ಪುತ್ತೂರು: ಮಂಜಲ್ಪಡ್ಪು ಬಿ.ಇ.ಯಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ.20ರಂದು ಸಂಜೆ ವೈಟ್ ಡೆಸರ್ಟ್ ಎನ್ನುವ ಅಪೂರ್ವ ರಂಗಪ್ರಯೋಗ ಪ್ರದರ್ಶನಗೊಳ್ಳಲಿದೆ.
ರಾಷ್ಟ್ರೀಯ ನಾಟಕ ಶಾಲೆ ದೆಹಲಿ ಪದವೀದರ ಪ್ರವೀಣ್ ಎಡಮಂಗಲರವರ ನಿರ್ದೇಶನದಲ್ಲಿ ಸಹಪಾಠಿಗಳಾದ ರಾಹುಲ್ ಬಾರಧ್ವಜ್, ರಾಣ ಸಂತೋಷ್, ಚೇತನ್ ಪಡಿಯಾರ್, ಪಲ್ಲವಿ ವಿಜಯ್ ಜಾದವ್ರವರು ಅಭಿನಯಿಸಲಿದ್ದಾರೆ. ರಂಗಪ್ರಯೋಗದ ರಂಗವಿನ್ಯಾಸವನ್ನು ಕಲಾವಿದರಾದ ಚೆನ್ನೈಯ ಭೂಮಿನಾಥನ್, ಓಬಯ್ಯ ಪುತ್ತೂರು ಮತ್ತು ಚೇತನ್ ಪುತ್ತೂರು ವಿನ್ಯಾಸಗೊಳಿಸಲಿದ್ದಾರೆ. ಇನ್ಪೈನೆಟ್ ಆರ್ಟ್ ಫೌಂಡೇಶನ್ ಈ ರಂಗಪ್ರಯೋಗವನ್ನು ಪ್ರಸ್ತುತ ಪಡಿಸುತ್ತಿದೆ. ರಂಗಪ್ರಯೋಗಕ್ಕೆ ರಂಗಾಸ್ತರಿಗೆ ಮುಕ್ತ ಪ್ರವೇಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ.