Home_Page_Advt
Home_Page_Advt
Home_Page_Advt

ಮನೆ ಮೆನೆಯಲ್ಲಿ ಪೈಪ್ ಕಾಂಪೋಸ್ಟ್-ಬೊಳುವಾರು ವಾರ್ಡ್‌ನಲ್ಲಿ ನಾಗರಿಕರ ಪ್ರೋತ್ಸಾಹ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಸಿಕಸವನ್ನು ವಿಲೇವಾರಿ ಮಾಡುವ ನಿಟ್ಟಿನಲ್ಲಿ ಮನೆ ಮನೆಯಲ್ಲಿ ಪೈಪ್ ಕಾಂಪೋಸ್ಟ್ ಅಳವಡಿಸುವ ನಗರಸಭೆ ಯೋಜನೆಗೆ ಬೊಳುವಾರು ವಾರ್ಡ್ ನಗರಸಭೆ ಸದಸ್ಯ ಸಂತೋಷ್ ಕುಮಾರ್ ಅವರ ನೇತೃತ್ವದಲ್ಲಿ ನಾಗರಿಕರ ಪ್ರೋತ್ಸಾಹ ಸಿಕ್ಕಿದೆ.

ಜೂ. 15ರಂದು ಶ್ರೀ ಗಣೇಶ್ ಪ್ರಸಾದ್ ಹೊಟೇಲ್ ಮಾಲಕ ಗೋಪಾಲಕೃಷ್ಣ ಹೇರಳೆ ಅವರ ಕರ್ಮಲ ಮನೆಯಲ್ಲಿ ಪೈಪ್ ಕಾಂಪೋಸ್ಟಿಂಗ್ ಅಳವಡಿಕೆ ಮಾಡಲಾಯಿತು. ಗೋಪಾಲಕೃಷ್ಣರವರ ಪತ್ನಿ ಶ್ರೀಮತಿ ಸುಧಾ ಗೋಪಾಲಕೃಷ್ಣ ಹೇರಳೆಯವರು ಪೈಪ್‌ಗೆ ತ್ಯಾಜ್ಯವನ್ನು ಹಾಕುವ ಮೂಲಕ ಚಾಲನೆ ನೀಡಿದರು. ಬಳಿಕ ಬೊಳುವಾರು ಕೊಂಕಣ್ ಗ್ಯಾಸ್ ಸಂಸ್ಥೆಯ ಮಾಲಿಕ ಉದಯ ಭಟ್ ರವರ ಮನೆಯಲ್ಲಿ ಪೈಪ್ ಕಾಂಪೋಸ್ಟಿಂಗ್ ಅಳವಡಿಕೆ ಕಾರ್ಯಕ್ರಮ ನಡೆಯಿತು. ಉದಯ ಭಟ್ ರವರ ಪತ್ನಿ ಶ್ರೀಮತಿ ರಮಾ ಉದಯ ಭಟ್ ರವರು ಅಳವಡಿಸಲಾದ ಪೈಪ್ ಗೆ ತ್ಯಾಜ್ಯವನ್ನು ಹಾಕುವ ಮೂಲಕ ಚಾಲನೆ ನೀಡಿದರು.

ಸ್ಥಳೀಯ ನಗರಸಭಾ ಸದಸ್ಯ ಸಂತೋಷ್ ಕುಮಾರ್, ನಗರಸಭೆಯ ಪರಿಸರ ಅಭಿಯಂತರರಾದ ಗುರುಪ್ರಸಾದ್ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ. ಕೆ, ಸ್ಯಾನಿಟರಿ ದಫೇದಾರ್ ಐತಪ್ಪ, ರಾಧಾಕೃಷ್ಣ, ಸ್ಥಳೀಯರಾದ ದಯಾಕರ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.