HomePage_Banner
HomePage_Banner
HomePage_Banner
HomePage_Banner

ಗೋಳಿತ್ತೊಟ್ಟು ಗ್ರಾ.ಪಂ: ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ

Puttur_Advt_NewsUnder_1
Puttur_Advt_NewsUnder_1
  • ಪ್ರಚಾರದ ಕೊರತೆ-ಗ್ರಾಮಸ್ಥರ ಅಸಮಾಧಾನ

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾ.ಪಂ.ನ 2019-20ನೇ ಸಾಲಿನ ಪ್ರಥಮ ಹಂತದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಜೂ.18ರಂದು ಬೆಳಿಗ್ಗೆ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಕೃಷ್ಣ ಬಿ.,ಯವರು ಅಧ್ಯಕ್ಷತೆ ವಹಿಸಿದ್ದರು.

ಪ್ರಚಾರದ ಕೊರತೆ:
ಉದ್ಯೋಗ ಖಾತರಿ ಯೋಜನೆ ಗ್ರಾಮಸಭೆಯ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ. ಆದ್ದರಿಂದ ಸಭೆಗೆ ಗ್ರಾಮಸ್ಥರು, ಫಲಾನುಭವಿಗಳು ಆಗಮಿಸಿಲ್ಲ ಎಂದು ಗ್ರಾಮಸ್ಥ ಅಬ್ದುಲ್ ಕುಂಞಿ ಕೊಂಕೋಡಿ ಹೇಳಿದರು. ಸಭೆಯ ಬಗ್ಗೆ ಸದಸ್ಯರಿಗೂ ಸರಿಯಾಗಿ ಮಾಹಿತಿ ನೀಡಿಲ್ಲ ಎಂಬ ಆರೋಪವೂ ಕೇಳಿಬಂದಿತ್ತು. ಈ ಹಿಂದೆ ಸಭೆಯ ಬಗ್ಗೆ ಮೈಕದಲ್ಲಿ ಪ್ರಚಾರ, ಕರಪತ್ರ ಮುದ್ರಿಸಿಯೂ ಗ್ರಾಮಸ್ಥರಿಗೆ ಹಂಚಲಾಗುತ್ತಿತ್ತು. ಅಲ್ಲದೇ ಅಂಗಡಿಗಳಲ್ಲೂ ಮಾಹಿತಿ ಸಿಗುತ್ತಿತ್ತು. ಈ ಬಾರಿಯ ಗ್ರಾಮಸಭೆಯ ಬಗ್ಗೆ ಸರಿಯಾಗಿ ಪ್ರಚಾರವೇ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪಿಡಿಒ ನಯನಕುಮಾರಿಯವರು, ಪರಿಶೋಧನೆಯ ವಿಶೇಷ ಗ್ರಾಮಸಭೆ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಣೆ ನೀಡಲಾಗಿದೆ. ಮುಂದಿನ ಬಾರಿ ಮೈಕದಲ್ಲಿ ಪ್ರಚಾರ ಹಾಗೂ ಕರಪತ್ರ ಮುದ್ರಿಸಿ ಹಂಚಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿ.ಪಂ.ಅನುದಾನದ ಬಗ್ಗೆ ಮಾಹಿತಿ ಇಲ್ಲ:
ಆಲಂತಾಯದ ಕೆರೆ ಅಭಿವೃದ್ಧಿ ಕುರಿತಂತೆ ಗ್ರಾಮಸ್ಥ ಅಬ್ದುಲ್ ಕುಂಞಿಯವರು ಮಾಹಿತಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ವಿನೋದ್‌ರವರು ಉದ್ಯೋಗ ಖಾತ್ರಿ ಯೋಜನೆಯ ೨೦ ಲಕ್ಷ ರೂ.ಅನುದಾನದಲ್ಲಿ ಕೆರೆ ಅಭಿವೃದ್ಧಿಗೊಳಿಸಲಾಗಿದೆ ಎಂದರು. ಈ ಯೋಜನೆಗೆ ಜಿ.ಪಂ.ನಿಂದ ಅನುದಾನ ಬಂದಿಲ್ಲವೇ ಎಂದು ಅಬ್ದುಲ್ ಕುಂಞಿಯವರ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷೆ ಶಾಲಿನಿಯವರು, ಕೆರೆ ಆವರಿಸಿದ್ದ ಬಲ್ಲೆ ತೆರವುಗೊಳಿಸಲು ಜಿ.ಪಂ.ನಿಂದ ೧ ಲಕ್ಷ ರೂ.ಅನುದಾನ ಬಂದಿದೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಪಂಚಾಯತ್‌ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದರು. ಜಿ.ಪಂ.ನ ಅನುದಾನದ ಬಗ್ಗೆ ಗ್ರಾ.ಪಂ.ಗೆ ಮಾಹಿತಿ ಇಲ್ಲವೇ ಎಂದು ಅಬ್ದುಲ್ ಕುಂಞಿಯವರು ಮತ್ತೆ ಪ್ರಶ್ನಿಸಿದರು. ಗೋಳಿತ್ತೊಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಇಬ್ಬರು ತಾ.ಪಂ.ಸದಸ್ಯರಿದ್ದು ಅವರ ಅನುದಾನದ ಬಗ್ಗೆ ಗ್ರಾ.ಪಂ.ಗೆ ಮಾಹಿತಿ ನೀಡುತ್ತಾರೆ. ಆದರೆ ಜಿ.ಪಂ.ಅನುದಾನದ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಅಧ್ಯಕ್ಷೆ ಶಾಲಿನಿ ಸ್ಪಷ್ಟಪಡಿಸಿದರು.

