HomePage_Banner
HomePage_Banner
HomePage_Banner

ಅಶೋಕ್ ರೈಯವರಿಂದ 78ನೇ ಮನೆ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕುಸಿಯುವ ಹಂತದಲ್ಲಿದ್ದ ಮನೆಗಳಿಗೆ ಮರು ಜೀವ ನೀಡುವ ಮೂಲಕ ಬಡವರ ಬಾಳಿನ ಬೆಳಕಾಗಿದ್ದ ಅಶೋಕ್ ಕುಮಾರ್ ರೈ ಪ್ರವರ್ತಕರಾಗಿರುವ ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ ಜೂ.15ರಂದು ಬಪ್ಪಳಿಗೆ ಸಿಂಗಾಣಿಯಲ್ಲಿ 78ನೇ ಮನೆಯನ್ನು ಹಸ್ತಾಂತರಿಸಿದರು.

ಬಪ್ಪಳಿಗೆ ಸಿಂಗಾಣಿ ಕಾಲೋನಿ ಬಡ ಮಹಿಳೆ ಸರೋಜರವರ ಮನೆ ಮಾಡು ಕುಸಿಯುವ ಹಂತದಲ್ಲಿದ್ದು ಮನೆಯು ವಾಸಕ್ಕೆ ಅಯೋಗ್ಯವಾಗಿತ್ತು. ಇದರ ಬಗ್ಗೆ ಅಶೋಕ್ ರೈಯವರ ಗಮನಕ್ಕೆ ಬಂದಿದ್ದು ಅವರು ಭೇಟಿ ನೀಡಿ ಮಾಡು ದುರಸ್ಥಿಗೊಳಿಸುವ ಭರವಸೆ ನೀಡಿದ್ದರು. ಅದರಂತೆ ಮನೆಯ ಮಾಡುನ್ನು ಅಳವಡಿಸಿಕೊಟ್ಟಿದ್ದು ಆ ಮನೆಯನ್ನು ಹಸ್ತಾಂತರಿಸಿದರು.

ಮನೆ ಹಸ್ತಾಂತರಿಸಿದ ಅಶೋಕ್ ಕುಮಾರ್ ರೈಯವರು ಮಾತನಾಡಿ, ಸಮಾಜದಲ್ಲಿರುವ ಕಟ್ಟ ಕಡೆಯ ವ್ಯಕ್ತಿಗೆ ನೋವಿಗೆ ಸ್ಪಂಧಿಸಿದಾಗ ಮಾತ್ರ ಅವರು ಸಮಾಜದಲ್ಲಿ ಮೇಲೆ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಟ್ರಸ್ಟ್‌ನಿಂದ ಸಮಾಜದ ಕಡು ಬಡವರಿಗೆ ಸಹಕಾರ ಪ್ರೋತ್ಸಾಹಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮನೆಗೆ ವಿದ್ಯುತ್ ಸಂಪರ್ಕ ಒದಗಿಸಿಕೊಡುವ ಭರವಸೆ ನೀಡಿದರು.

ನಮ್ಮ ಬಾಳಿನ ಬೆಳಕು:
ನಮ್ಮ ಮನೆಯು ಕುಸಿಯುವ ಹಂತದಲ್ಲಿದ್ದು ಈ ವರ್ಷದ ಮಳೆಗಾಲದಲ್ಲಿ ಮನೆಯಲ್ಲಿ ವಾಸ ಮಾಡುವುದು ಅಸಾಧ್ಯವಾಗಿತ್ತು. ಕುಸಿಯು ಹಂತದಲ್ಲಿದ್ದ ಮನೆಯ ಛಾವಣಿಯವನ್ನು ದುರಸ್ಥಿಗೊಳಿಸುವ ಮೂಲಕ ಅಶೋಕ್ ಕುಮಾರ್ ರೈಯವರು ನಮ್ಮ ಬಾಳಿನ ಬೆಳಕಾಗಿದ್ದಾರೆ ಎಂದು ಮನೆಯ ಮಾಲಕಿ ಸರೋಜರವರು ಹೇಳಿದರು. ಟ್ರಸ್ಟ್ ಆದರ್ಶ ಶೆಟ್ಟಿ ಉಪ್ಪಿನಂಗಡಿ, ಜಗದೀಶ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.