HomePage_Banner
HomePage_Banner
HomePage_Banner

ಧ. ಗ್ರಾ ಯೋಜನೆಯ ಪುತ್ತೂರು ವಲಯದ ಪ್ರಗತಿ ಬಂಧು ಸ್ವ.ಸ ಸಂಘಗಳ ಒಕ್ಕೂಟದ ಪದಗ್ರಹಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಮುಖಾಂತರ ಸ್ವ ಅಭಿವೃದ್ಧಿಯ ಜೊತೆಗೆ ಸಮಾಜದ ಅಭಿವೃದ್ಧಿಯೂ ನಡೆಯುತ್ತಿದೆ ಎಂದು ತಾ.ಪಂ ಸದಸ್ಯ ಸಾಜ ರಾಧಾಕೃಷ್ಣ ಆಳ್ವ ಹೇಳಿದರು.

ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ಜೂ.16ರಂದು ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ವಲಯದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮಾಭಿವೃದ್ಧಿ ಯೋಜನೆ ಜಾರಿಗೆ ಬಂದ ಬಳಿಕ ಇತರ ಹಲವು ಸಂಘಟನೆಗಳಿಗೆ ರೂಪುರೇಷೆ ನೀಡಿದೆ. ಗ್ರಾಮೀಣ ಪ್ರದೇಶಗಳ ದೇವಸ್ಥಾನ, ಭಜನಾ ಮಂದಿರಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಯೋಜನೆಯ ಸದಸ್ಯರು ಪ್ರಮುಖವಾಗಿ ಕೈಜೋಡಿಸಿರುತ್ತಾರೆ. ಜೊತೆಗೆ ಪರಿಸರ ಸ್ವಚ್ಛತೆ, ನೀರಿಂಗಿಸುವುದು, ಧಾರ್ಮಿಕ ಕೇಂದ್ರಗಳ ಸ್ವಚ್ಛತೆ ವಿಶೇಷ ಕಾಲಜಿ ನೀಡಲಾಗುತ್ತಿದೆ. ಯೋಜನೆ ಜಾರಿಗೆ ಬಂದ ಬಳಿಕ ಮಹಿಳೆಯರು ಬ್ಯಾಂಕ್, ಸಹಕಾರ ಸಂಘಗಳ ವ್ಯವಹಾರದಲ್ಲಿ ಸಾಕಷ್ಟು ಅನುಭವ ಪಡೆದುಕೊಂಡಿದ್ದು ಸ್ವಾವಲಂಬನೆಯ ಬದುಕು ನೀಡಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ಮೇಲೆತ್ತುವ ಕಾರ್ಯುಕ್ರಮ ಯೋಜನೆಯಿಂದಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಪದಪ್ರಧಾನ ಮಾಡಿದ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಮಾತನಾಡಿ, ಸಂಘದ ಸದಸ್ಯರಿಗೆ ಸಂಘ ನಮ್ಮದು ಎಂಬ ಭಾವನೆ ಬಹುಮುಖ್ಯ. ಸಾಲಕ್ಕಾಗಿ ಸಂಘಟನೆ ಅಲ್ಲ. ಸಂಘಟನೆ ಸಬಲೀಕರಣಕ್ಕಾಗಿರುವುದು. ಸಾಲ ಪಡೆದುಕೊಳ್ಳುವ ಉದ್ದೇಶದಿಂದ ಸಂಘಕ್ಕೆ ಸೇರಬಾರದು. ಸಾಲ ನಮ್ಮ ಆವಶ್ಯಕತೆ ಪೂರೈಸಲು. ಸಾಲದ ಕಂತುಗಳ ಪಾವತಿಯ ಮೂಲಕ ಉಳಿತಾಯವಾಗುತ್ತದೆ. ಉಳಿತಾಯದ ಮೂಲಕ ಪ್ರಗತಿ ಸಾಧಿಸಲಾಗುತ್ತಿದೆ ಎಂದು ಹೇಳಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವ ಸಹಾಯ ಸಂಘಗಳಿಂದಾಗಿ ಸದಸ್ಯರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಬಂಧುತ್ವ ವೃದ್ಧಿಯಾಗುತ್ತಿದ್ದು ಇತಿಹಾಸ ಮತ್ತೆ ಮರುಕಳಿಸುತ್ತಿದೆ. ಹೆಸರಿನಂತೆ ಆರ್ಥಿಕ ಪ್ರಗತಿಯ ಜೊತೆಗೆ ಜನರಲ್ಲಿ ಬಂಧುತ್ವವನ್ನು ವೃದ್ಧಿಸುತ್ತಿದೆ. ಆರ್ಥಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕವಾಗಿಯೂ ಸಮಾಜದಲ್ಲಿ ಬಂಧುತ್ವ ನೀಡುತ್ತಿದೆ. ಸ್ವ ಉದ್ಯೋಗದಲ್ಲಿ ಕ್ರಾಂತಿಯನ್ನೇ ಮಾಡಿದೆ ಎಂದು ಹೇಳಿದ ಅವರು ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಮಹಾತ್ಮ ಗಾಂಧಿಜಿಯವರ ರಾಮರಾಜ್ಯ, ಗ್ರಾಮ ಸ್ವರಾಜ್ಯ ಕನಸು ಸಾಕಾರಗೊಳ್ಳುತ್ತಿದೆ ಎಂದರು. ವಲಯಾಧ್ಯಕ್ಷೆ ಸ್ವರ್ಣಲತಾ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಕೇಂದ್ರ ಒಕ್ಕೂಟ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಗುಂಡೊಳೆ, ನಗರ ಸಭಾ ಸದಸ್ಯ ದೀಕ್ಷಾ ಪೈ ಸಂದರ್ಭೋಚಿತವಾಗಿ ಮಾತನಾಡಿದರು. ಅಮೃತಾ ಸ್ವಸಹಾಯ ಸಂಘದ ಉಮೇಶ್ ಮೊಟ್ಟೆತ್ತಡ್ಕ, ಚಿಕ್ಕಮುಡ್ನೂರು ದೀಪಾ ಸ್ವಸಹಾಯ ಸಂಘದ ಶೋಭಾ ಅನಿಸಿಕೆ ವ್ಯಕ್ತಪಡಿಸಿದರು. ವಲಯದ ವಿವಿಧ ವಲಯಗಳ ನೂತನ ಹಾಗೂ ನಿಕಟಪೂರ್ವ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗಾಯಕ ಜಗದೀಶ್ ಆಚಾರ್ಯ ಪ್ರಾರ್ಥಿಸಿದರು. ತಾಲೂಕು ಯೋಜನಾಧಿಕಾರಿ ಜನಾರ್ದನ ಎಸ್. ಸ್ವಾಗತಿಸಿ, ಮೇಲ್ವಿಚಾರಕಿ ಪಾವನಾ ವರದಿ ವಾಚಿಸಿದರು. ಚೇತನ್, ನಯನಾ, ರಾಮಣ್ಣ ಪೂಜಾರಿ, ಪ್ರಸನ್ನ, ಮಮತಾ, ತಿಮ್ಮಪ್ಪ ಹಾಗೂ ಮನೋಹರ್ ಅತಿಥಿಗಳಿಗೆ ಹೂ ಗುಚ್ಚ ನೀಡಿ ಸ್ವಾಗತಿಸಿದರು. ನೆಲ್ಯಾಡಿ ವಲಯದ ಮೇಲ್ವಿಚಾರಕ ಸಂದೇಶ್ ಕಾರ್ಯಕ್ರಮ ನಿರೂಪಿಸಿ, ದಿಲೀಪ್ ವಂದಿಸಿದರು.

ಸತ್ಯನಾರಾಯಣ ಪೂಜೆ:
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಿತು. ಸಭಾ ಕಾರ್ಯಕ್ರಮದ ಬಳಿಕ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.