


ಸವಣೂರು: ಇಲ್ಲಿನ ಆರೆಲ್ತಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 2019-20ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ಮುಖ್ಯಗುರು ಜಗನ್ನಾಥ್ ಎಸ್ ರವರ ಮಾರ್ಗದರ್ಶನದಲ್ಲಿ ರಚಿಸಲಾಯಿತು.
ಮುಖ್ಯಮಂತ್ರಿಯಾಗಿ ಕೃಪಾ ಶ್ರೀ. ಕೆ ( 5ನೇ ತರಗತಿ), ಉಪಮುಖ್ಯಮಂತ್ರಿಯಾಗಿ ಕೃತೇಶ್ ( 4 ನೇ ತರಗತಿ) ಹಾಗೂ ವಿರೋಧಪಕ್ಷದ ನಾಯಕಿಯಾಗಿ ಪೂರ್ವಿ ಕೆ.ವಿ (4ನೇ ತರಗತಿ) ಆಯ್ಕೆಯಾದರು.ಇನ್ನುಳಿದಂತೆ ಶಿಕ್ಷಣ ಮಂತ್ರಿಯಾಗಿ ತೃಷಾ.ಬಿ (4ನೇ ತರಗತಿ), ಆರೋಗ್ಯ ಮಂತ್ರಿಯಾಗಿ ಧನುಷ್(4ನೇ ತರಗತಿ), ಕ್ರೀಡಾ ಮಂತ್ರಿಯಾಗಿ ಅಶ್ವಥ್(5ನೇ ತರಗತಿ), ಸ್ವಚ್ಛತಾ ಮಂತ್ರಿಯಾಗಿ ಮನೀಷ್(4ನೇ ತರಗತಿ), ಶಿಸ್ತು ಮಂತ್ರಿಯಾಗಿ ಮಹಮ್ಮದ್ ಆದಿಲ್(3ನೇ ತರಗತಿ), ತೋಟಗಾರಿಕಾ ಮಂತ್ರಿಯಾಗಿ ಪ್ರೇಕ್ಷಣ್(2ನೇ ತರಗತಿ), ನೀರಾವರಿ ಮಂತ್ರಿಯಾಗಿ ಸುಹಾನ್(2ನೇ ತರಗತಿ), ಸಾಂಸ್ಕೃತಿಕ ಮಂತ್ರಿಯಾಗಿ ಜಶ್ವಿತ್ ಕೆ(3ನೇ ತರಗತಿ),ರಕ್ಷಣಾ ಮಂತ್ರಿಯಾಗಿ ದಕ್ಷಾಕುಮಾರಿ ಕೆ (4ನೇ ತರಗತಿ), ವಾರ್ತಾ ಮಂತ್ರಿಯಾಗಿ ವಿನುತ್(4ನೇ ತರಗತಿ)ರನ್ನು ಆರಿಸಲಾಯಿತು.
ಗೌರವ ಶಿಕ್ಷಕಿಯಾದ ದಯಾಮಣಿ ಪ್ರತಿಜ್ಞಾ ವಿಧಿ ಬೋಧಿಸಿದರು. ನ್ನೋರ್ವ ಗೌರವ ಶಿಕ್ಷಕಿ ಸರಿತಾ ಸಹಕರಿಸಿದರು.ಎಸ್ ಡಿ ಎಂಸಿ ಅಧ್ಯಕ್ಷ ನಾರಾಯಣ ಗೌಡ ಕೆಡೆಂಜಿಮಾರು ಉಪಸ್ಥಿತರಿದ್ದರು.