Home_Page_Advt
Home_Page_Advt
Home_Page_Advt

ನೂರಾನಿಯ್ಯ ಮದ್ರಸ ಪ್ರಾರಂಭೋತ್ಸವ

Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಸುಸಂಸ್ಕೃತ ಹಾಗೂ ಮಾದರಿ ಸಮಾಜ ನಿರ್ಮಾಣಕ್ಕೆ ಧಾರ್ಮಿಕ ಶಿಕ್ಷಣ ಅನಿವಾರ್ಯ ವೆಂದು ಕೋಲ್ಪೆ ಖತೀಬರಾದ ಉಸ್ತಾದ್ ಅಬ್ದುರ್ರಶೀದ್ ರಹ್ಮಾನಿ ಹೇಳಿದರು. ಕೋಲ್ಪೆ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನೂರಾನಿಯ್ಯ ಮದ್ರಸದ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಹಾಗೂ ಸ್ವಾಗತ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಇಸ್ಲಾಂ ಧರ್ಮವು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಮಹತ್ವದ ಬಗ್ಗೆ ವಿವರಿಸಿ, ಮನುಷ್ಯನ ಜೀವನದ ಸರ್ವ ಮಜಲುಗಳನ್ನು ಸ್ಪಷ್ಟವಾಗಿ ಸ್ಪರ್ಶಿಸುವ ಇಸ್ಲಾಂ ಧರ್ಮವು ಮಾದರಿ ಜೀವನ ನಡೆಸಲು ಆದೇಶಿಸುತ್ತದೆ. ಈ ಜೀವನಕ್ಕೆ ಧರ್ಮವು ಕಲಿಸುವ ರೀತಿ ನೀತಿಗಳ ಪಾಲನೆ ಅಗತ್ಯ ವಾಗಿದ್ದು, ಅದಕ್ಕೆ ಧಾರ್ಮಿಕ ಶಿಕ್ಷಣ ಅನಿವಾರ್ಯ ಎಂದರು. ಇಂದಿನ ಕಾಲದಲ್ಲಿ ನಡೆಯುವ ಅನಾಚಾರ, ದುರ್ನಡತೆ, ಮಾದಕ ದ್ರವ್ಯ ಸೇವನೆಗಳ ಮೊದಲಾದ ಪೈಶಾಚಿಕ ಕೃತ್ಯಗಳಿಗೆ ಧಾರ್ಮಿಕ ಶಿಕ್ಷಣದ ಕೊರತೆಯೇ ಮೂಲಕಾರಣವಾಗಿದ್ದು ಪೋಷಕರು ಈ ಬಗ್ಗೆ ಜಾಗೃತರಾಗಬೇಕೆಂದು ಕರೆನೀಡಿದರು.

ಕೋಲ್ಪೆ ಬದ್ರಿಯಾ ಮಸೀದಿ ಅಧ್ಯಕ್ಷರಾದ ಕೆ.ಕೆ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಅಬ್ದುಲ್ಲ ತಂಙಳ್ ಕೋಲ್ಪೆ ದುಆ ಮಾಡಿದರು. ಮದ್ರಸಾ ಮುಖ್ಯ ಅಧ್ಯಾಪಕರಾದ ಯೂಸುಫ್ ಮುಸ್ಲಿಯಾರ್ ತುರ್ಕಳಿಕೆ ಮದ್ರಸ ಶಿಕ್ಷಣದ ಬಗ್ಗೆ ಮಾತನಾಡಿ ಸರ್ವ ಜಮಾಅತರ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಖಲಂದರ್ ಷಾ ದಫ್ ಸಮಿತಿ ಕೋಲ್ಪೆ ಇದರ ವತಿಯಿಂದ ನೂತನ ಉಸ್ತಾದರುಗಳನ್ನು ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ಕೊಚ್ಚಿಲ ಮಸೀದಿಯ ಇಮಾಂ ಝಕರಿಯಾ ಮೌಲವಿ ಮರ್ಧಾಳ, ಕೆ.ಕೆ. ಉಸ್ಮಾನ್ ಹಾಜಿ ಕೋಲ್ಪೆ ಶುಭ ಹಾರೈಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ, ಜಮಾಅತ್ ಉಪಾಧ್ಯಕ್ಷರಾದ ಅಬ್ದುಲ್ಲ ಕುಂಞಿ ಗೋಳಿತೊಟ್ಟು, ಪ್ರ.ಕಾರ್ಯದರ್ಶಿ ರಂಜಾನ್ ಸಾಹೆಬ್, ಖಲಂದರ್ ಷಾ ದಫ್ ಸಮಿತಿ ಕೋಶಾಧಿಕಾರಿ ಎಸ್.ಕೆ ರಝಾಕ್, ಮದ್ರಸಾ ಉಸ್ತುವಾರಿ ಯು.ಕೆ ಹಮೀದ್, ಎ.ಎಂ.ವೈ.ಎ.ಗೋಳಿತೊಟ್ಟು ಅಧ್ಯಕ್ಷರಾದ ಪಿ.ಎಸ್ ಹಾರಿಸ್, ಗೋಳಿತೊಟ್ಟು ಎಸ್ಕೆಎಸ್‌ಎಸ್‌ಎಫ್ ಅಧ್ಯಕ್ಷರಾದ ಇಲ್ಯಾಸ್, ಅಧ್ಯಾಪಕರುಗಳಾದ ಯು.ಪಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಉರುವಾಲ್ ಪದವು, ಅಬ್ದುರ್ರಹ್ಮಾನ್ ಮುಸ್ಲಿಯಾರ್ ಗಂಡಿಬಾಗಿಲು, ಅಬ್ಬಾಸ್ ಮುಸ್ಲಿಯಾರ್ ಕರಾಯ ಉಪಸ್ಥಿತರಿದ್ದರು. ಖಲಂದರ್ ಷಾ ದಫ್ ಸಮಿತಿ ಅಧ್ಯಕ್ಷರಾದ ಕೆ.ಕೆ ಇಸ್ಮಾಯಿಲ್ ಹಾಜಿ ಸ್ವಾಗತಿಸಿ,ಪ್ರ. ಕಾರ್ಯದರ್ಶಿ ಸ್ವಾದಿಕ್ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು. ಎಸ್‌ಕೆಎಸ್‌ಎಸ್‌ಎಫ್ ಕೋಲ್ಪೆ ಕ್ಲಸ್ಟರ್ ಅಧ್ಯಕ್ಷರಾದ ರಹೀಂ ಕೋಲ್ಪೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.