ಸ್ಪಂದನಾ ಸೇವಾ ಸಂಘದ 98ನೇ ಸೇವಾ ಯೋಜನೆಯಿಂದ ಪ್ರೇಕ್ಷಾಳಿಗೆ 15000ರೂ ಚಿಕಿತ್ಸಾ ಸಹಾಯಾರ್ಥ

0

ಮಲವಂತಿಗೆ: ಸ್ಪಂದನಾ ಸೇವಾ ಸಂಘದ 98ನೇ ಸೇವಾ ಯೋಜನೆಯ ಧನಸಹಾಯವನ್ನು ಆರ್ಥಿಕ ಸಂಕಷ್ಟದಲ್ಲಿದ್ದು ತೀವ್ರ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಿರುವ ಮಲವಂತಿಗೆ ಗ್ರಾಮದ ದಿಡುಪೆ ಕೊಟ್ಟರಿಮಾರು ನಿವಾಸಿ ಸುರೇಶ್ ಗೌಡ ಇವರ 5ವರ್ಷದ ಪುತ್ರಿ ಪ್ರೇಕ್ಷಾ ಇವಳಿಗೆ ಚಿಕಿತ್ಸಾ ಸಹಾಯಾರ್ಥವಾಗಿ ರೂ 15,000/- ದ ಚೆಕ್ಕನ್ನು ಬೆಳ್ತಂಗಡಿ ವಾಣಿ ಸೌಹಾರ್ದ ಕೋ-ಅಪರೇಟೀವ್ ಸೊಸೈಟಿಯಲ್ಲಿ ವಾಣಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಪ್ರಸಾದ್ ಗೌಡ ಕಡ್ತಿಮಾರು ಇವರ ಮೂಲಕ ಫಲಾನುಭವಿಯ ತಂದೆಗೆ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿಕಟ ಪೂರ್ವ ಕಾರ್ಯದರ್ಶಿ, ಸ್ಪಂದನಾ ಸೇವಾ ಸಂಘದ ಸಂಚಾಲಕರಾದ ಮೋಹನ್ ಗೌಡ ಕೊಯ್ಯೂರು, ವಾಣಿ ಸೌಹಾರ್ದ ಕೋ-ಅಪರೇಟೀವ್ ಸೊಸೈಟಿ (ಲಿ.) ನಿರ್ದೇಶಕರಾದ ಸುರೇಶ್ ಕೌಡಂಗೆ, ವಾಣಿ ಕಾಲೇಜಿನ ಉಪನ್ಯಾಸಕಿ  ಮೀನಾಕ್ಷಿ ಮತ್ತು ಉಪನ್ಯಾಸಕ ಬೆಳಿಯಪ್ಪ ಗೌಡ, ಸೀತಾರಾಮ್ ಬೆಳಾಲು, ಉಮೇಶ್ ಗೌಡ ಮೈರ್ನೋಡಿ, ವಾಣಿ ಸೊಸೈಟಿ ಸಿಬ್ಬಂದಿಗಳು ಹಾಗೂ ಸ್ಪಂದನಾ ಸೇವಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here