HomePage_Banner
HomePage_Banner
HomePage_Banner

ಕೊಂಬೆಟ್ಟು ವಿದ್ಯಾರ್ಥಿಗಳಿಗೆ ಯುವ ಸ್ಪಂದನ ಅರಿವು ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದೇಶದ ಸಂಪತ್ತು ಯುವ ಜನಾಂಗ ಯುವ ಜನರು ಕಾಣುವ ಕನಸು ದೇಶದ ಪ್ರಗತಿಗೆ ನಾಂದಿಯಾಗುತ್ತದೆ. ಸಕಾರಾತ್ಮಕ ಚಿಂತನೆಗಳಿಂದ ಒಳ್ಳೆಯ ನಾಗರಿಕರಾಗಬೇಕು ನಮ್ಮೆಲ್ಲಾ ಬೆಳವಣಿಗೆಗೆ ಮಾರ್ಗದರ್ಶನ ಅಗತ್ಯ ಇದೆ. ದಾರಿ ತಪ್ಪುತ್ತಿರುವ ಯುವಜನರಿಗೆ ಸಾಮಾಜಿಕ ಭೌತಿಕವಾಗಿ ಮಾರ್ಗದರ್ಶನ ನೀಡಲು ಯುವಸ್ಪಂದನ ಸಹಕಾರಿಯಾಗಿದೆ ಎಂದು ತಾಲೂಕು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖಾಧಿಕಾರಿ ಮಾಮಚ್ಚನ್ ಹೇಳಿದರು.

ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ನಿಮ್ಹಾನ್ಸ್ ಸಹಯೋಗದೊಂದಿಗೆ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ಶಾಲಾ ವಿಭಾಗ ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ಯುವ ಸ್ಪಂದನದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಗೀತಾಮಣಿ ಮಾತನಾಡಿ

ಸಾಮಾಜಿಕ ಜಾಲಾತಾಣಗಳಿಂದ ಯುವಜನರ ಚಲನವಲನಗಳು ಜಾಸ್ತಿಯಾಗಿದೆ ಶಿಸ್ತು ಮತ್ತು ಸ್ವಚ್ಚತೆಗೆ ಪ್ರಾಧಾನ್ಯತೆ ಕೊಡಬೇಕಾಗಿದೆ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಪ್ರೌಢಶಾಲಾ ಉಪಪ್ರಾಂಶುಪಾಲ ಮರ್ಸಿ ಮಮತ ಮಾತನಾಡಿ ಯುವಜನರು ಆರೋಗ್ಯದಲ್ಲಿ ಇದ್ದರೆ ದೇಶವು ಬಲಯುತವಾಗಿರುತ್ತದೆ. ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ ನಿಮ್ಮಲ್ಲಿ ನಾನಾ ರೀತಿಯ ಸಮಸ್ಯೆ ಗೊಂದಲಗಳು ಇದ್ದರೆ ಅದಕ್ಕೆ ಯುವ ಸ್ಪಂದನದಿಂದ ಸೂಕ್ತ ಮಾರ್ಗದರ್ಶನದಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಹೇಳಿದರು. ವೇದಿಕೆಯಲ್ಲಿ ಜಿಲ್ಲಾ ಯುವಪರಿವರ್ತಕರಾದ ಶ್ರೀಕಾಂತ್ ಪೂಜಾರಿ ಬಿರಾವು, ಲಾವಣ್ಯ ಉಪಸ್ಥಿತರಿದ್ದರು. ಜಿಲ್ಲಾ ಯುವಪರಿವರ್ತಕ ಸಾಂತಪ್ಪ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರು ಉಪನ್ಯಾಸಕರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.