ವಿಶ್ವಕಪ್: ಪಾಕ್ ವಿರುದ್ಧ ಭಾರತಕ್ಕೆ 89 ರನ್‌ಗಳ ಜಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಮ್ಯಾಂಚೆಸ್ಟರ್‌ನ ಎಮಿರೇಟಸ್ ಓಲ್ಡ್ ಟ್ರಾಫೋರ್ಡ್‌ನಲ್ಲಿ ಜೂ.16ರಂದು ನಡೆದ ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯವಾದ ಭಾರತ ಮತ್ತು ಪಾಕ್ ನಡುವಿನ ಪಂದ್ಯದಲ್ಲಿ ಭಾರತ ಡಿಎಲ್‌ಎಸ್ ನಿಯಮದ ಪ್ರಕಾರ 89 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಮತ್ತೆ ವಿಶ್ವಕಪ್‌ನಲ್ಲಿ ಭಾರತದ ಎದುರು ಪಾಕ್ ಸೋಲನ್ನು ಅನುಭವಿಸಿದೆ. 

ಟಾಸ್​​ ಸೋತು ಬ್ಯಾಟಿಂಗ್​​​ ಮಾಡಿದ ಟೀಂ ಇಂಡಿಯಾ 50 ಓವರ್​ಗಳಲ್ಲಿ 5 ವಿಕೆಟ್​​ ನಷ್ಟಕ್ಕೆ 336 ರನ್​​ ಗಳಿಸಿತು. ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ ಹಿಟ್​ಮ್ಯಾನ್​​ ರೋಹಿತ್​ ಶರ್ಮ (140) ಸ್ಫೋಟಕ ಶತಕ ಹಾಗೂ ಕನ್ನಡಿಗ ಕೆ.ಎಲ್​​. ರಾಹುಲ್​​​​​​​ ಮೊದಲ ವಿಕೆಟ್​ಗೆ 136 ರನ್​ ಜತೆಯಾಟವಾಡಿ ಉತ್ತಮ ಇನಿಂಗ್ಸ್​​ ಕಟ್ಟುವಲ್ಲಿ ಯಶಸ್ವಿಯಾದರು. ರೋಹಿತ್​​​​​​ ಎದುರಿಸಿದ 113 ಎಸೆತಗಳಲ್ಲಿ 3 ಸಿಕ್ಸರ್​​​​ ಹಾಗೂ 14 ಬೌಂಡರಿಗಳೊಂದಿಗೆ 140 ರನ್​ ಕಲೆ ಹಾಕಿದರು. ಈ ವೇಳೆ ಹಸನ್​​ ಅಲಿ ಎಸೆತದಲ್ಲಿ ರಿಯಾಜ್​ಗೆ ಕ್ಯಾಚಿತ್ತು ನಿರಾಸೆಯಿಂದ ಪೆವಿಲಿಯನ್​ ದಾರಿ ಹಿಡಿದರು. ರಾಹುಲ್​​​​​​ 78 ಎಸೆತಗಳಲ್ಲಿ 2 ಸಿಕ್ಸ್​​​ ಹಾಗೂ 3 ಬೌಂಡರಿಗಳೊಂದಿಗೆ 57 ರನ್​​ ಗಳಿಸಿ ರಿಯಾಜ್​​ ಎಸೆತದಲ್ಲಿ ವಿಕೆಟ್​​ ಕಳೆದುಕೊಂಡರು.

ಬಳಿಕ ಬಂದ ವಿರಾಟ್​ ಕೊಹ್ಲಿ ಎದುರಾಳಿ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ 65 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 77 ರನ್​​ ಕಲೆ ಹಾಕಿ ತಂಡವನ್ನು 300ರ ಗಡಿ ದಾಟಿಸಿದರು. ಈ ವೇಳೆ ಆಮೀರ್​​ ಎಸೆತದಲ್ಲಿ ಸರ್ಫರಾಜ್​​​ಗೆ ಕ್ಯಾಚಿತ್ತರು. ಈ ಮೂಲಕ ಶತಕ ವಂಚಿತರಾದರು.


