HomePage_Banner
HomePage_Banner
HomePage_Banner

ಮರ ಬಿದ್ದು ಸ್ಕೂಟರ್‌ಗೆ ಹಾನಿ -ತಪ್ಪಿದ ಭಾರಿ ಅನಾಹುತ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಇಲ್ಲಿನ ಎಪಿಎಂಸಿ ರಸ್ತೆ ಆದರ್ಶ ಆಸ್ಪತ್ರೆಯ ಬಳಿ ರಸ್ತೆ ಬದಿಯಲ್ಲಿದ್ದ ಮರವೊಂದು ಬಿದ್ದ ಘಟನೆ ಜೂ. 19ರ ನಸುಕಿನ ವೇಳೆ ಬೆಳಕಿಗೆ ಬಂದಿದ್ದು, ಘಟನೆಯಿಂದಾಗಿ ಪಾರ್ಕ್ ಮಾಡಿದ್ದ ಸ್ಕೂಟರ್‌ಗೆ ಹಾನಿಯಾಗಿದೆ.

ಆದರ್ಶ ಆಸ್ಪತ್ರೆಯ ರಸ್ತೆ ಬಳಿ ಆಟೋ ರಿಕ್ಷಾ ಪಾರ್ಕ್ ಬಳಿ ಮರವೊಂದು ಬುಡ ಸಮೇತ ಉರುಳಿ ಬಿದ್ದಿದೆ. ಪರಿಣಾಮ ಅಲ್ಲೇ ಪಾರ್ಕ್ ಮಾಡಲಾಗಿದ್ದ ಸ್ಕೂಟರ್‌ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ತಪ್ಪಿದ ಅನಾಹುತ:
ಹಗಲು ಸಮಯ ಆಟೋ ರಿಕ್ಷಾ ಪಾರ್ಕ್‌ನಲ್ಲಿ ನಾಲ್ಕೈದು ರಿಕ್ಷಾಗಳು ಪಾರ್ಕ್ ಮಾಡಲಾಗುತ್ತಿದ್ದು, ಜೊತೆಗೆ ರಸ್ತೆಯಲ್ಲೂ ವಾಹನ ಸಂಚಾರ ಇರುವ ಸಮಯ ಮರ ಬೀಳುತ್ತಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಮರ ರಾತ್ರಿ ಸಮಯ ಬಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಬಿದ್ದ ಮರವನ್ನು ತೆರವು ಗೊಳಿಸುವ ಕಾರ್ಯ ನಡೆದಿದೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.