HomePage_Banner
HomePage_Banner

ಸಾಜ ಶಾಲೆಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

ಪುತ್ತೂರು ಜೂ.18: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಸಾಜ.ಇದರ ಸುವರ್ಣ ಮಹೋತ್ಸವದ ಅಂಗವಾಗಿ, ಸಾಜ ಆಶ್ರಮ ಶಾಲೆಯಲ್ಲಿ, ದಿನಾಂಕ :18-06-2019ನೇ ಮಂಗಳವಾರ ಬೆಳಿಗ್ಗೆ 9-30 ರಿಂದ ಅಪರಾಹ್ನ ಗಂಟೆ 2-00 ತನಕ ನಿಟ್ಟೆ ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ-ಮಂಗಳೂರು, ಇಲ್ಲಿನ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ತಜ್ಞ ದಂತ ವೈದ್ಯರಿಂದ ಉಚಿತವಾಗಿ ದಂತ ತಪಾಸಣೆ, ಚಿಕಿತ್ಸೆ, ಹಾಗೂ ಹಲ್ಲುಗಳ ರಕ್ಷಣೆ ಕುರಿತಾದ ಕಾನ್ಫರೆನ್ಸ್ ನಡೆಯಿತು. ಅಲ್ಲದೆ ಕ್ರಿಯಾ-ಸಂಚಾರಿ ಆರೋಗ್ಯ ಘಟಕ ಪುತ್ತೂರು ಇದರ ವತಿಯಿಂದ ಆರೋಗ್ಯ ಚಿಕಿತ್ಸೆ ನಡೆಯಿತು.

ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕರಾದ ಶ್ರೀಮತಿ ವಿನಯಾ-ವಸಂತ ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಭೆಯಲ್ಲಿ  APMCಯ ಮಾಜಿ ಅಧ್ಯಕ್ಷರಾದ ಶ್ರೀ ಕೃಷ್ಣ ಪ್ರಸಾದ್ ಭಂಡಾರಿ ಕೂಟೇಲು ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿ, ಶುಭ ಹಾರೈಸಿದರು.ಸಾಜ ಶಾಲಾ ಸುವರ್ಣ ಮಹೋತ್ಸವ ಸಮಿತಿಯ ಗೌರವ ಅಧ್ಯಕ್ಷರಾದ ರಾಧಾಕೃಷ್ಣ ಆಳ್ವ ಸಾಜ, ಅಧ್ಯಕ್ಷರಾದ ಚಂದಪ್ಪ ಪೂಜಾರಿ ಕಾಡ್ಲ,ಗಣೇಶ್ ಭಟ್ ಸುದೆನಡ್ಕ(ಕಾರ್ಯದರ್ಶಿ) ಹಮೀದ್- ಸಾಜ(ಕೋಶಾಧಿಕಾರಿ), ಶ್ರೀಮತಿ ಕೃಷ್ಣವೇಣಿ ಕರುಣಾಕರ ರೈ ಸಾಜ, ಸಂತೋಷ್ ಶೆಟ್ಟಿ ಸಾಜ(ರೋಟರಿ ಅಧ್ಯಕ್ಷರು, ಪುತ್ತೂರು ಸೆಂಟ್ರಲ್) ಶಾಲಾ ಮುಖ್ಯೋಪಾಧ್ಯಾಯಿನಿ  ಜಯಲಕ್ಷ್ಮಿ ಎನ್,ನಿವೃತ್ತ ಶಿಕ್ಷಕರಾದ ಶ್ರೀ ಪ್ರಭಾಕರ ಪೊಳ್ನಾಯ,ನಿಟ್ಟೆ ದಂತ ಚಿಕಿತ್ಸಾಲಯದ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ.ದಿಶಾ,ಡಾ ಆಶಿಶ್, ಡಾ.ಆಶಿಕಾ ರೈ ಸಾಜ,ಹಾಗೂ ಪುತ್ತೂರು ಸಂಚಾರಿ ಆರೋಗ್ಯ ಘಟಕದ ವೈದ್ಯೆ ನಿರುಪಮಾ ಎಸ್.ರೈ.ಸಾಜ ಮೊದಲಾದವರು ಉಪಸ್ಥಿತರಿದ್ದರು. ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ಉಚಿತವಾಗಿ ಹಲ್ಲುಗಳ ತಪಾಸಣೆ ಮತ್ತು ಚಿಕಿತ್ಸೆಯನ್ನು ಮಾಡಲಾಯಿತು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಶಿಬಿರದ ಪ್ರಯೋಜನವನ್ನು ಪಡೆದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.