ರೋಹಿತ್​ ನಂತರ ಬಂದ ಹಾರ್ದಿಕ್​​​​​ ಪಾಂಡ್ಯ ಒಂದು ಸಿಕ್ಸರ್​​ ಮತ್ತು 2 ಬೌಂಡರಿಗಳೊಂದಿಗೆ 26 ರನ್​​ ಗಳಿಸಿ ಮುನ್ನುಗ್ಗುತ್ತಿದ್ದ ವೇಳೆ ಆಮೀರ್​ ಎಸೆತದಲ್ಲಿ ಅಜಂ​ಗೆ ಕ್ಯಾಚಿತ್ತರೆ, ವಿಕೆಟ್​​ ಕೀಪರ್​​​​ ಮಹೇಂದ್ರ ಸಿಂಗ್​ ಧೋನಿ ಕೇವಲ ಒಂದು ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ವಿಜಯ ಶಂಕರ್​​​​ (15*) ಹಾಗೂ ಕೇದಾರ್​​ ಜಾಧವ್​​​​​​ (9*) ರನ್​ ಗಳಿಸಿದರು.

ಪಾಕ್​​ ಪರ ಬೌಲಿಂಗ್​ ಮಾಡಿದ ಮೊಹಮದ್​ ಆಮೀರ್ 3, ಹಸನ್​​ ಅಲಿ ಹಾಗೂ ವಹಬ್​​​​​ ರಿಯಾಜ್​​ ತಲಾ ಒಂದು ವಿಕೆಟ್​​​ ಕಬಳಿಸುವಲ್ಲಿ ಸಫಲರಾದರು.

ಭಾರತ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಪಾಕ್ 35 ಓವರ್‌ನಲ್ಲಿ 6 ವಿಕೆಟ್ ಕಳೆದುಕೊಂಡು 166 ರನ್ ಮಾಡಿದಾಗ ಮಳೆ ಬಂದು ಆಟ ಅರ್ಧದಲ್ಲಿ ನಿಂತಿತು. ನಂತರ ಡಿಎಲ್‌ಎಸ್ ನಿಯಮದ ಪ್ರಕಾರ 30 ಬಾಲ್‌ನಲ್ಲಿ 136 (ಒಟ್ಟು 40 ಓವರ್‌ನಲ್ಲಿ 302) ರನ್‌ಗಳ ಗುರಿ ನೀಡಲಾಯಿತು. ಮಳೆ ನಿಂತ ಬಳಿಕ ಮತ್ತೆ ಬ್ಯಾಟಿಂಗ್‌ಗೆ ಇಳಿದ ಪಾಕ್ 40 ಓವರ್‌ನಲ್ಲಿ 6 ವಿಕೆಟ್ ಕಳೆದುಕೊಂಡು 212 ರನ್ ಮಾಡಿ ಸೋಲೊಪ್ಪಿಕೊಂಡಿತು. ಝಮಾನ್ 62, ಅಝಾಮ್ 48, ವಾಶಿಮ್ 46 ರನ್ ಮಾಡಿದರೆ ಭಾರತ ಪರ ಶಂಕರ್, ಹಾರ್ದಿಕ್, ಕುಲ್‌ದೀಪ್ ತಲಾ 2 ವಿಕೆಟ್ ಉರುಳಿಸಿದರು. ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಸತತ 7ನೇ ಜಯವಾಗಿದೆ. ಪಂದ್ಯ ಆರಂಭವಾಗಲು ಕೆಲವೇ ಗಂಟೆಗಳ ಮೊದಲು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಟ್ವೀಟ್ ಮೂಲಕ ನೀಡಿದ್ದ ಸಲಹೆಯನ್ನು ಪಾಕ್ ಕ್ರಿಕೆಟ್ ನಾಯಕ ಸರ್ಫರಾಝ್ ಅಹ್ಮದ್ ಕಡೆಗಣಿಸಿದ್ದು, ಒಂದು ವೇಳೆ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಿ. ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಹಾಗೂ ಬೌಲರ್‌ಗಳನ್ನು ಕಣಕ್ಕಿಳಿಸಿ, ಒತ್ತಡದ ಪರಿಸ್ಥಿತಿಯಲ್ಲಿ ಆಡಲು ಪರದಾಡುವ ಆಟಗಾರರನ್ನು ಆಡುವ ಬಳಗದಿಂದ ಕೈಬಿಡಿ ಎಂದು ಸಲಹೆಗಳನ್ನು ನೀಡಿದ್ದರು.

