HomePage_Banner
HomePage_Banner
HomePage_Banner

ಭಾರತೀಯ ವೈದ್ಯಕೀಯ ಸಂಘದಿಂದ ಪ್ರತಿಭಟನಾ ಮೆರವಣಿಗೆ: ಪ್ರಧಾನಿ ನರೇಂದ್ರ ಮೋದಿಗೆ ಸಹಾಯಕ ಕಮಿಷನರ್ ಮೂಲಕ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊಲ್ಕತ್ತದಲ್ಲಿ ವೈದ್ಯರೊಬ್ಬರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸರಕಾರ ಯಾವುದೇ ಕ್ರಮ ಕೈಗೊಳ್ಳದ ಮತ್ತು ವೈದ್ಯರ, ವೈದ್ಯಕೀಯೇತರ ಸಿಬಂದಿಗಳ ಮೇಲೆ ಹಲ್ಲೆ ತಡೆಗಟ್ಟಲು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರಿನ ಭಾರತೀಯ ವೈದ್ಯಕೀಯ ಸಂಘ ಬೆಳಿಗ್ಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮಿನಿ ವಿಧಾನ ಸೌಧದಲ್ಲಿ ಪ್ರಧಾನಿ ನರೇಂದ್ರ ಮೋದಿವಯರಿಗೆ ಸಹಾಯಕ ಕಮಿಷನರ್ ಹೆಚ್ ಕೆ. ಕೃಷ್ಣಮೂರ್ತಿಯವರ ಮೂಲಕ ಮನವಿ ಸಲ್ಲಿಸಲಾಯಿತು.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಗಣೇಶ್ ಮುದ್ರಾಜೆ, ಕಾರ್ಯದರ್ಶಿ ಡಾ. ಅಶೋಕ್ ಸೇರಿದಂತೆ ಇತರ ಆಸ್ಪತ್ರೆಗಳ ವೈದ್ಯರಾದ ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಭಾಸ್ಕರ್ ಎಸ್, ಮಹಾವೀರ ಆಸ್ಪತ್ರೆಯ ಡಾ. ಅಶೋಕ್ ಪಡಿವಾಳ್, ಡಾ. ಸುರೇಶ್ ಪುತ್ತೂರಾಯ, ಚೇತನಾ ಆಸ್ಪತ್ರೆಯ ಡಾ. ಜೆ.ಸಿ. ಅಡಿಗ, ಧನ್ವಂತರಿ ಆಸ್ಪತ್ರೆಯ ಡಾ. ರವೀಂದ್ರ, ಡಾ. ಚಂದ್ರಶೇಖರ್, ಡಾ. ನಝೀರ್ ಅಹಮ್ಮದ್, ಡಾ. ಕಿಶೋರ್ ಮಯ್ಯ, ಡಾ. ಭಾಸ್ಕರ್, ಡಾ. ಈಶ್ವರ ಪ್ರಕಾಶ್ ಸೇರಿದಂತೆ ಹಲವಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.