HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರು-ಉಪ್ಪಿನಂಗಡಿ ರಸ್ತೆ ಬದಿ ಚರಂಡಿ ಕಾಮಗಾರಿ: ಶಾಂತಿನಗರದಲ್ಲಿ ನೀರಿನ ಪೈಪ್‌ಗೆ ಹಾನಿ – ಪುತ್ತೂರಿಗೆ ನೀರಿಲ್ಲ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆ ಬದಿ ಶಾಂತಿನಗರ ಎಂಬಲ್ಲಿ ಚರಂಡಿ ಹೂಳೆತ್ತುವ ಕಾಮಗಾರಿ ವೇಳೆ ಉಪ್ಪಿನಂಗಡಿ ಕುಮಾರಧಾರ ಹೊಳೆಯಿಂದ ಪುತೂರಿಗೆ ನೀರು ಸರಬರಾಜಾಗುವ ಬೃಹತ್ ಗಾತ್ರ 300 ಎಮ್.ಎಮ್ ವ್ಯಾಸದ ಪೈಪ್‌ಗೆ ಹಾನಿಯಾಗಿದೆ. ಪರಿಣಾಮ ಪುತ್ತೂರು ನಗರಕ್ಕೆ ಇನ್ನೆರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಶಾಂತಿನಗರ ಸಮೀಪ ಲೋಕೋಪಯೋಗಿ ಇಲಾಖೆ ವತಿಯಿಂದ ಚರಂಡಿಯ ಹೂಳೆತ್ತುವ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಪಕ್ಕದಲ್ಲೇ ಹಾದು ಹೋಗಿರುವ ನೀರಿನ ಪೈಪ್‌ಗೆ ಜೆಸಿಬಿ ಕಾಮಗಾರಿಯಿಂದ ಹಾನಿಯಾಗಿದ್ದು, ನೀರು ಸೋರಿಕೆ ಉಂಟಾಗಿದೆ. ಇದರಿಂದ ಪುತ್ತೂರಿಗೆ ನೀರಿನ ಸಂಪರ್ಕ ಕಡಿದು ಹೋಗಿದೆ. ಈಗಾಗಲೇ ಕೇಪುಳುವಿನಲ್ಲಿ ಬರೆ ಕುಸಿದು ನೀರಿನ ಪೈಪ್‌ಗೆ ಹಾನಿಯಾದ ಹಿನ್ನಲೆಯಲ್ಲಿ ಕಳೆದ ಮೂರು ದಿನಗಳಿಂದ ನಗರಸಭೆ ದುರಸ್ತಿ ಕಾರ್ಯ ನಡೆಸುತ್ತಿದ್ದ ಬೆನ್ನಲ್ಲೆ ಇದೀಗ ಶಾಂತಿನಗರದಲ್ಲಿ ಬೃಹತ್ ಗಾತ್ರದ ನೀರಿನ ಪೈಪ್ ಒಡೆದಿರುವುದರಿಂದ ಮತ್ತೆ ಅಲ್ಲಿ ದುರಸ್ತಿ ಕಾರ್ಯ ನಡೆಸಲು ಇನ್ನಷ್ಟು ದಿನಗಳು ಬೇಕಾಗಿರುವುದರಿಂದ ಪುತ್ತೂರು ನರಗರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ. ಸ್ಥಳಕ್ಕೆ ಪುತ್ತೂರು ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅರುಣ್, ನೀರಿನ ವಿಭಾಗದ ಮುಖ್ಯಸ್ಥ ವಸಂತ್ ತೆರಳಿ ಪರಿಶೀಲನೆ ನಡೆಸಿದ್ದಾರೆ.

ನಗರಸಭೆಯಿಂದ ಠಾಣೆಗೆ ದೂರು: ಶಾಂತಿನಗರದಲ್ಲಿ ಚರಂಡಿ ಹೂಳೆತ್ತುವ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ನಡೆಸುತ್ತಿರುವ ವೇಳೆ, ಪಕ್ಕದಲ್ಲೆ ಪುತ್ತೂರಿಗೆ ಸರಬರಾಜು ಆಗುವ ನೀರಿನ ಪೈಪ್ ಇರುವುದರಿಂದ ಕಾಮಗಾರಿ ನಡೆಸುವ ಮೊದಲು ನಗರಸಭೆಗೆ ಮುಂಚಿತವಾಗಿ ತಿಳಿಸಬೇಕಾಗಿತ್ತು. ಹಾಗೆ ಒಂದು ವೇಳೆ ಮಾಹಿತಿ ನೀಡುತ್ತಿದ್ದರೆ ನಗರಸಭೆ ಕಡೆಯಿಂದ ನೀರಿನ ಪೈಪ್ ಹಾದು ಹೋಗುವ ಸ್ಥಳದ ಮಾಹಿತಿ ನೀಡಿ ನೀರಿನ ಪೈಪ್ ಒಡೆಯುವುದನ್ನು ತಪ್ಪಿಸಬಹುದಿತ್ತು. ಆದರೆ ಲೋಕೋಪಯೋಗಿ ಇಲಾಖೆ ನಿರ್ಲಕ್ಷ ವಹಿಸಿದೆ ಎಂದು ನಗರಸಭೆ ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ ಈ ಕುರಿತು ಲೋಕೋಪಯೋಗಿ ಇಲಾಖೆಯ ವಿರುದ್ಧ ನಗರಸಭೆ ಪೊಲೀಸರಿಗೆ ದೂರು ನೀಡಿದ್ದಲ್ಲದೆ ಲೋಕೋಪಯೋಗಿ ಇಲಾಖೆಯೇ ಹಾನಿಗೊಂಡ ಪೈಪ್ ದುರಸ್ತಿ ಮಾಡಿಸಿಕೊಡಬೇಕೆಂದು ತಿಳಿಸಿದೆ.

ಮೂರು ದಿನ ಪುತ್ತೂರಿಗೆ ನೀರಿಲ್ಲ

ಶಾಂತಿನಗರದಲ್ಲಿ ಉಪ್ಪಿನಂಗಡಿ ಕುಮಾರಧಾರ ಹೊಳೆಯಿಂದ 34 ನೆಕ್ಕಿಲಾಡಿ ನೀರಿನ ಘಟಕದಿಂದ ಪುತ್ತೂರಿಗೆ ಕುಡಿಯುವ ನೀರು ಸರಬರಾಜು ಆಗುವ ಪೈಪ್‌ಗೆ ಹಾನಿಯಾದ ಹಿನ್ನಲೆಯಲ್ಲಿ ಅದರ ದುರಸ್ತಿ ಕಾರ್ಯ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಪುತ್ತೂರಿಗೆ ಕುಮಾರಧಾರ ಹೊಳೆಯಿಂದ ಮೂರು ದಿನ ನೀರಿನ ಸರಬರಾಜು ಆಗುವುದಿಲ್ಲ. ನಗರಸಭೆ ವ್ಯಾಪ್ತಿಯಲ್ಲಿ ಅಗತ್ಯದ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ಮತ್ತೆ ಕೆಲವು ಕಡೆ ಕೊಳವೆ ಬಾವಿಯ ನೀರಿನ ಸಂಪರ್ಕ ಒದಗಿಸಲಾಗುವುದು ಬಳಕೆದಾರರು ಸಹಕರಿಸಬೇಕಾಗಿ ವಿನಂತಿ.-ರೂಪಾ ಶೆಟ್ಟಿ ಪೌರಾಯುಕ್ತರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.