ಪುತ್ತೂರು: ಪೆರಾಬೆ ಗ್ರಾಮದ ಮರುವಂತಿಲದಲ್ಲಿ ವನಸ್ಥ ಅಗ್ರೋ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಎನ್ನುವ ಸಂಸ್ಥೆಯು ದೀಪ ಬೆಳಗಿಸುವುದರೊಂದಿಗೆ ಜೂ.17 ರಂದು ಶುಭಾರಂಭಗೊಂಡಿತು.
ವೈದಿಕ ಕಾರ್ಯಕ್ರಮವನ್ನು ನಡೆಸಿದ ವೇದಮೂರ್ತಿ ನರಹರಿ ಉಪಾಧ್ಯಾಯ, ಉದಯ ಕುಮಾರ ಕಲ್ಲೂರಾಯ ಹಾಗೂ ಸಂಸ್ಥೆಯ ಪಾಲುದಾರರಾದ ನಟರಾಜ್ ಅಮೃತೇಶ್ ಕಲ್ಯಾಣಿ, ರಾಮ್ ಪ್ರದೀಪ್ ಆಚಾರ್, ಹಾಗೂ ಅತಿಥಿಗಳಾದ ಆನಂದ್ ಪರ್ಲ, ರಾಜೇಶ್ ಪಿ.ಎಸ್., ಸತೀಶ್ ಪುತ್ತಿಗೆ ಇವರುಗಳು ದೀಪವನ್ನು ಬೆಳಗಿಸಿದರು.
ಹಿರಿಯ ಉದ್ಯಮಿಗಳಾದ ಶ್ರೀ ಇ. ಕೃಷ್ಣಮೂರ್ತಿ ಕಲ್ಲೇರಿ ಹಾಗೂ ನಿವೃತ್ತ ಅಧ್ಯಾಪಕರಾದ ಯಂ.ನಾಗಪ್ಪ ಗೌಡ ಇವರುಗಳು ಯಂತ್ರವನ್ನು ಚಾಲನೆಗೊಳಿಸಿ ಶುಭ ಹಾರೈಸಿದರು. ಸಂಸ್ಥೆಯ ಮುಖ್ಯ ನಿರ್ದೇಶಕರಾದ ನಟರಾಜ್ ಕಲ್ಯಾಣಿಯವರು ಈ ಸಂಸ್ಥೆಯ ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ರಾಮ್ಪ್ರದೀಪ್ ಆಚಾರ್ ಇವರು ಎಲ್ಲರ ಸಹಕಾರವನ್ನು ಕೋರಿದರು
ಹೀರಿಯರಾದ ರಮೇಶ್ ಉಪಾಧ್ಯಾಯ ಇವರು ನೂತನವಾದ ಈ ಉದ್ದಿಮೆಗೆ ಶುಭವನ್ನು ಹಾರೈಸಿದರು. ಸುಪ್ರಭಾ ಆಚಾರ್, ಗುರುಪ್ರಸಾದ್ ಬಾರ್ಯ, ಶುತಿ ಪ್ರದೀಪ್, ಪ್ರಾರ್ಥನಾ ಕಲ್ಲೂರಾಯ ಇವರು ಅತಿಥಿಗಳನ್ನು ಬರಮಾಡಿಕೊಂಡರು.
ಈ ಕಾರ್ಯಕ್ರಮದಲ್ಲಿ ಮರುವಂತಿಲ ನಾರಾಯಣ ರೈ, ಸುಭಾನ್ ರೈ, ಆಲಂಕಾರು ಮೆಸ್ಕಾಂ ನ ಜೆ ಇ ಯವರಾದ ಗೌತಮ್ ಹಾಗೂ ಜೋಸೆಪ್, ಮಹೇಶ್, ಸಾಗರ್ ವಿದ್ಯುತ್ ಕಂಟ್ರಾಟ್ದಾರರಾದ ಲಿಚಿ ಆಚಾರಿಪಾಲ್, ಉದ್ಯಮಿಗಳಾದ ಜೋಸೆಪ್, ಮಹೇಶ್ ಶೆಣೈ, ಪ್ರಶಾಂತ್ ರೈ, ದೇವದಾಸ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.