ತಡೆಗೋಡೆ ನಿರ್ಮಾಣಕ್ಕೆ ಆಗ್ರಹ:
ತೋಟ ಎಂಬಲ್ಲಿ ತಡೆಗೋಡೆ ಕುಸಿದಿರುವುದರಿಂದ ತೋಡಿನ ಮಳೆನೀರು ಗದ್ದೆಗಳಿಗೆ ನುಗ್ಗುತ್ತಿದೆ. ಇಲ್ಲಿಗೆ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ಭಾಸ್ಕರ ರೈ ತೋಟ ಆಗ್ರಹಿಸಿದರು. ಡೆಬ್ಬೇಲಿ ಎಂಬಲ್ಲಿಯೂ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಾಂತ್ರಿಕ ಸಹಾಯಕ ವಿನೋದ್‌ಕುಮಾರ್‌ರವರು ಹೇಳಿದರು. ಪೊಯ್ಯೋಳೆ ಎಂಬಲ್ಲಿನ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಳಿಸುವಂತೆಯೂ ಗ್ರಾಮಸ್ಥರು ಆಗ್ರಹಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯೋಜನೆಯ ತಾಲೂಕು ಸಂಯೋಜಕ ಚಂದ್ರಶೇಖರ್‌ರವರು, ಯೋಜನೆಯಡಿ ನಿಯಮಾನುಸಾರ ಕಾಮಗಾರಿ ನಿರ್ವಹಿಸಬೇಕು. ಕಾಮಗಾರಿಗೆ ಸಂಬಂಧಪಟ್ಟ ದಾಖಲೆಗಳನ್ನು ಗ್ರಾ.ಪಂ.ಗೆ ನೀಡಬೇಕು. ಕಾಮಗಾರಿ ಪೂರ್ಣಗೊಂಡ ಬಳಿಕ ಕಡ್ಡಾಯವಾಗಿ ನಾಮಫಲಕ ಅಳವಡಿಸಬೇಕೆಂದು ಹೇಳಿದರು. ಉಪಾಧ್ಯಕ್ಷ ಪ್ರಸಾದ್ ಕೆ.ಪಿ.ಸುಲ್ತಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ನಯನಕುಮಾರಿ ಸ್ವಾಗತಿಸಿದರು. ಗ್ರಾಮ ಸಂಪನ್ಮೂಲ ವ್ಯಕ್ತಿ ಜಾನಕಿಯವರು ವರದಿ ಮಂಡಿಸಿದರು. ಗ್ರಾ.ಪಂ.ಸದಸ್ಯರುಗಳಾದ ಮುತ್ತಪ್ಪ ಗೌಡ, ನೀಲಪ್ಪ ನಾಯ್ಕ್, ತುಳಸಿ ಕುದ್ಕೋಳಿ, ಗಾಯಾತ್ರಿರಾಜು, ಭವ್ಯ ಕುಮೇರು ಹಾಗೂ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ನರೇಗಾ ಯೋಜನೆಯ ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಚಂಚಲ, ಸವಿತಾ, ದೀಪಿಕಾ, ರಮೇಶ್ ಪೂಜಾರಿ, ಭಾಸ್ಕರ, ಗ್ರಾ.ಪಂ.ಸಿಬ್ಬಂದಿಗಳಾದ ಪುಷ್ಪಾ ಜಯಂತ್, ದಿನೇಶ್, ಯಶವಂತರವರು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.