ಯಾವುದೇ ತೊಂದರೆಯಾಗದಂತೆ ಕ್ರಮದ ಭರವಸೆ
ಪುತ್ತೂರು: ಕರಾವಳಿ ಭಾಗದ ಬಡ ಜನರ ಮೂಲ ಕಸುಬಾದ ಬೀಡಿ ಉದ್ಯಮಕ್ಕೆ ಯಾವುದೇ ರೀತಿಯ ತೆರಿಗೆ ವಿಧಿಸದಂತೆ ಕೋರಿ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ಉದ್ಯಮಿ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಬೀಡಿ ಯೂನಿಯನ್ ಪದಾಧಿಕಾರಿಗಳ ನಿಯೋಗ ಜೂ. 18ರಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಡಿ.ವಿ ಸದಾನಂದ ಗೌಡರಿಗೆ ಮನವಿ ಸಲ್ಲಿಸಿದೆ.
ಮನವಿ ಸ್ವೀಕರಿಸಿ ಮಾತನಾಡಿದ ಡಿ.ವಿ ಸದಾನಂದ ಗೌಡರು ಈ ಬಗ್ಗೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಬಳಿ ಮಾತನಾಡಲಾಗಿದ್ದು ಈ ಸಂಬಂಧ ನಿರ್ಮಲಾ ಸೀತಾರಾಮನ್ ರವರು ಸಭೆ ಕರೆದಿರುವುದಾಗಿ ತಿಳಿಸಿದರು. ಅಲ್ಲದೆ, ಮುಂದಿನ ಬಜೆಟ್ನಲ್ಲಿ ಬೀಡಿ ಉದ್ಯಮಕ್ಕೆ ತೆರಿಗೆಯಿಂದ ವಿನಾಯಿತಿ ನೀಡುವ ಮತ್ತು ಬೀಡಿ ಉದ್ಯಮಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಕುರಿತು ಡಿ.ವಿ. ಭರವಸೆ ನೀಡಿದರು. ಯೂನಿಯನ್ ಮುಂದಾಳುಗಳಾದ ಮುರಳೀಧರ ಶೆಟ್ಟಿ ಮತ್ತು ಜಲೀಲ್ ಉಪಸ್ಥಿತರಿದ್ದರು.