HomePage_Banner
HomePage_Banner
HomePage_Banner

ಪುತ್ತೂರು ಜೋಡುಕರೆ ಕಂಬಳದ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ, ಜಯರಾಜ್ ಜೈನ್ ಎಲಿಕ ಆತ್ಮಹತ್ಯೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಾಂಗ್ರೆಸ್ ಮುಖಂಡ, ಕೃಷಿಕ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಉಪಾಧ್ಯಕ್ಷ ಎಲಿಕಾ ಜಯರಾಜ್ ಜೈನ್ (64ವ.) ಎಂಬವರು ಜೂ.16ರಂದು ಬೆಳಿಗ್ಗೆ ತನ್ನ ಮನೆಯ ಸಮೀಪ ಮಾವಿನ ಮರಕ್ಕೆ ನೈಲನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಜೂ.15ರಂದು ರಾತ್ರಿ ಪುತ್ತೂರಿನಿಂದ ಮನೆಗೆ ಹೋಗಿ ರಾತ್ರಿ 9.30ರ ಸುಮಾರಿಗೆ ಊಟ ಮಾಡಿದ್ದರು. ಬಳಿಕ ನಿರ್ಮಾಣ ಹಂತದಲ್ಲಿರುವ ಮನೆಗೆ ಹೋಗಿ ಮಲಗುವುದಾಗಿ ಹೇಳಿ ಹೋಗಿದ್ದರು. ಜೂ.16ರಂದು ಬೆಳಿಗ್ಗೆ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಮೃತರ ಮಗ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು. ನರಿಮೊಗರು ಗ್ರಾಮದ ಮುಕ್ವೆ ಎಲಿಕಾ ನಿವಾಸಿಯಾಗಿದ್ದ ಜಯರಾಜ್ ಜೈನ್‌ರವರು ತನ್ನ ಮನೆಯ ಹತ್ತಿರ ಹೊಸ ಮನೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದು, ಅರ್ಧ ಪೂರ್ಣಗೊಂಡಿದೆ.

ನರಿಮೊಗರು ಸಿಎ ಬ್ಯಾಂಕ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಜೈನ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿ, ಜಿಲ್ಲಾ ಜೈನ ಏರಿಯಾ ಕಮಿಟಿಯ ಸದಸ್ಯರಾಗಿ, ಮುಕ್ವೆ ಸ.ಮಾ.ಹಿ.ಪ್ರಾ. ಶಾಲೆಯ ನಿರ್ದೇಶಕರಾಗಿ, ಅಲ್ಲದೆ ಧಾರ್ಮಿಕ ಕ್ಷೇತ್ರದಲ್ಲಿ ವಿವಿಧ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ಊರಿನಲ್ಲಿ ಜಾತಿ, ಮತ, ಭೇದವಿಲ್ಲದೆ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪ್ರಾತರಾಗಿದ್ದರು. ಪುತ್ತೂರಿನ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆರವರ ನಿಕಟವರ್ತಿಯಾಗಿದ್ದ ಜಯರಾಜ್‌ರವರು ಹಲವು ವರ್ಷಗಳಿಂದ ಪುತ್ತೂರಿನ ಪ್ರತಿಷ್ಠಿತ ವಸತಿಗೃಹವೊಂದರಲ್ಲಿ ಬಾಡಿಗೆ ಕೋಣೆಯೊಂದನ್ನು ಹೊಂದಿದ್ದು, ಹೆಚ್ಚಿನ ದಿನಗಳಲ್ಲಿ ಅಲ್ಲಿಯೇ ತಂಗುತ್ತಿದ್ದರು. ಮೃತರು ಪತ್ನಿ ಸುಶೀಲ, ಪುತ್ರ ಪ್ರದೀಪ್ ವೈ.ಜೆ.ರವರನ್ನು ಅಗಲಿದ್ದಾರೆ.

ಮೃತರ ಮನೆಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಬಡಗನ್ನೂರು, ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸೂತ್ರಬೆಟ್ಟು ಜಗನ್ನಾಥ ರೈ, ಕಾಂಗ್ರೆಸ್‌ನ ವಿವಿಧ ಪದಾಧಿಕಾರಿಗಳು, ಕಂಬಳ ಸಮಿತಿ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಆಗಮಿಸಿ ಸಂತಾಪ ಸೂಚಿಸಿದರು.

ಡಿಸಿಸಿ ಬ್ಯಾಂಕ್‌ನಲ್ಲಿ 32 ಲಕ್ಷ ಸಾಲವೇ ಆತ್ಮಹತ್ಯೆಗೆ ಕಾರಣ: ಮಗನ ದೂರು
ಜಯರಾಜ್ ಎಲಿಕಾರವರು 2 ವರ್ಷಗಳ ಹಿಂದೆ ಪುತ್ತೂರು ಡಿಸಿಸಿ ಬ್ಯಾಂಕ್‌ನಲ್ಲಿ ಕೃಷಿಗಾಗಿ 32 ಲಕ್ಷ ರೂಪಾಯಿ ಸಾಲ ಮಾಡಿದ್ದು, ಕೃಷಿಯಲ್ಲಿ ನಷ್ಟವುಂಟಾಗಿ ಆರ್ಥಿಕ ಮುಗ್ಗಟ್ಟಿನಿಂದ ಸಾಲ ತೀರಿಸಲಾಗದ ಕೊರಗಿನಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಎಲಿಕಾ ಜಯರಾಜ್‌ರವರ ಪುತ್ರ ಪ್ರದೀಪ್ ವೈ.ಜೆ.ರವರು ಪುತ್ತೂರು ನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.