ಸಚಿನ್ ದಾಖಲೆ ಮುರಿದ ಕೊಹ್ಲಿ…

ಏಕದಿನ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 11000 ರನ್ ಮೈಲುಗಲ್ಲಿನ ದಾಖಲೆ ಬರೆದಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 11000 ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆಗೆ ಪಾತ್ರವಾಗಿದ್ದಾರೆ. ಈ ಮೂಲಕ ಭಾರತದ ಮಾಜಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ. ಕೊಹ್ಲಿ ತಮ್ಮ ೨೨೨ನೇ ಇನ್ನಿಂಗ್ಸ್‌ನಲ್ಲಿ ಈ ದಾಖಲೆ ಬರೆದಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ೧೧೦೦೦ ರನ್ ಗಳಿಸಲು ಕೊಹ್ಲಿಗೆ ೫೭ ರನ್‌ಗಳ ಅವಶ್ಯಕತೆಯಿತ್ತು. ಇದರಂತೆ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ದಾಖಲೆಯತ್ತ ಮುನ್ನಡೆದಿದ್ದು, ೫೬ ರನ್ ಗಳಿಸಿದ್ದಾಗ ಬೌಂಡರಿ ಬಾರಿಸಿದ ರನ್ ಮೆಶಿನ್ ಕೊಹ್ಲಿ, ೧೧ ಸಹಸ್ರ ರನ್‌ಗಳ ಮೈಲುಗಲ್ಲು ತಲುಪಿದರು. ಎರಡನೇ ಸ್ಥಾನದಲ್ಲಿರುವ ಸಚಿನ್ ತಮ್ಮ ೧೧೦೦೦ ರನ್ ದಾಖಲೆಗಾಗಿ ೨೭೬ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಈ ಮೂಲಕ ಏಕದಿನದಲ್ಲಿ ೧೧೦೦೦ ರನ್ ಗಳಿಸಿದ ಭಾರತದ ಮೂರನೇ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಕಿಂಗ್ ಕೊಹ್ಲಿ ಪಾತ್ರವಾಗಿದ್ದಾರೆ.

ಧೋನಿ ದಾಖಲೆಯನ್ನು ಮುರಿದ ರೋಹಿತ್
ಐ.ಸಿ.ಸಿ 2019 ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಓಪನರ್ ರೋಹಿತ್ ಶರ್ಮಾ ಅಮೋಘ ಶತಕ ಸಾಧನೆ ಮಾಡಿದ್ದಾರೆ. ಇದು ಏಕದಿನ ಕ್ರಿಕೆಟ್‌ನಲ್ಲಿ ರೋಹತ್ ಬ್ಯಾಟ್‌ನಿಂದ ಸಿಡಿದ 24ನೇ ಶತಕ ಸಾಧನೆಯಾಗಿದೆ. ಅಷ್ಟೇ ಯಾಕೆ ಪಾಕಿಸ್ತಾನ ವಿರುದ್ಧ ಏಕದಿನದಲ್ಲಿ ಸತತ ಎರಡು ಶತಕ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೂ ಪಾತ್ರವಾಗಿದ್ದಾರೆ. ಈ ನಡುವೆ ಮಹೇಂದ್ರ ಸಿಂಗ್ ಧೋನಿ ಹೆಸರಲ್ಲಿದ್ದ ಸಿಕ್ಸರ್ ದಾಖಲೆಯನ್ನು ರೋಹಿತ್ ಶರ್ಮಾ ತಮ್ಮ ಹೆಸರಿಗೆ ಬದಲಾಯಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್ ಭಾಜನರಾಗಿದ್ದಾರೆ. ಈ ಮೂಲಕ ಮಹೇಂದ್ರ ಸಿಂಗ್ ಧೋನಿ ಹೆಸರಲ್ಲಿದ್ದ ೩೫೫ ಸಿಕ್ಸರ್‌ಗಳ ದಾಖಲೆಯನ್ನು ಮುರಿದಿದ್ದಾರೆ. ಇವರಲ್ಲದೇ, ಸಚಿನ್ ತೆಂಡೂಲ್ಕರ್(೨೬೪), ಯುವರಾಜ್ ಸಿಂಗ್(೨೫೧), ಸೌರವ್ ಗಂಗೂಲಿ(೨೪೭), ವೀರೇಂದ್ರ ಸೆಹ್ವಾಗ್(೨೪೩) ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಇತರ ಭಾರತೀಯ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.


