HomePage_Banner
HomePage_Banner
HomePage_Banner

ಮಾಂತೂರು ಹಿದಾಯತುಲ್ ಇಸ್ಲಾಂ ಮದರಸದಲ್ಲಿ ಪ್ರಾರಂಭೋತ್ಸವ-‘ಮಿಹ್ರಜಾನುಲ್ ಬಿದಾಯ 2019’

Puttur_Advt_NewsUnder_1
Puttur_Advt_NewsUnder_1

ಸವಣೂರು: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಂಗೀಕಾರದೊಂದಿಗೆ ಕಾರ್ಯಾಚರಿಸುತ್ತಿರುವ ಮಾಂತೂರು ಹಿದಾಯತುಲ್ ಇಸ್ಲಾಂ ಮದರಸದಲ್ಲಿ ಈ ಶೈಕ್ಷಣಿಕ ವರ್ಷದ ‘ಪ್ರಾರಂಭೋತ್ಸವ-ಮಿಹ್ರಜಾನುಲ್ ಬಿದಾಯ 2019’ ಕಾರ್ಯಕ್ರಮ ಜೂನ್ 16ರಂದು ಬೆಳಿಗ್ಗೆ ಮದರಸದ ಸಭಾಂಗಣದಲ್ಲಿ ನಡೆಯಿತು.

ಬದ್ರಿಯಾ ಜುಮ್ಮಾ ಮಸೀದಿ ಚಾಪಲ್ಲ ಇದರ ಆಡಳಿತ ಸಮಿತಿ ಸದಸ್ಯರಾದ ಅಬ್ದುಲ್ಲಾ ಎಸ್.ಇ ಅಧ್ಯಕ್ಷತೆ ವಹಿಸಿದ್ದರು.ಪೋಷಕರಾದ ಅಶ್ರಫ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.

ಮದ್ರಸದ ಮುಖ್ಯಗುರು ಸಿದ್ದೀಕ್ ಮುಸ್ಲಿಯಾರ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ” ಅರಿವು ಪಡೆಯಬೇಕಾದದ್ದು ಮನುಷ್ಯನ ಮೂಲಭೂತ ಹಕ್ಕು.ಪಡೆದ ಜ್ಞಾನವನ್ನು ಬದುಕಿನಲ್ಲಿ ಸರಿಯಾಗಿ ಅಳವಡಿಸಿಕೊಡರೆ ಯಶಸ್ಸು ಗಳಿಸಬಹುದು.ಮದರಸಕ್ಕೆ ಮಕ್ಕಳನ್ನು ಕ್ಲಪ್ತ ಸಮಯಕ್ಕೆ ಕಳುಹಿಸಲು ಪೋಷಕರು ಮುತುವರ್ಜಿ ವಹಿಸಬೇಕು.ಮದರಸದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಪೋಷಕರು ಸಹಭಾಗಿಗಳಾಬೇಕು” ಎಂದು ಹೇಳಿದರು.

ವೇದಿಕೆಯಲ್ಲಿ ರಿಫಾಯಿಯ್ಯಾ ದಫ್ ಸಮಿತಿಯ ಅಧ್ಯಕ್ಷರಾದ ಆದು ಹಾಜಿ ಸೋಂಪಾಡಿ, ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ರಫೀಕ್ ಎಂ ಎ ಉಪಸ್ಥಿತರಿದ್ದರು.ಮದರಸ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸಹಶಿಕ್ಷಕರಾದ ಶರೀಫ್ ಮುಸ್ಲಿಯಾರ್ ಸ್ವಾಗತಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.