Home_Page_Advt
Home_Page_Advt
Home_Page_Advt

ಜಂಕ್‌ಫುಡ್‌ಗಳ ಜಾಹಿರಾತು ನಿಷೇಧಿಸುವಂತೆ ಎಫ್.ಎಸ್.ಎಸ್.ಎ.ಐ ಶಿಫಾರಸು!

Puttur_Advt_NewsUnder_1
Puttur_Advt_NewsUnder_1


ಅನಾರೋಗ್ಯಕರ ಜಂಕ್ ಫುಡ್ ಜಾಹೀರಾತುಗಳನ್ನು ಶಾಲಾ ಆವರಣದ ಸುತ್ತಮುತ್ತ 50 ಮೀಟರ್ ಸರಹದ್ದಿನಲ್ಲಿ ಪ್ರಚಾರ ಮಾಡಬಾರದು ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್.ಎಸ್.ಎಸ್.ಎ.ಐ) ಶಿಫಾರಸು ಮಾಡಿದೆ. ಶಾಲಾ ಮಕ್ಕಳಿಗೆ ಗುಣಮಟ್ಟದ ಆರೋಗ್ಯಯುತ ಆಹಾರ ನೀಡಬೇಕು ಎಂದು ಪ್ರೋತ್ಸಾಹಿಸುವ ದೃಷ್ಟಿಯಿಂದ ಅನಾರೋಗ್ಯಕರ ಜಾಹಿರಾತುಗಳನ್ನು ಪ್ರದರ್ಶಿಸಬಾರದು ಎಂದು ಹೇಳಿದೆ.

ಎಫ್‌ಎಸ್‌ಎಸ್‌ಐಯ ಮುಖ್ಯ ಕಾರ್ಯಕಾರಿ ಅಧಿಕಾರಿ ಪವನ್‌ಕುಮಾರ್ ಅಗರ್ವಾಲ್, ಈ ಕುರಿತು ಕರಡು ವರದಿ ತಯಾರಿಸಲಾಗಿದ್ದು, ಶಾಲೆಗಳಲ್ಲಿ ಮಕ್ಕಳಿಗೆ ಪೌಷ್ಠಿಕಾಂಶಭರಿತ ಪೂರ್ಣಪ್ರಮಾಣದ ಆಹಾರವನ್ನು ನೀಡಬೇಕಾಗದ ಕುರಿತು ವರದಿಯನ್ನು ಆರೋಗ್ಯ ಸಚಿವಾಲಯಕ್ಕೆ ಅನುಮೋದನೆಗೆ ಕಳುಹಿಸಲಾಗಿದೆ ಎಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.