HomePage_Banner
HomePage_Banner
HomePage_Banner
Breaking News

ವಿಶ್ವಕರ್ಮ, ಕಾಳಿಕಾಂಬಾ ಸಂಘದ ವಾರ್ಷಿಕ ಸಭೆ

Puttur_Advt_NewsUnder_1
Puttur_Advt_NewsUnder_1


ಉಪ್ಪಿನಂಗಡಿ: ವಿಶ್ವಕರ್ಮ ಸಮಾಜ ಸೇವಾ ಸಂಘ ಮತ್ತು ಕಾಳಿಕಾಂಬಾ ಮಹಿಳಾ ಸಂಘ ಉಪ್ಪಿನಂಗಡಿ ಇದರ ವಾರ್ಷಿಕ ಮಹಾ ಸಭೆಯು ಇಲ್ಲಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.

ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಹರೀಶ ಆಚಾರ್ಯ ಮದ್ದಡ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುರಳೀಧರ ಆಚಾರ್ಯ ಹಾಗೂ ಶ್ರೀಮತಿ ಶಶಿಕಲಾ ಅಶೋಕ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಿ. ಹರಿಶ್ಚಂದ್ರ ಆಚಾರ್ಯ, ಕುಸುಮಾ ಹರಿಶ್ಚಂದ್ರ ಆಚಾರ್ಯ, ಏನೆಕಲ್ಲು ಧನಂಜಯ ಆಚಾರ್ಯ, ತಾ.ಪಂ. ಸದಸ್ಯೆ ಸುಜಾತಕೃಷ್ಣ ಆಚಾರ್ಯ, ಕೃಷ್ಣಯ್ಯ ಆಚಾರ್ಯ, ಪೂರ್ವಾಧ್ಯಕ್ಷರಾದ ಮಾಧವ ಆಚಾರ್ಯ, ಎನ್.ಸಿ. ಸೀತಾರಾಮ ಆಚಾರ್ಯ, ಜನಾರ್ದನ ಆಚಾರ್ಯ ಕಾಣಿಯೂರು, ಎಸ್.ಎನ್. ಜಗಧೀಶ ಆಚಾರ್ಯ, ವಸಂತ ಆಚಾರ್ಯ, ಶ್ರೀಧರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

2019-20 ನೇ ಸಾಲಿಗೆ ಹಿಂದಿನ ಕಾರ್ಯಕಾರಿ ಸಮಿತಿಯನ್ನು ಪುನರಾಯ್ಕೆ ಮಾಡಲಾಯಿತು. ರವಿ ಶಿಲ್ಪಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಶ್ರೇಯಾ ಪ್ರಾರ್ಥಿಸಿದರು. ವಿಶ್ವಕರ್ಮ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಹರೀಶ್ ಆಚಾರ್ಯ ಪುಳಿತ್ತಡಿ ಹಾಗೂ ಕಾಳಿಕಾಂಬಾ ಮಹಿಳಾ ಸಂಘದ ಕಾರ್ಯದರ್ಶಿ ಸೌಮ್ಯs ಸತೀಶ ಆಚಾರ್ಯ ಕೆಮ್ಮಾರ ವರದಿ ಮಂಡಿಸಿದರು. ಕೋಶಾಧಿಕಾರಿಗಳಾದ ಹರೀಶ ಆಚಾರ್ಯ ಬಾರ್ಯ ಹಾಗೂ ಸುಪ್ರಿಯಾ ರಮೇಶ್ ಆಚಾರ್ಯ ಇಳಂತಿಲ ಲೆಕ್ಕಪತ್ರ ಮಂಡಿಸಿದರು. ಕುಮಾರಿ ಶ್ರೇಯಾ ಪ್ರಾರ್ಥಿಸಿದರು. ಯಶೋಧರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.