಗಳಿಗೆ ಮನೆ ನಿರ್ಮಾಣ, 1993-94ರಲ್ಲಿ ರೋಟರಿ ಅದಾಲತ್ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಧನಂಜಯ ಕುಮಾರ್ ಹಾಗೂ ಶಾಸಕ ವಿನಯಕುಮಾರ್ ಸೊರಕೆಯವರ ಮುಖಾಮುಖಿ ಸಂದರ್ಶನ ಏರ್ಪಡಿಸಲಾಗಿತ್ತು ಎಂದರು.

ಮತ್ತೋರ್ವ ಕಾರ್ಯಕ್ರಮ ಸಂಯೋಜಕರಾದ ಶ್ರೀಕಾಂತ್ ಕೊಳತ್ತಾಯರವರು ಮಾತನಾಡಿ,1994-95ರಲ್ಲಿ ಕಸ್ತೂರ್‌ಬಾ ಮೆಡಿಕಲ್ ಕಾಲೇಜ್‌ನ ಸಹಕಾರದಿಂದ ಬೃಹತ್ ದಂತ ತಪಾಸಣೆ ಹಾಗೂ ಚಿಕಿತ್ಸಾ ಕಾರ್ಯಕ್ರಮ, 1966-97ರಲ್ಲಿ ಪುತ್ತೂರು ತಾಲೂಕಿನ 40300 ವಿದ್ಯಾರ್ಥಿಗಳ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಕಾರ್ಯಗಳು ನಡೆದಿದ್ದು 327 ಮಕ್ಕಳಿಗೆ ಕನ್ನಡಕ ಹಾಗೂ 89 ಮಕ್ಕಳಿಗೆ ಕಣ್ಣಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು. 1997-98ರಲ್ಲಿ ಪುತ್ತೂರು ಹಾಗೂ ಸುತ್ತಮುತ್ತಲಿನ ಜನತೆಗೆ ಅತ್ಯಂತ ಪ್ರಯೋಜನಕಾರಿಯಾದ `ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್’ ಸ್ಥಾಪನೆಯಾಗಿತ್ತು ಎಂದರು.

ಪ್ರಗತಿ ಆಸ್ಪತ್ರೆಯ ಡಾ.ಪ್ರೀತಾ ಹೆಗ್ಡೆರವರು ಮಾತನಾಡಿ, 200-01ರಲ್ಲಿ ಶಾಶ್ವತ ಯೋಜನೆಯಲ್ಲಿ 5 ಲಕ್ಷ ರೂ ವೆಚ್ಚದಲ್ಲಿ ರುದ್ರಭೂಮಿ ನವೀಕರಣ, ವಿವೇಕಾನಂದ ಹೈಸ್ಕೂಲಿಗೆ ಬೃಹತ್ ಶೌಚಾಲಯ, ಅಂತರ್ರಾಷ್ಟ್ರೀಯ ರೋಟರಿ ಸಹಾಯದಿಂದ 19 ಮನೆಗಳ ನಿರ್ಮಾಣ, ರೋಟರಿ ಅಸೆಂಬ್ಲೆಯಲ್ಲಿ ದಾಖಲೆಯ 26 ಪ್ರಶಸ್ತಿಗಳು, 2007-08ರಲ್ಲಿ ಕುಷ್ಟ ರೋಗ ಮತ್ತು ಕಡುಬಡತನದಿಂದ ಬಳಲುತ್ತಿರುವ ವ್ಯಕ್ತಿಗೆ ರೂ.1 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ, 25000 ರೂ.ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಪಾದರಕ್ಷೆಗಳ ವಿತರಣೆ, 2009-11ರಲ್ಲಿ ಆರ್ಯಾಪು ಪ್ರಾಥಮಿಕ ಶಾಲೆಗೆ ರೂ.೬೦ಸಾವಿರ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿತ್ತು ಎಂದರು.

ರೋಟರಿ ಕ್ಲಬ್ ಪುತ್ತೂರು ಇದರ ಡಾ.ಶ್ರೀಪ್ರಕಾಶ್‌ರವರು ಮಾತನಾಡಿ, 2010-11ರಲ್ಲಿ ರೂ.60ಸಾವಿರ ವೆಚ್ಚದಲ್ಲಿ ಮನೆಗಳಿಗೆ ವಿದ್ಯುಧ್ಧೀಕರಣ ಹಾಗೂ ಸೌರ ವಿದ್ಯುತ್ ಸಂಪರ್ಕ, ಹಿಂದೂ ರುದ್ರಭೂಮಿಗೆ ರೂ.60 ಸಾವಿರ ವೆಚ್ಚದಲ್ಲಿ ಸ್ನಾನಗೃಹ ನಿರ್ಮಾಣ, 2011-12ರಲ್ಲಿ ಹಿಂದೂ ರುದ್ರಭೂಮಿಗೆ ರೂ.110000 ವೆಚ್ಚದಲ್ಲಿ ಮಾರುತಿ ಆಮ್ನಿಯನ್ನು ಮುಕ್ತಿವಾಹಿನಿಯನ್ನಾಗಿ ಬದಲಾಯಿಸಿ ಒದಗಿಸಿಕೊಡಲಾಗಿತ್ತು, ರೂ.70ಸಾವಿರ ವೆಚ್ಚದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ `ಸ್ಕ್ರೀನ್ ಪಾರ್ಟಿಶನ್ ಆಂಡ್ ಸೆಂಟ್ರಲೈಸ್‌ಡ್ ಆಕ್ಸಿಜನ್ ಸಪ್ಲ್ಯಾ ಸಿಸ್ಟಂ’ ಅಳವಡಿಸಲಾಗಿತ್ತು. 2016-17ರಲ್ಲಿ ಸುಮಾರು ಒಂದು ಕೋಟಿ ರೂ.ವೆಚ್ಚದಲ್ಲಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‌ನ ಉತ್ಪತ್ತೀಕರಣ ರಕ್ತವರ್ಗೀಕರಣ ಘಟಕದ ಅಳವಡಿಕೆ ಮಾಡಲಾಗಿತ್ತು ಎಂದರು.

