ಪುತ್ತೂರು: ಸಂಪ್ಯ, ಕಮ್ಮಾಡಿಯಲ್ಲಿ ಕಳೆದ ವರ್ಷ ಪ್ರಾರಂಭಿಸಲ್ಪಟ್ಟ ಝಹ್ರಬತೂಲ್ ವುಮೆನ್ಸ್ ಕಾಲೇಜ್ (ಶರೀಅತ್, ಪಿಯುಸಿ ಮತ್ತು ಡಿಗ್ರಿ)ಇದರ ಪ್ರಾರಂಭೋತ್ಸವ ಜೂನ್ 19ರಂದು ಸಂಪ್ಯದಲ್ಲಿರುವ ಕಮ್ಮಾಡಿ ಇಸ್ಲಾಮಿಕ್ ಸೆಂಟರ್ನಲ್ಲಿ ನಡೆಯಲಿದೆ. ಸಯ್ಯದ್ ಅಲೀ ತಂಙಳ್ ಕುಂಬೋಳ್ರವರು ಉದ್ಘಾಟಿಸಲಿದ್ದು ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷರು, ಝಹ್ರಬತೂಲ್ ವುಮೆನ್ಸ್ ಕಾಲೇಜಿನ ಅಧ್ಯಕ್ಷರಾಗಿರುವ ಹಾಜಿ ಎಸ್ ಇಬ್ರಾಹಿಂ ಕಮ್ಮಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಧಾರ್ಮಿಕ ಶರೀಅತ್ ಶಿಕ್ಷಣದೊಂದಿಗೆ ಲೌಕಿಕವಾಗಿ ಪಿ.ಯು.ಸಿ ಹಾಗೂ ಡಿಗ್ರಿ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಪ್ರಾರಂಭವಾದ ಈ ಸಂಸ್ಥೆಯು ಈಗಾಗಲೇ ಒಂದು ವರ್ಷ ಪೂರೈಸಿದ್ದು 2019-20ನೇ ಸಾಲಿಗೆ ಈಗಾಗಲೇ ಹಲವಾರು ವಿದ್ಯಾರ್ಥಿನಿಗಳು ದಾಖಲಾತಿ ಮಾಡಿಕೊಂಡಿದ್ದಾರೆ. ಸಮರ್ಥ ಧಾರ್ಮಿಕ ಪಂಡಿತರ ಸಾರಥ್ಯದಲ್ಲಿ ನಡೆಯುತ್ತಿರುವ ಸಂಸ್ಥೆಯಲ್ಲಿ ತರಬೇತಿ ಪಡೆದ ಶಿಕ್ಷಕಿಯರು ತರಗತಿ ನಡೆಸಲಿದ್ದಾರೆ. ಇನ್ನು ಕೆಲವೇ ವಿದ್ಯಾರ್ಥಿನಿಯರಿಗೆ ಅವಕಾಶವಿದ್ದು ಆಸಕ್ತ ವಿದ್ಯಾರ್ಥಿನಿಯರು ಸಂಸ್ಥೆಯ ಕಛೇರಿಗೆ ಭೇಟಿ ನೀಡಿ ದಾಖಲಾತಿ ಪಡೆಯಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.