

ಸವಣೂರು: ಭಾರತ ಸರಕಾರದ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಸಂಪೂರ್ಣ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಜೂನ್ ತಿಂಗಳಿಡೀ ಗ್ರಾಮ ಮಟ್ಟದಲ್ಲಿ ಸ್ವಚ್ಚಮೇವ ಜಯತೇ ಎಂಬ ವಿಶೇಷ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಸ.ಉ..ಹಿ.ಪ್ರಾ. ಶಾಲೆ ಸವಣೂರು ಇಲ್ಲಿ ಸವಣೂರು ಕ್ಲಸ್ಟರ್ ಹಂತದ ಪ್ರಾಥಮಿಕ ಶಾಲಾ ಮಕ್ಕಳಿಗೆ ನಡೆದ ಸ್ವಚ್ಛಮೇವ ಜಯತೇ ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪ್ಪಾಡಿಗೆ ಎರಡೂ ವಿಭಾಗಗಳಲ್ಲಿ ಬಹುಮಾನ ಲಭಿಸಿದೆ. ಪುಣ್ಚಪ್ಪಾಡಿ ರಾಜು ಕುಲಾಲ್ ಹಾಗೂ ಯಶೋಧ ದಂಪತಿಗಳ ಪುತ್ರ ಪಿ.ಆರ್. ಮೋಕ್ಷಿತ್ 7ನೇ ತರಗತಿ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪುಣ್ಚಪ್ಪಾಡಿ ಸುರೇಶ್ ಬಿ.ಎಸ್. ಹಾಗೂ ಸುಮತಿ ದಂಪತಿಗಳ ಪುತ್ರಿ ಸುಹಾನಿ 7ನೇ ತರಗತಿ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಶಾಲಾ ಮುಖ್ಯಗುರು ರಶ್ಮಿತಾ ನರಿಮೊಗರುರವರು ತಿಳಿಸಿದ್ದಾರೆ.