ಉಪ್ಪಿನಂಗಡಿ: ರೋಟರಿ ಜಿಲ್ಲೆ 318ಕ್ಕೆ ಸೇರಿದ ಉಪ್ಪಿನಂಗಡಿ ರೋಟರಿ ಕ್ಲಬ್ 2018-19ರ ವಿವಿಧ ಚಟುವಟಿಕೆಗಳಿಗಾಗಿ ಪ್ರಥಮ ಬಾರಿಗೆ 7 ಪ್ರಶಸ್ತಿಗಳನ್ನು ಪಡೆದುಕೊಂಡಿದೆ ಎಂದು ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಜರಗಿದ “ಸಂತಪ್ತಿ-2019” ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ರೋಹಿನಾಥ್, ಅಸಿಸ್ಟೆಂಟ್ ಗವರ್ನರ್ ಪ್ರಕಾಶ ಕಾರಂತ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.
ಸಮಾರಂಭದಲ್ಲಿ ಭಾರತಿ ದಿವಾಕರ ಆಚಾರ್ಯ, ರೋಟರಿ ಕಾರ್ಯದರ್ಶಿ ಕೇಶವ ಪಿ.ಯಂ, ಝೊನಲ್ ಲೆಪ್ಟಿನೆಂಟ್ ಅಬ್ದುಲ್ ರಹಿಮಾನ್ ಯೂನಿಕ್, ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ| ರಾಜಾರಾಮ್, ನಿಯೋಜಿತ ಕಾರ್ಯದರ್ಶಿ ಝಕಾರಿಯಾ ಕೊಡಿಪ್ಪಾಡಿ, ಹಿರಿಯ ಸದಸ್ಯರಾದ ಜಾರ್ಜ್ ನೊರೋಹ್ನ, ವಿಜಯಕುಮಾರ್ ಕಲ್ಲಳಿಕೆ, ಇಸ್ಮಾಯಿಲ್ ಇಕ್ಬಾಲ್, ಸಮೀರ್ ಹಿರೇಬಂಡಾಡಿ, ಇಂಟರ್ಯಾಕ್ಟ್ ಕ್ಲಬ್ ಸಂಚಾಲಕ ಶ್ರೀಧರ ಭಟ್, ವಿದ್ಯಾರ್ಥಿ ಅಧ್ಯಕ್ಷ ಮಹಮ್ಮದ್ ಇಹ್ಸಾನ್ ಉಪಸ್ಥಿತರಿದ್ದು ಪ್ರಶಸ್ತಿ ಸ್ವೀಕರಿಸಿದರು.