ರೋಟರಿ ಪುತ್ತೂರು ಇದರ ಮಾಜಿ ಕಾರ್ಯದರ್ಶಿ ಪ್ರೊ|ಝೇವಿಯರ್ ಡಿ’ಸೋಜರವರು ಮಾತನಾಡಿ, 2017-18ರಲ್ಲಿ ಪ್ರಧಾನ ಮಂತ್ರಿಗಳ ಸ್ವಚ್ಛ ಭಾರತ ಯೋಜನೆಯಂತೆ ಪುತ್ತೂರಿನಲ್ಲಿ ನಮ್ಮ ಕಸ, ನಮ್ಮ ಜವಾಬ್ದಾರಿ ಎಂಬ ಶೀರ್ಷಿಕೆಯಡಿಯಲ್ಲಿ ನಮ್ಮ ನಗರವನ್ನು ಸ್ವಚ್ಚಗೊಳಿಸುವ ಬೃಹತ್ ಹಾಗೂ ಪ್ರಾಮುಖ್ಯ ಸಾಮಾಜಿಕ ಸೇವಾ ಕಾರ್ಯ ಆರಂಭಿಸಲಾಗಿತ್ತು. ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಸೇರಿಸಿ ಕಾರ್ಯಾಗಾರವನ್ನು ನಡೆಸಲಾಗಿತ್ತು. ರೋಟರಿ ಕ್ಲಬ್ಬಿನ ಪ್ರತೀ ವರ್ಷ ಮುಂದುವರೆಯುತ್ತಿರುವ ಸೇವಾ ಯೋಜನೆಯಾಗಿದೆ. ಹಸಿರು ದಳ ಬೆಂಗಳೂರು, ಪುರಸಭೆ ಪುತ್ತೂರು ಮತ್ತು ದ.ಕ ಡೆಪ್ಯೂಟಿ ಕಮೀಷನರ್ ಸಹಕಾರದೊಂದಿಗೆ ಪುತ್ತೂರು ತಾಲೂಕಿನಲ್ಲಿ ಸಸ್ಯಶ್ಯಾಮಲ ಮಾಡುವ ಪ್ರಯತ್ನವೂ ರೋಟರಿ ಕ್ಲಬ್ ಹಮ್ಮಿಕೊಂಡಿದೆ. ಪುತ್ತೂರಿನ ಪೌರ ಕಾರ್ಮಿಕರಿಗೆ ಗ್ರೂಪ್ ಇನ್ಸೂರೆನ್ಸ್ ಮಾಡಿ ಅವರ ಸುರಕ್ಷಿತ ಭವಿಷ್ಯದ ಬಗ್ಗೆಯೂ ಕಾರ್ಯಕ್ರಮ ಹಮ್ಮಿಕೊಂಡಿವೆ. ಅಲ್ಲದೆ ಚೆನ್ನೈಯ ಡಾ.ಸುಂದರ್ ಹಾಗೂ ರೋಟರಿ ಪುತ್ತೂರು ಸಹಭಾಗಿತ್ವದಲ್ಲಿ ದಿವ್ಯಾಂಗಚೇತನರಿಗೆ ಕೃತಕ ಉಪಕರಣಗಳು ಮತ್ತು ಗಾಲಿಕುರ್ಚಿಗಳನ್ನು ವಿತರಿಸುತ್ತಿzವೆ ಎಂದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ವಾಮನ್ ಪೈ ಸ್ವಾಗತಿಸಿ, ಕಾರ್ಯದರ್ಶಿ ಕಿಶನ್ ಬಿ.ವಿ ವಂದಿಸಿದರು. ನಿಯೋಜಿತ ಅಧ್ಯಕ್ಷ ಭುಜಂಗ ಆಚಾರ್, ನಿಯೋಜಿತ ಕಾರ್ಯದರ್ಶಿ ಮಧು ನರಿಯೂರು ಸಹಿತ ಪುತ್ತೂರಿನ ವಿವಿಧ ರೋಟರಿ ಕ್ಲಬ್‌ನ ಸದಸ್ಯರು, ಸಂಗೀತ ಪ್ರೇಮಿಗಳು ಉಪಸ್ಥಿತರಿದ್ದರು.
ಮಂಗಳೂರಿನ ಟಾಗೋರ್ ಮತ್ತು ಬಳಗದ ಹಾಡುಗಾರರಾದ ಟಾಗೋರ್ ಹಾಗೂ ಲತಾರವರಿಂದ ಮಹಾನ್ ಗಾಯಕ ದಿ.ಮಹಮ್ಮದ್ ರಫೀರವರ ಹಿಂದಿನ ಹಿಂದಿ ಚಿತ್ರಗಳ ಹಿಟ್ ಚಿತ್ರಗಳಲ್ಲಿನ ಆಯ್ದ ಗೀತೆಗಳನ್ನು ಸಾದರಪಡಿಸಲಾಯಿತು. ಈ ಸಂದರ್ಭದಲ್ಲಿ ಪ್ರೇಕ್ಷಕರು ಶಿಳ್ಳೆ ಕರತಾಡನದ ಮೂಲಕ ಹಾಡುಗಾರರನ್ನು ಹುರಿದುಂಬಿಸಿದರು. ಸುಮಾರು ಐನ್ನೂರಕ್ಕೂ ಮಿಕ್ಕಿ ಸಂಗೀತ ಪ್ರೇಮಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.