HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ: ಶ್ರೀ ಗುರುದೇವ ಸೇವಾ ಬಳಗದ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ

Puttur_Advt_NewsUnder_1
Puttur_Advt_NewsUnder_1

“ತ್ಯಾಗ ಮತ್ತು ಸೇವೆಯೇ ಭಾರತೀಯ ಜೀವನ ಮೌಲ್ಯಗಳು”- ಒಡಿಯೂರು ಸ್ವಾಮೀಜಿ

ಉಪ್ಪಿನಂಗಡಿ: ನಡೆ ಮತ್ತು ನುಡಿ ಏಕ ಪ್ರಕಾರವಾಗಿ ಸಾಗಿದಾಗಲೇ ಜೀವನ ಸುಂದರವಾಗುವುದು, ತ್ಯಾಗ ಮತ್ತು ಸೇವೆಯೇ ಭಾರತೀಯ ಜೀವನ ಮೌಲ್ಯವಾಗಿದ್ದು, ಇದನ್ನು ನಿಷ್ಕಾಮ ಭಾವದಿಂದ ಅನುಷ್ಠಾನಿಸಿದಾಗಲೇ ಭಗವಂತನ ಪ್ರೀತಿ ಲಭ್ಯವಾಗುವುದು ಎಂದು ಒಡಿಯೂರು ಮಠಾದೀಶ ಗುರು ದೇವಾನಂದ ಸ್ವಾಮೀಜಿ ಹೇಳಿದರು.

ಅವರು ಜೂನ್ 16ರಂದು ಉಪ್ಪಿನಂಗಡಿಯಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ 4ನೇ ವರ್ಷದ ಸತ್ಯನಾರಾಯಣ ಪೂಜೆ ಮತ್ತು ವಾರ್ಷಿಕೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿ ಮನಸ್ಸು ಸ್ವಚ್ಚವಾಗದೆ ಪರಿಸರ ಸ್ವಚ್ಚವಾಗದೆಂದು ಪ್ರತಿಪಾದಿಸಿದ ಅವರು ಪ್ರಧಾನಿಯವರ ಸ್ವಚ್ಚ ಭಾರತ್ ಯೋಜನೆ ಯಶಸ್ವಿಯಾಗಬೇಕಾದರೆ ದೇಶ ವಾಸಿಗರೆಲ್ಲರ ಮನಸ್ಸು ಸ್ವಚ್ಚ ಆಗಬೇಕಾಗಿದೆ, ಪ್ರಕೃತಿಯನ್ನು ಉಳಿಸುವ ಕಾರ್ಯ ನಮ್ಮ ಧ್ಯೇಯವಾಗಿರಲಿ ಎಂದರು.

ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಕಜೆ ಮಾತನಾಡಿ ಮುಂದೆ ಗುರಿ ಇದ್ದು, ಹಿಂದೆ ಗುರುವಿದ್ದರೆ ರಣಧೀರತ್ವ ಸಹಜವಾಗಿ ಲಭಿಸುತ್ತದೆ. ಇಂದು ಗುರಿಯೂ ಗುರುವೂ ಇಲ್ಲದ ಕಾರಣ ರಣ ಹೇಡಿಗಳು ಎಲ್ಲೆಡೆ ಕಾಣಿಸುವಂತಾಗಿದೆ. ಈ ಕೊರತೆಯನ್ನು ನೀಗಲು ಒಡಿಯೂರು ಸಂಸ್ಥಾನದ ಗುರು ಪೀಠವು ಸಮಾಜಕ್ಕೆ ಮಾರ್ಗದರ್ಶನ ನೀಡಲು ಶ್ರಮಿಸುತ್ತಿರುವುದು ಸುದೃಢ ಸಮಾಜ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದರು.

ಶ್ರಮ ಜೀವಿಗಳಿಗೆ ಸನ್ಮಾನ:
ಸಮಾರಂಭದಲ್ಲಿ ಸುಮಾರು 40 ವರ್ಷಕ್ಕೂ ಹೆಚ್ಚಿನ ಕಾಲ ಅವಘಡ ರಹಿತ ವಾಹನ ಚಾಲನಾ ಸೇವೆ ನೀಡುತ್ತಿರುವ ಚಾಲಕ ಕೃಷ್ಣಪ್ಪ ಹಾಗೂ ಜವುಳಿ ಉದ್ಯಮಿ ಯು. ಚಂದ್ರಶೇಖರ್‌ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಾಮಾಜಿಕ ಸೇವಾ ಕಾರ್ಯದಡಿ ಹಲವಾರು ಮಂದಿಗೆ ಉಚಿತ ಕನ್ನಡಕವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಒಡಿಯೂರು ಗುರುದೇವಾ ಸೇವಾ ಬಳಗದ ಗೌರವಾಧ್ಯಕ್ಷ ಕರುಣಾಕರ ಸುವರ್ಣ, ಅಧ್ಯಕ್ಷ ಅಲಿಮಾರ ರಘುನಾಥ ರೈ ಉಪಸ್ಥಿತರಿದ್ದರು.

ಅಶೋಕ್ ಕುಮಾರ್ ರೈ ನೆಕ್ಕರೆ ಸ್ವಾಗತಿಸಿ, ಕಿಶೋರ್ ಕುಮಾರ್ ನಟ್ಟಿಬೈಲು ವಂದಿಸಿದರು. ಲೊಕೇಶ್ ಬೆತ್ತೋಡಿ ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.