HomePage_Banner
HomePage_Banner
HomePage_Banner

ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಖಾಲಿ ಖಾಲಿ…!

Puttur_Advt_NewsUnder_1
Puttur_Advt_NewsUnder_1

ಮಂಜೂರುಗೊಂಡ 16 ಹುದ್ದೆಗಳ ಪೈಕಿ 12 ಹುದ್ದೆಗಳೂ ಖಾಲಿ

ಪುತ್ತೂರು: ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಗೆ ಕಾಲಿಟ್ಟಾಗ ಗೋಚರಿಸುವುದು ಅಲ್ಲಿನ ಎಲ್ಲಾ ಸೀಟುಗಳು ಖಾಲಿ ಖಾಲಿ. ಕಛೇರಿಯೆಲ್ಲಾ ನಿಶ್ಯಬ್ಧ ವಾತಾವರಣ. ಅಧಿಕಾರಿಗಳು ಕುಳಿತುಕೊಳ್ಳಬೇಕಾಗಿರುವ ಆಸನಗಳೆಲ್ಲಾ ಖಾಲಿಯಾಗಿ ಕಛೇರಿಯು ಬಣಗುಡುತ್ತಿದೆ.

ಇದು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಸದ್ಯದ ಪರಿಸ್ಥಿತಿ. ಪುತ್ತೂರು ಉಪ ವಿಭಾಗದ ಪುತ್ತೂರು, ಸುಳ್ಯ, ಕಡಬ ಹಾಗೂ ಬೆಳ್ತಂಗಡಿ ತಾಲೂಕುಗಳ ವ್ಯಾಪ್ತಿಯನ್ನೊಳಗೊಂಡಂತೆ ಪುತ್ತೂರಿನಲ್ಲಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಕಾರ್ಯನಿರ್ವಹಿಸುತ್ತಿದೆ. ಈ ಕಛೇರಿಗೆ ಸಹಾಯಕ ನಿಬಂಧಕರು ಸೇರಿದಂತೆ ಒಟ್ಟು 16 ಹುದ್ದೆಗಳು ಮಂಜೂರುಗೊಂಡಿರುತ್ತದೆ. ಈ ಪೈಕಿ ಸಹಾಯಕ ನಿಬಂಧಕರು, ಕಛೇರಿ ಅಧೀಕ್ಷಕ, ಮಾರಾಟಾಧಿಕಾರಿ ಹಾಗೂ ದ್ವಿತಿಯ ದರ್ಜೆ ಸಹಾಯಕ ಹುದ್ದೆಗಳು ಮಾತ್ರ ಭರ್ತಿಯಾಗಿದೆ. ಉಳಿದಂತೆ 12 ಹುದ್ದೆಗಳು ಖಾಲಿಯಿದ್ದು ಕಛೇರಿಯಲ್ಲಿ ಸಿಬಂದಿಗಳಿಲ್ಲದೆ ಬಣಗುಡುಗುತ್ತಿದೆ.

ಖಾಲಿ ಹುದ್ದೆಗಳು: ಪುತ್ತೂರು ಉಪ ವಿಭಾಗದ ಕಛೇರಿಗೆ ಮಂಜೂರುಗೊಂಡ 12 ಹುದ್ದೆಗಳ ಪೈಕಿ ನಿರೀಕ್ಷಕರು-5, ಪ್ರಥಮ ದರ್ಜೆ ಗುಮಾಸ್ತ-1, ದ್ವಿತೀಯದರ್ಜೆ ಗುಮಾಸ್ತ -1, ಟೈಪಿಸ್ಟ್-1, ವಾಹನ ಚಾಲಕ-1, ಜಾರಿಕಾರರು-1 ಹಾಗೂ ಡಿ’ಗ್ರೂಪ್-2 ಹುದ್ದೆಗಳು ಖಾಲಿಯಿದೆ.