ಆಮಿರ್‌ಗೆ 2 ಬಾರಿ ಎಚ್ಚರಿಕೆ ನೀಡಿದ ಅಂಪೈರ್
ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಪಿಚ್‌ನ ಮಧ್ಯೆ ಓಡಿದ್ದಕ್ಕಾಗಿ ಪಾಕಿಸ್ತಾನದ ವೇಗಿ ಮೊಹಮದ್ ಆಮಿರ್‌ಗೆ ಅಂಪೈರ್ ಎರಡು ಬಾರಿ ಎಚ್ಚರಿಕೆ ನೀಡಿದ್ದಾರೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕಿಸ್ತಾನದ ಪರ ಬೌಲಿಂಗ್ ಆರಂಭಿಸಿದ ಮೊಹಮದ್ ಆಮೀರ್ ಮೊದಲ ಓವರ್‌ನ್ನು ಮೇಡನ್ ಮಾಡಿದರು. ಇದೇ ಹುಮ್ಮಸ್ಸಿನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಪ್ರಯತ್ನದಲ್ಲಿದ್ದ ಆಮೀರ್ ತಮ್ಮ ಎರಡನೇ ಓವರ್‌ನಲ್ಲಿ ಡೇಂಜರ್ ಏರಿಯಾ ಎಂದೇ ಕರೆಯಲ್ಪಡುವ ಪಿಚ್‌ನ ಮಧ್ಯೆ ಓಡಿದರು. ಇದಕ್ಕಾಗಿ ಆಮೀರ್‌ಗೆ ಅಂಪೈರ್ ಬ್ರೂಸ್ ಆಕ್ಸೆನ್‌ಫೋರ್ಡ್ ಮೊದಲ ಎಚ್ಚರಿಕೆ ನೀಡಿದರು. ಆ ನಂತರ ಪಂದ್ಯದ ಐದನೇ ಓವರ್‌ನಲ್ಲಿ ಆಮೀರ್ ಮತ್ತೆ ಪಿಚ್‌ನ ಮಧ್ಯೆ ಓಡಿದರು. ಈ ಬಾರಿ ಅಂಪೈರ್ ೨ನೇ ಬಾರಿ ಎಚ್ಚರಿಕೆ ನೀಡಿದರು. ಐಸಿಸಿ ನಿಯಮಾವಳಿಗಳ ಪ್ರಕಾರ ಬಾಲ್ ಎಸೆದ ನಂತರ ಬೌಲರ್ ಪಿಚ್ ಮಧ್ಯೆ ಓಡುವಂತಿಲ್ಲ. ಬ್ಯಾಟ್ಸ್‌ಮನ್‌ಗಳೂ ಸಹ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಆದರೆ ಪಂದ್ಯದಲ್ಲಿ ಆಮೀರ್ ೨ ಬಾರಿ ಈ ತಪ್ಪು ಎಸಗಿದ್ದಾರೆ. ಮತ್ತೊಮ್ಮೆ ಆಮೀರ್ ಪಿಚ್ ಮಧ್ಯೆ ಓಡಿದರೆ ಅವರು ಈ ಪಂದ್ಯದಲ್ಲಿ ಬೌಲಿಂಗ್ ಮಾಡದಂತೆ ನಿರ್ಬಂಧ ಹೇರಬಹುದಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.