HomePage_Banner
HomePage_Banner

ಕರ್ನೂರು ಶಾಲಾ ಮಂತ್ರಿ ಮಂಡಲ ರಚನೆ

                                                                                 ಪ್ರಶ್ವಿಕಾ ರೈ
                                                                                 ಅನೂಪ್ ರೈ

ಪುತ್ತೂರು: ನೆಟ್ಟಣಿಗೆ ಮುಡ್ನೂರು (ಕರ್ನೂರು) ಸ.ಹಿ.ಪ್ರಾ ಶಾಲಾ ಸಂಸತ್ ಚುನಾವಣೆಯ ಮೂಲಕ ಮಂತ್ರಿಮಂಡಲವನ್ನು ರಚಿಸಲಾಯಿತು. ಶಾಲಾ ವಿದ್ಯಾರ್ಥಿಗಳು ಮತ ಚಲಾಯಿಸುವ ಮೂಲಕ ನಾಯಕ, ನಾಯಕಿಯನ್ನು ಆಯ್ಕೆ ಮಾಡಲಾಯಿತು. ಶಾಲಾ ಮುಖ್ಯಮಂತ್ರಿಯಾಗಿ 7ನೇ ತರಗತಿಯ ಪ್ರಶ್ವಿಕಾ ರೈ, ಉಪಮುಖ್ಯಮಂತ್ರಿಯಾಗಿ ಅನೂಪ್ ರೈ ಹಿತ್ಲುಮೂಲೆರವರು ಆಯ್ಕೆಗೊಂಡರು.

ವಿರೋಧ ಪಕ್ಷದ ನಾಯಕಿಯಾಗಿ ಫಾತಿಮತ್ ತಸ್ನೀಯಾ, ಶಿಕ್ಷಣಮಂತ್ರಿಯಾಗಿ ಯತೀಕ್ಷಾ ರೈ ಮತ್ತು ಮಹಮ್ಮದ್ ಅಜಮಲ್, ಆರೋಗ್ಯಮಂತ್ರಿಗಳಾಗಿ ಚಂದನ ಜೆ.ಆರ್, ಆಯಿಷತ್ ಮುಬಶಿರಾ, ಕ್ರೀಡಾಮಂತ್ರಿಗಳಾಗಿ ಇಬ್ರಾಹಿಂ ಬಾತಿಷ ಮತ್ತು ಶೈಮಾ ಎ, ಸ್ವಚ್ಛತಾ ಮಂತ್ರಿಯಾಗಿ ಕೀರ್ತೇಶ ಆಳ್ವ ಮತ್ತು ಕೃತಿಕಾ ಜಿ, ಗ್ರಂಥಾಲಯ ಮಂತ್ರಿಗಳಾಗಿ ಆಯಿಷತ್ ಫಮೀಝ ಮತ್ತು ರಾಬಿಯಾ ಬಿ, ತೋಟಗಾರಿಕಾ ಮಂತ್ರಿಗಳಾಗಿ ಮಹಮ್ಮದ್ ಶಮ್ಮಾಸ ಮತ್ತು ರಿಹಾನ, ಸಾಂಸ್ಕೃತಿಕ ಮಂತ್ರಿಗಳಾಗಿ ಮೌಲ್ಯ ರೈ ಮತ್ತು ಮಹೇಶ್ ಬಿ, ಕಾನೂನು ಮಂತ್ರಿಗಳಾಗಿ ಫಾತಿಮ ಅಫ್ರಿ ಮತ್ತು ಮಹಮ್ಮದ್ ಶೈಕ, ರಕ್ಷಣಾ ಮಂತ್ರಿಗಳಾಗಿ ಕೃತಿಕಾ ಕೆ.ಎಂ ಮತ್ತು ಮುತ್ತರಿಬ, ನೀರಾವರಿ ಮಂತ್ರಿಗಳಾಗಿ ಆಯಿಷತ್ ಸಾಜಿದಾ ಮತ್ತು ಶಾಹಿದ ಕೆ, ಹಣಕಾಸು ಮಂತ್ರಿಗಳಾಗಿ ಮಧುರಾ ಎಂ ಮತ್ತು ಚೇತನ್, ಆಹಾರ ಮಂತ್ರಿಗಳಾಗಿ ಆಯಿಷತ್ ರಂಶೀನಾ ಮತ್ತು ಪ್ರವೀಣರವರು ಆಯ್ಕೆ ಮಾಡಲಾಯಿತು.

ಶಾಲಾ ಮುಖ್ಯಗುರು ಸಾವಿತ್ರಿ ಕೆ.ರವರ ಮಾರ್ಗದರ್ಶನದಲ್ಲಿ ಶಿಕ್ಷಕರಾದ ರೇಷ್ಮಾ ಜೆ.ಇ, ದೀಪಾ, ಭವ್ಯ, ಅಕ್ಷತಾ, ರಮೇಶ್ ಶಿರ್ಲಾಲ್‌ರವರು ಮಂತ್ರಿಮಂಡಲದ ರಚನೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.