ಜಿಲ್ಲಾ ವಕ್ಫ್ ಸಮಿತಿಯಿಂದ ನ.26 ರಂದು ಮಂಗಳೂರಿನಲ್ಲಿ “ಜಮಾಅತ್ ಅದಾಲತ್” ವಕ್ಫ್ ಸೌಲಭ್ಯಗಳ ಮಾಹಿತಿ ಕಾರ್ಯಾಗಾರ: ಕಾಜೂರು ಆಡಳಿತ ಮಂಡಳಿಯನ್ನು ಭೇಟಿ ಮಾಡಿದ ವಕ್ಫ್ ಜಿಲ್ಲಾ ಸಲಹಾ‌ ಮಂಡಳಿ

0

ಬೆಳ್ತಂಗಡಿ:   ನ.26 ರಂದು ಮಂಗಳೂರು ಪುರಭವನದಲ್ಲಿ ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ವತಿಯಿಂದ ಜರುಗಲಿರುವ “ಜಮಾಅತ್ ಅದಾಲತ್” ಇನ್ಫೋ ವಕ್ಫ್ – ವಕ್ಫ್ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮದ ಪ್ರಚಾರಾರ್ಥ ಇಂದು ಕಾಜೂರು ಆಡಳಿತ ಮಂಡಳಿಯನ್ನು ವಕ್ಫ್ ಜಿಲ್ಲಾ ಸಲಹಾ ಮಂಡಳಿಯ ಪದಾಧಿಕಾರಿಗಳು ಭೇಟಿ ಮಾಡಿ ಮಾತುಕತೆ ನಡೆಸಿದರು.

ವಕ್ಫ್ ಜಿಲ್ಲಾ ಸಲಹಾ ಸಮಿತಿ ಉಪಾಧ್ಯಕ್ಷ, ಮಾಸ್ಟರ್ ಫ್ಲವರ್ಸ್ ಮಂಗಳೂರು ಉದ್ಯಮಿ ಫಕೀರಬ್ಬ ಮರೋಡಿ,‌ ಮತ್ತೋರ್ವ ಉಪಾಧ್ಯಕ್ಷ ಎ.ಕೆ ಜಮಾಲ್, ಸದಸ್ಯ ಎಸ್.ಡಿ ಮುಹಮ್ಮದ್ ಶಾಕೀರ್ ಕಣ್ಣೂರು ಮತ್ತು ಎಂ.‌ಸಲೀಂ ಬೆಂಗರೆ ಇವರು ಉಪಸ್ಥಿತರಿದ್ದರು.

ನಿಯೋಗವನ್ನು ಕಾಜೂರು ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ವಕ್ಫ್ ಜಿಲ್ಲಾ ಸಲಹಾ ಸಮಿತಿ ಸದಸ್ಯ, ಕಾಜೂರು ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು ಅವರು ಬರಮಾಡಿಕೊಂಡು ಶಾಲು ಹೊದೆಸಿ‌ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಯಾಕೂಬ್ ಎನ್.ಎಂ, ಎಸ್‌ಎಮ್‌ಎ ಮುರ ರೀಜಿನಲ್ ಅಧ್ಯಕ್ಷ ವಝೀರ್ ಬಂಗಾಡಿ ಮೊದಲಾದವರು ಉಪಸ್ಥಿತರಿದ್ದರು. ಅಶ್ರಫ್ ಆಲಿಕುಂಞಿ ಸ್ವಾಗತಿಸಿದರು.

LEAVE A REPLY

Please enter your comment!
Please enter your name here