ನೆಲ್ಯಾಡಿ: ಗೊಳಿತ್ತೊಟ್ಟು ಗ್ರಾಮದ ಶಾಂತಿನಗರ ಅಂಗನವಾಡಿ ಕೇಂದ್ರದಲ್ಲಿ ಕಲಿತ ಮಕ್ಕಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಅಂಗನವಾಡಿ ಮಕ್ಕಳಾದ ಕೌಶಲ್, ಸುಪ್ರೀತ್, ಪೂಜ್ಯಾಶ್ರೀ, ನಿಧಿ, ತನಿಷ್ಕ, ಶ್ರವಣ್, ಪ್ರಾಪ್ತಿರವರ ಪೋಷಕರು ಅಂಗನವಾಡಿಗೆ ಮಿಕ್ಸಿಗ್ರೈಂಡರ್ ಹಾಗೂ ಧೃತಿ, ರಕ್ಷಿತ್ರವರ ಪೋಷಕರು ಕುರ್ಚಿಯನ್ನು ಕೊಡುಗೆಯಾಗಿ ನೀಡಿದರು. ಬಾಲವಿಕಾಸ ಸಮಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಪೋಷಕರು, ಅಂಗನವಾಡಿ ಕಾರ್ಯಕರ್ತೆ ಉಪಸ್ಥಿತರಿದ್ದರು.