ಪೆರಾಬೆ: ಕುಂತೂರು ಬೇಳ್ಪಾಡಿ ಎ ಮತ್ತು ಬಿ ಜುಮಾ ಮಸೀದಿ ವತಿಯಿಂದ ಪ್ರತಿ ತಿಂಗಳ 3ನೇ ಗರುವಾರ ನಡೆಸಿಕೊಂಡು ಬರುವ “ಮಜ್ಲಿಸುನ್ನುರ್” ಅಧ್ಯಾತ್ಮಿಕ ಸಂಗಮವು ಚರಿತ್ರೆ ಪ್ರಸಿದ್ಧವಾದ “ಬೇಳ್ಪಾಡಿ” ಮಖಾಂ ಶರೀಫಿನಲ್ಲಿ ಜೂ.20ರಂದು ಮಗ್ರಿಬ್ ನಮಾಝಿನ ಬಳಿಕ ನಡೆಯಲಿದೆ.
ಈ ಕಾರ್ಯಕ್ರಮದ ನೇತೃತ್ವವನ್ನು ಸಯ್ಯಿದ್ ಎನ್ಪಿಎಮ್ ಫಸಲ್ ಹಾಮಿದ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕುನ್ನುಂಗೈಯವರು ವಹಿಸಲಿದ್ದಾರೆ. ಜುಮಾ ಅತ್ ಅಧ್ಯಕ್ಷ ಅನೀಸ್ ನೂಜಿಲರವರು ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಥಳೀಯ ಖತೀಬ್ ಕೆ.ವಿ. ಮಜೀದ್ ದಾರಿಮಿ ಕುಂಬ್ರರವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸ್ತ್ರೀಯರಿಗೆ ಪ್ರತ್ಯೇಕ ಸ್ಥಳಾವಕಾಶ ವ್ಯವಸ್ಥೆ ಮಾಡಲಾಗಿದೆ. ಕೊನೆಯಲ್ಲಿ ಅನ್ನದಾನ ನಡೆಯಲಿದೆ ಎಂದು ಕಾರ್ಯದರ್ಶಿ ಸಿದ್ದೀಕ್ ಅಲ್ಅಮೀನ್ ತಿಳಿಸಿದ್ದಾರೆ.