ಪುತ್ತೂರು: ನಿವೃತ್ತ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಹಾರಾಡಿ ನಿವಾಸಿ ಎಮ್.ಎಸ್.ವೈದ್ಯ(ಎಮ್.ಸುಬ್ರಹ್ಮಣ್ಯ ವೈದ್ಯ) (72ವ) ಅವರು ಜೂ.18ರಂದು ಸ್ವಗೃಹದಲ್ಲಿ ನಿಧನರಾದರು.
ತಮ್ಮ ನಿವೃತ್ತ ಜೀವನದ ಬಳಿಕ ಅವರು ಮನೆಯಲ್ಲೇ ಹವ್ಯಾಸಿ ಹಸ್ತ ಮುದ್ರಿಕೆ ಜ್ಯೋತಿಷಿಯಾಗಿ ಸೇವೆ ನೀಡುತ್ತಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರಿಯಾರದ ಅವರು ತಮ್ಮ ವೃತ್ತಿ ಬದುಕಿನಲ್ಲಿ ಹಲವಾರು ಕಡೆ ಸೇವೆ ಸಲ್ಲಿಸಿದ್ದಾರೆ. ಉತ್ತಮ ವಾಲಿಬಾಲ್ ಪಟುವಾಗಿದ್ದ ಅವರು ಹಲವರಿಗೆ ವಾಲಿಬಾಲ್ ಮಾರ್ಗದರ್ಶನ ನೀಡಿದ್ದಾರೆ. ಮೃತರು ಪತ್ನಿ ಪರಮೇಶ್ವರಿ, ಪುತ್ರಿ ಸ್ವಪ್ನಾ, ಮೂವರು ಸಹೋದರರು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ನಗರಸಭೆ ಸದಸ್ಯೆ ಪ್ರೇಮಲತಾ ನಂದಿಲ, ಮಾಜಿ ಸದಸ್ಯರಾದ ಜ್ಯೋತಿ ನಾಯಕ್, ರಾಜೇಶ್ ಬನ್ನೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸೇಡಿಯಾಪು ಜನಾರ್ದನ ಭಟ್, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ರಾಮ್ದಾಸ್ ಹಾರಾಡಿ ಸೇರಿದಂತೆ ಹಲವಾರು ಮಂದಿ ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.