ಶಾಸಕ ಮಠಂದೂರು ಸಹಿತ ಹಲವು ನಾಯಕರು ಪೊಲೀಸ್ ವಶಕ್ಕೆ
ಪುತ್ತೂರು: ಜಿಂದಾಲ್ ಕಂಪೆನಿಗೆ ಭೂಮಿ ನೀಡಿಕೆ ವಿರೋಧಿಸಿ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಆಹೋ ರಾತ್ರಿ ಧರಣಿ ಆರಂಭಿಸಿದ್ದರು. ಜೂ.17 ರಂದು ರ್ಯಾಲಿ ಮೂಲಕ ಸಿಎಂ ಗೃಹ ಕಛೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಆನಂದರಾವ್ ಸರ್ಕಲ್ನಿಂದ ಹೊರಟ ಈ ರ್ಯಾಲಿಯನ್ನು ಶಿವಾನಂದ ಸರ್ಕಲ್ ಬಳಿಯೇ ಪೊಲೀಸರು ತಡೆಹಿಡಿದಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಡಿಸಿಎಂ ಆರ್.ಅಶೋಕ್, ಶಾಸಕರುಗಳಾದ ಸಂಜೀವ ಮಠಂದೂರು, ಹರೀಶ್ ಪೂಂಜಾ, ರಾಜೇಶ್ನಾಕ್, ರಾಜ್ಯ ಯುವ ಮೋರ್ಛಾದ ಸದಸ್ಯ ಅಕ್ಷಯ್ ರೈ ದಂಬೆಕ್ಕಾನ ಸೇರಿದಂತೆ ಹಲವು ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಳಿಕ ಬಿಡುಗಡೆಗೊಳಿಸಿದರು.