ಫೆ.3 ರಿಂದ 12 ರ ವರೆಗೆ ಕಾಜೂರು ಮಖಾಂ ಶರೀಫ್ ಉರೂಸ್: ಸಯ್ಯಿದ್ ಕೊಂಬೋಳ್ ತಂಙಳ್ ರಿಂದ ದಿನಾಂಕ ಪ್ರಕಟ: ಸಯ್ಯಿದ್ ಕೂರತ್ ತಂಙಳ್ ರಿಂದ ಮಂಗಳೂರಿನಲ್ಲಿ ಪ್ರಥಮ ಪೋಸ್ಟರ್ ಬಿಡುಗಡೆ

0

ಬೆಳ್ತಂಗಡಿ:  ಹಝ್ರತ್ ಹಯಾತುಲ್ ಔಲಿಯಾ ದರ್ಗಾಶರೀಫ್ ಕಾಜೂರು ಇದರ 2023 ನೇ ಸಾಲಿನ ಉರೂಸ್ ಮಹಾ ಸಂಭ್ರಮಕ್ಕೆ ಕಾಜೂರು ಗೌರವಾಧ್ಯಕ್ಷ ಸಯ್ಯಿದ್ ಕುಂಬೋಳ್ ತಂಙಳ್ ದಿನಾಂಕ ಪ್ರಕಟಿಸಿದ್ದಾರೆ.

ಈ ಬಾರಿ ಫೆ.3 ರಿಂದ ಆರಂಭವಾಗುವ ಉರೂಸ್ ಕಾರ್ಯಕ್ರಮಗಳು ಫೆ. 12 ರ ವರೆಗೆ ವಿವಿಧ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ವಿಭಿನ್ನ ಶೈಲಿಯಲ್ಲಿ ನಡೆಯಲಿದೆ.
ಕಾಜೂರು ಗೌರವಾಧ್ಯಕ್ಷ, ಉಲಮಾ ಒಕ್ಕೂಟದ ಅಗ್ರಮಾನ್ಯ ಪಂಡಿತರಾದ ಸಯ್ಯಿದ್ ಕುಂಬೋಳ್ ತಂಙಳ್ ದಿನಾಂಕ ಪ್ರಕಟಿಸಿದ್ದಾರೆ. ಈ ಸಂಬಂಧ ಕಾಜೂರು ಖಾಝಿ ಸಯ್ಯಿದ್ ಕೂರತ್ ತಂಙಳ್ ಅವರು ಮಂಗಳೂರಿನ ಪುರಭವನದಲ್ಲಿ ನ.26 ರಂದು ಪ್ರಥಮ ಪೋಸ್ಟರ್ ಬಿಡುಗಡೆಗೊಳಿಸಿದರು.

ಸಯ್ಯಿದ್ ಕೂರತ್ ತಂಙಳ್ ಅವರು ಯೆನೆಪೋಯ‌ ಯುನಿವರ್ಸಿಟಿಯ ಕುಲಪತಿ ಯೆನೆಪೋಯ ಅಬ್ದುಲ್ಲ ಕುಂಞಿ ಅವರಿಗೆ ಪೋಸ್ಟರ್ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು.

ಕಾಜೂರು ಆಡಳಿತ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಕಾಜೂರು, ಪ್ರಧಾನ ಕಾರ್ಯದರ್ಶಿ, ವಕ್ಫ್ ಜಿಲ್ಲಾ ಸಲಹಾ ಸಮಿತಿ ಸದಸ್ಯರೂ ಆಗಿರುವ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಕಿಲ್ಲೂರು ಜಮಾಅತ್ ವಕ್ಫ್ ನಿಯೋಜಿತ ಆಡಳಿತಾಧಿಕಾರಿ, ಮಾಜಿ ಸೈನಿಕರೂ ಆಗಿರುವ ಮುಹಮ್ಮದ್ ರಫಿ ಇವರು ಹಾಜರಿದ್ದರು.

ಸಮಾರಂಭದಲ್ಲಿ ಖಾಝಿ ತ್ವಾಖಾ ಅಹಮ್ಮದ್ ಮುಸ್ಲಿಯಾರ್, ಖಾಝಿ ಮಾಣಿ‌ ಉಸ್ತಾದ್, ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ರಾಜ್ಯಾಧ್ಯಕ್ಷ ಎನ್‌ಕೆ‌ಎಮ್ ಶಾಫಿ ಸ‌ಅದಿ ಬೆಂಗಳೂರು, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಉಪಾಧ್ಯಕ್ಷರುಗಳಾದ ಫಕೀರಬ್ಬ ಮರೋಡಿ, ಎ.ಕೆ‌ ಜಮಾಲ್, ಅಬ್ದುಲ್ ರಹಿಮಾನ್ ಮೊಗರ್ಪಣೆ, ವಿಧಾನ ಸಭೆಯ ಪ್ರತಿಪಕ್ಷದ ಉಪನಾಯಕ ಯು.ಟಿ ಖಾದರ್, ವಿಧಾನ ಪರಿಷತ್ ಶಾಸಕ‌ ಹಾಗೂ ಭರವಸೆ ಸಮಿತಿಯ ಅಧ್ಯಕ್ಷ ಬಿ. ಎಮ್‌ ಫಾರೂಕ್, ಮಾಜಿ ಶಾಸಕ ಮೊಯಿದಿನ್‌ ಬಾವಾ, ಮಾಜಿ ರಾಜ್ಯ ಸಭಾ ಸದಸ್ಯ ಇಬ್ರಾಹಿಂ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮುಹಮ್ಮದ್ ಮಸೂದ್, ಪ್ರಮುಖರಾದ ರಶೀದ್ ಹಾಜಿ, ಕಣಚೂರು ಮೋನು ಹಾಜಿ, ಉಸ್ಮಾನ್ ಹಾಜಿ, ಮಾಜಿ ಮೇಯರ್ ಅಶ್ರಫ್, ಚಾರ್ಮಾಡಿ ಹಸನಬ್ಬ, ಮುಂಮ್ತಾಝ್ ಅಲಿ ಮೊದಲಾದ ಜಿಲ್ಲೆಯ ಅನೇಕ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here