381 ಸಹಕಾರಿ ಸಂಘಗಳು: ಉಪ ವಿಭಾಗದ ವ್ಯಾಪ್ತಿಯ ನಾಲ್ಕು ತಾಲೂಕುಗಳಲ್ಲಿ ೬೫ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ೨೧೯ ಹಾಲು ಉತ್ಪಾದಕರ ಸಹಕಾರ ಸಂಘಗಳು, ಸೌಹಾರ್ದ ಸಹಕಾರಿ ಸಂಘಗಳು, ಇತರ ಸಹಕಾರಿ ಸಂಘಗಳು ಸೇರಿದಂತೆ ಒಟ್ಟು ೩೮೧ ಸಹಕಾರ ಸಂಘಗಳು ಹಾಗೂ ಫೈನಾನ್ಸ್ ಗಳು ಕಾರ್ಯನಿರ್ವಹಿಸುತ್ತಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಸಂಬಂಧಪಟ್ಟಂತೆ ಸಾಲಮನ್ನಾ, ಬಡ್ಡಿ ಮನ್ನಾಗಳ ನಿರ್ವಹಣೆ, ಸಹಕಾರಿ ಸಂಘಗಳ ಚುನಾವಣೆ, ನೋಂದಾವಣೆ ಮೊದಲಾದ ಕಾರ್ಯಗಳು ನಡೆಯಬೇಕಿದ್ದು ಇವೆಲ್ಲವೂ ಈಗ ಇರುವ ಮೂರು ಸಿಬಂದಿಗಳ ಮುಖಾಂತರವೇ ನಡೆಯಬೇಕಿದೆ.

ಕಛೇರಿಯಲ್ಲಿ ಏಕಮಾತ್ರ ಸಿಬಂದಿ
ಮಂಜೂರುಗೊಂಡಿರುವ 12 ಹುದ್ದೆಗಳಲ್ಲಿ ಮೂರು ಹುದ್ದೆ ಭರ್ತಿಯಾಗಿದ್ದರೂ ಅವುಗಳ ಪೈಕಿ ಕಛೇರಿ ಅಧೀಕ್ಷಕರಾಗಿದ್ದ ಬೀದರ್ ಮೂಲದ ರವಿಕಿರಣ್‌ರವರು 2018 ಜುಲೈ ನಂತರ ಅನಧಿಕೃತವಾಗಿ ಗೈರುಹಾಜರಾಗಿದ್ದಾರೆ. ಅವರಿಗೆ ನೊಟೀಸ್ ನೀಡಿದರೂ ಯಾವುದೇ ಸ್ಪಂದನೆಯಿಲ್ಲ. ಅಲ್ಲದೆ ಕಛೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯೋರ್ವರು ಸತತವಾಗಿ ಗೈರು ಹಾಜರಾಗುತ್ತಿದ್ದು ಈ ಎರಡು ಹುದ್ದೆಗಳು ದಾಖಲೆಯಲ್ಲಿ ಮಾತ್ರ ಇದೆ. ಕಛೇರಿಯಲ್ಲಿ ಮಾರಾಟಾಧಿಕಾರಿಯೋರ್ವರು ಮಾತ್ರ ಖಾಯಂ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಓರ್ವ ಮಹಿಳಾ ಕಂಪ್ಯೂಟರ್ ಆಪರೇಟರ್ ಹಾಗೂ ಚಾಲಕ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇಲಾಖೆಯಲ್ಲಿ ಬಹುತೇಕ ಹುದ್ದೆಗಳು ಖಾಲಿಯಾಗಿರುವುದರಿಂದ ಕೆಲಸ ನಿರ್ವಹಣೆಯ ಹೊರೆ ಅಧಿಕವಾಗಿದೆ. ಹುದ್ದೆಗಳ ಭರ್ತಿಗಾಗಿ ಪ್ರತಿ ತಿಂಗಳು ವರದಿಯನ್ನು ಇಲಾಖೆಗೆ ಕಳುಹಿಸಲಾಗುತ್ತಿದೆ. ಕಛೇರಿ ಅಧೀಕ್ಷಕರೋರ್ವರು ಅನಧಿಕೃತವಾಗಿ ರಜೆ ಮಾಡಿರುವ ಬಗ್ಗೆ ಇಲಾಖೆಯ ಗಮನಕ್ಕೆ ತರಲಾಗಿದೆ.-ಆರ್.ಮಂಜುನಾಥ, ಸಹಾಯಕ ನಿಬಂಧಕರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.