HomePage_Banner
HomePage_Banner
HomePage_Banner
Breaking News

ಜೂ.19 ರಿಂದ ಕೆಎಸ್‌ಆರ್‌ಟಿಸಿ ವಿದ್ಯಾರ್ಥಿ ಬಸ್‌ಪಾಸ್ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: 2019-20ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್ ಪಾಸ್‌ಗಳನ್ನು ವಿತರಿಸಲು ಕೆಎಸ್‌ಆರ್‌ಟಿಸಿ ಸಿದ್ದತೆಗಳನ್ನು ಮಾಡಿಕೊಂಡಿದ್ದು ಜೂ. 190ರಂದು ವಿದ್ಯಾರ್ಥಿ ಗಳಿಗೆ ಬಸ್‌ಪಾಸ್ ವಿತರಿಸಲಿದೆ.

ಹೀಗೆ ಪಡೆಯಿರಿ: ನಿಗಮವು ಪ್ರಸಕ್ತ ವರ್ಷದಿಂದ ವಿದ್ಯಾರ್ಥಿಗಳು ಪಾಸ್ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ.ಯ ಅಧೀಕೃತ ವೆಬ್ ಸೈಟ್ ಡಿಡಿಡಿ.hoಠ್ಚಿ.ಜ್ಞಿ ನಲ್ಲಿ ತಮ್ಮ ವಿವರಗಳನ್ನು ಭರ್ತಿ ಮಾಡಿ ಅದರ ಪ್ರತಿಯನ್ನು ಪ್ರಿಂಟ್ ತೆಗೆದು ಆಯಾ ಶಾಲಾ ಕಾಲೇಜುಗಳ ಮುಖ್ಯಸ್ಥರಿಂದ ದೃಢೀಕರಿಸಿ ನಿಗಮ ಸೂಚಿಸಿದ ಬಸ್‌ಪಾಸ್‌ನ ಶುಲ್ಕ ಪಾವತಿಸಿ ಪಾಸ್ ಪಡೆಯಬಹುದಾಗಿದೆ. ಈ ಬಾರಿಯೂ ಹಿಂದಿನ ವರ್ಷದ ದರದಲ್ಲಿಯೇ ಕೆಎಸ್‌ಆರ್‌ಟಿಸಿ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ದೊರೆಯಲಿದೆ.

ಪಾಸ್‌ನ ದರಗಳು: ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಬಸ್ ಪಾಸ್ ದರವನ್ನು ರೂ.೧೫೦ಕ್ಕೆ ನಿಗದಿಪಡಿಸಲಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳ ಬಸ್ ಪಾಸ್ ದರವನ್ನು ರೂ.೭೫೦ಕ್ಕೆ ನಿಗದಿಗೊಳಿಸಿದರೆ ಬಾಲಕಿಯರ ಬಸ್ ಪಾಸ್ ದರ ರೂ.೫೫೦ಕ್ಕೆ ಇಳಿಸಲಾಗಿದೆ. ಪಿಯುಸಿ, ಪದವಿ, ಡಿಪ್ಲೊಮಾ ವಿದ್ಯಾರ್ಥಿಗಳ ಪಾಸ್ ದರ ರೂ.೧೦೫೦ಗಳಿದ್ದರೆ, ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳ ಪಾಸ್‌ದರ ರೂ.೧೫೫೦ ಹಾಗೂ ಸಂಜೆ ಕಾಲೇಜು ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳ ಬಸ್‌ಪಾಸ್ ದರವನ್ನು ರೂ.೧೩೫೦ಗೆ ನಿಗದಿಪಡಿಸಲಾಗಿದೆ. ಪ್ರಾಥಮಿಕ ಶಾಲೆಯಿಂದ ಪಿಎಚ್‌ಡಿ ವರೆಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪಾಸ್‌ದರವನ್ನು ರೂ.೧೫೦ಕ್ಕೆ ನಿಗದಿಪಡಿಸಲಾಗಿದೆ. ಈ ಎಲ್ಲಾ ಹಂತದ ವಿದ್ಯಾರ್ಥಿಗಳಿಗೆ ೧೦ ತಿಂಗಳ ಅವಧಿಗೆ ಮಾತ್ರ ಪಾಸ್ ನೀಡಲಾಗುತ್ತದೆ.
ಐಟಿಐ ವಿದ್ಯಾರ್ಥಿಗಳಿಗೆ ೧೨ ತಿಂಗಳ ಅವಧಿಗೆ ಪಾಸ್ ನೀಡಲಿದ್ದು, ಸಾಮಾನ್ಯ ವರ್ಗದವರಿಗೆ ೧೩೧೦ ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ೧೬೦ ರೂ. ನಿಗದಿಪಡಿಸಲಾಗಿದೆ. ಪಾಸ್‌ನ ದರದಲ್ಲಿ ಪ್ರತಿ ತಿಂಗಳಿಗೆ ರೂ.೫ರಂತೆ ಅಪಘಾತ ಪರಿಹಾರ ನಿಧಿಗೆ ಹಾಗೂ ರೂ.೧೦೦ ಸಂಸ್ಕರಣಾ ಶುಲ್ಕವನ್ನು ಒಳಗೊಂಡಿದೆ ಎಂದು ನಿಗಮ ತಿಳಿಸಿದೆ.

ಮ್ಯಾನ್ಯುವಲ್‌ನಲ್ಲೂ ಅವಕಾಶ
ಆನ್‌ಲೈನ್ ವ್ಯವಸ್ಥೆ ಲಭ್ಯವಿಲ್ಲದ ವಿದ್ಯಾರ್ಥಿಗಳಿಗಾಗಿ ಹಳೆಯ ಮ್ಯಾನ್ಯುವಲ್ ಅರ್ಜಿಗಳನ್ನೇ ಸಲ್ಲಿಸಿ ಬಸ್ ಪಾಸ್‌ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಅರ್ಜಿಗಳು ನಗರದ ಪ್ರಮುಖ ಬಸ್ ನಿಲ್ದಾಣ ಹಾಗೂ ನಿಗಮದ ವೆಬ್‌ಸೈಟ್‌ನಲ್ಲಿ ದೊರೆಯಲಿವೆ. ಜೂ.30ರವರೆಗೂ ಶಾಲಾ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹಿಂದಿನ ಅವಧಿಯ ಬಸ್‌ಪಾಸ್‌ನಲ್ಲಿಯೇ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.