HomePage_Banner
HomePage_Banner
HomePage_Banner

ಬಂಟರ ಭವನದಲ್ಲಿ ತಾಲೂಕು ಯುವ ಬಂಟರ ಸಂಘದ ವತಿಯಿಂದ ಸತ್ಯನಾರಾಯಣ ಪೂಜೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಯುವ ಬಂಟರ ಸಂಘ, ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಮತ್ತು ಬಂಟರ ಸಂಘ ಪುತ್ತೂರು ತಾಲೂಕು ಇದರ ಮಾರ್ಗದರ್ಶನದಲ್ಲಿ ಮಹಿಳಾ ಮತ್ತು ವಿದ್ಯಾರ್ಥಿ ಬಂಟರ ಸಂಘ ಪುತ್ತೂರು ತಾಲೂಕು ಇದರ ಸಹಯೋಗದಲ್ಲಿ ಗಣಹೋಮ ಮತ್ತ ಶ್ರೀ ಸತ್ಯನಾರಾಯಣ ಪೂಜೆ ಜೂ.16ರಂದು ಪುತ್ತೂರು ಸುಂದರ್‌ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.

ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಪ್ರಕಾಶ್ ರೈ ಸಾರಕೆರೆ, ನಿಕಟಪೂರ್ವಾಧ್ಯಕ್ಷ ರವೀಂದ್ರ ರೈ ನೆಕ್ಕಿಲು, ಕೋಶಾಧಿಕಾರಿ ಸದಾಶಿವ ಶೆಟ್ಟಿ ಮಾರಂಗ, ಧಾರ್ಮಿಕ ಸಂಚಾಲಕ ಅರವಿಂದ ಭಗವಾನ್ ರೈ, ಜೊತೆ ಕಾರ್ಯದರ್ಶಿ ಕಿರಣಾ ವಿ. ರೈ ಹಾಗೂ ಯುವ ಬಂಟರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರುಗಳು, ಬಂಟರ ಯಾನೆ ನಾಡವರ ಮಾತೃ ಸಂಘದ ಜೊತೆ ಕಾರ್ಯದರ್ಶಿ ಕಾವು ಹೇಮನಾಥ ಶೆಟ್ಟಿ, ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಸಹಸಂಚಾಲಕ ಅಜಯ್ ಆಳ್ವ ಬಳ್ಳಮಜಲು, ಮಾತೃ ಸಂಘದ ನಿರ್ದೇಶಕರುಗಳಾದ ಸವಣೂರು ಸೀತಾರಾಮ ರೈ, ಚಿಕ್ಕಪ್ಪ ನಾಯಕ್ ಅರಿಯಡ್ಕ, ಜಯಪ್ರಕಾಶ್ ರೈ ನೂಜಿಬೈಲು, ಜಯರಾಜ್ ಭಂಡಾರಿ, ನೋಣ ಆಳ್ವ ಡಿಂಬ್ರಿ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಅರಿಯಡ್ಕ ಲಕ್ಷ್ಮೀ ನಾರಾಯಣ ಶೆಟ್ಟಿ, ಕಾರ್ಯದರ್ಶಿ ಶಶಿಕುಮಾರ್ ರೈ ಬಾಲ್ಯೊಟ್ಟು, ಕೋಶಾಧಿಕಾರಿ ರಮೇಶ್ ರೈ ಡಿಂಬ್ರಿ, ನಿರ್ದೇಶಕರುಗಳಾದ ಸಾಜ ರಾಧಾಕೃಷ್ಣ ಆಳ್ವ, ನಾರಾಯಣ ರೈ ಬಾರಿಕೆ, ಕೃಷ್ಣಪ್ರಸಾದ್ ಆಳ್ವ, ನಯನಾ ವಿ.ರೈ, ರಾಕೇಶ್ ರೈ ಕೆಡಿಂಜೆ, ಯಮುನಾ ಎಸ್. ರೈ ಗುತ್ತುಪಾಲು, ಸುಭಾಷ್ ಕುಮಾರ್ ಶೆಟ್ಟಿ, ಹರಿಣಾಕ್ಷಿ ಜೆ. ಶೆಟ್ಟಿ, ಬೂಡಿಯಾರ್ ರಾಧಾಕೃಷ್ಣ ರೈ, ಸಬಿತಾ ಭಂಡಾರಿ, ಸದಾಶಿವ ರೈ ಸೂರಂಬೈಲು, ತಿಲಕ್ ರೈ ಕುತ್ಯಾಡಿ, ಸುಬ್ಬಣ್ಣ ರೈ ಖಂಡಿಗ, ಮೋಹನ್ ಪಕ್ಕಳ ಕುಂಡಾಪು, ಸುದೇಶ್ ಶೆಟ್ಟಿ ತೆಂಕಿಲ, ಮಾಧವಿ ಬಿ.ರೈ ಉಪ್ಪಿನಂಗಡಿ, ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಕುಮುದಾ ಎಲ್.ಎನ್. ಶೆಟ್ಟಿ, ಉಪಾಧ್ಯಕ್ಷೆ ಮೀರಾ ಎಸ್.ರೈ, ಕೋಶಾಧಿಕಾರಿ ಆಶಾ ಎಸ್. ರೈ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರುಗಳು, ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಕಾವು ಸಹಿತ ನೂರಾರು ಮಂದಿ ಭಾಗವಹಿಸಿದರು.ಬಂಟರ ಭವನದ ಭಾಸ್ಕರ್ ರೈ, ಎಂ. ರವಿಚಂದ್ರ ರೈ ಕುಂಬ್ರ ಕಾರ್ಯಕ್ರಮದಲ್ಲಿ ಸಹಕರಿಸಿದರು. ಪೂಜಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು.

ಸರಳ ಸುಂದರ ಕಾರ್ಯಕ್ರಮ
ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಜರಗಿದ ಗಣಹೋಮ, ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಿತು. ಈ ಕಾರ್ಯಕ್ರಮ ಸರಳ ಸುಂದರವಾಗಿ ಮೂಡಿಬಂತು. ಕಾರ್ಯಕ್ರಮ ಯಶಸ್ಸಿಗಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು, ಮುಂದೆಯೂ ತಾಲೂಕು ಯುವ ಬಂಟರ ಸಂಘದ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು-ಪ್ರಕಾಶ್ ರೈ ಸಾರಕೆರೆ, ಅಧ್ಯಕ್ಷರು, ಯುವ ಬಂಟರ ಸಂಘ ಪುತ್ತೂರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.